ರಂಜಿತ್ ನಿಶ್ಚಿತಾರ್ಥದಲ್ಲಿ ಭವ್ಯ ಗೌಡ ಮದುವೆ ಸಿಕ್ರೇಟ್ ರಿವೀಲ್: ಹುಡುಗ ಯಾರು?
ಕನ್ನಡ ಕಿರುತೆರೆ ನಟ ಹಾಗೂ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ನಿನ್ನೆ ಅಂದರೆ ಮಾರ್ಚ್ 06 ಗುರುವಾದ ಪ್ರೀತಿಸಿದ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಂಜಿತ್ ಅವರು ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯ ಹೆಸರು ಮಾನಸ ಗೌಡ ಆಗಿದ್ದು, ಇವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದಾರೆ.
ರಂಜಿತ್ ಹಾಗೂ ಮಾನಸ ಗೌಡ ನಿಶ್ಚಿತಾರ್ಥದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಬಹುತೇಕ ಎಲ್ಲಾ ಸ್ಪರ್ಧಿಗಳು ಭಾಗಿಯಾಗಿದ್ದು, ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಶುಭಹಾರೈಸಿದ್ದಾರೆ. ಶಿಶಿರ್, ಐಶ್ವರ್ಯಾ ಸಿಂಧೋಗಿ, ಮೋಕ್ಷಿತಾ ಪೈ, ಭವ್ಯಾ ಗೌಡ ಸೇರಿದಂತೆ ಧಾರಾವಾಹಿ ನಟ-ನಟಿಯರು ಹಾಗೂ ಕೆಲವೇ ಆಪ್ತರಷ್ಟೇ ರಂಜಿತ್ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದಾರೆ.

ಇನ್ನು ನಟ ರಂಜಿತ್ ನಿಶ್ಚಿತಾರ್ಥದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಭವ್ಯಾ ಗೌಡ ಅವರ ಮದುವೆ ಬಗ್ಗೆ ಕೂಡ ಬಿಗ್ ಅಪ್ಡೇಟ್ ಸಿಕ್ಕಿದೆ. ಈ ಬಗ್ಗೆ ಸ್ವತಃ ರಂಜಿತ್ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ನನ್ನದು ಮಗಿಯಿತು, ಮುಂದೆ ಭವ್ಯಾ ಗೌಡ ಅವರ ಮದುವೆ. ಭವ್ಯ ಕೂಡ ರೆಡಿಯಾಗುತ್ತಿದ್ದಾರೆ. ಹುಡುಗನಿಗೂ ಕೇಳಿದ್ದೇನೆ ಎಂದಿದ್ದಾರೆ.
ಈ ವೇಳೆ ಹುಡುಗ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ರಂಜಿತ್, ಇನ್ನೂ ಹುಡುಕುತ್ತಿದ್ದೇವೆ. ಇವರಿಗೆ ಹುಡುಕ ಬೇಕು ಅಂದರೆ ಅವನು ಇನ್ನೂ ನೆಕ್ಸ್ಟ್ ಲೆವೆಲ್ ರೌಡಿಯಾಗಿರಬೇಕು. ಇಬ್ಬರೂ ಹೊಡೆದಾಡಿಕೊಂಡಿರಬೇಕು ಎಂದು ರಂಜಿತ್ ಹೇಳುತ್ತಿದ್ದಂತೆ ಭವ್ಯ ಗೌಡ ಸುಮ್ಮನಿರಿ ರಂಜಿತ್, ಆಮೇಲೆ ಸಿಗುವವರು ಸಿಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಂಜಿತ್ ಹೌದು, ಭವ್ಯಾ ಗೌಡ ತುಂಬಾ ಒಳ್ಳೆ ಹುಡುಗಿ, ಅಡುಗೆ ತುಂಬಾ ಚೆನ್ನಾಗಿ ಕಲಿತಿದ್ದಾಳೆ. ಚೆನ್ನಾಗಿ ಅಡುಗೆ ಮಾಡಿ ಹಾಕುತ್ತಾಳೆ ಎಂದು ರಂಜಿತ್ ಎಲ್ಲರ ಎದುರು ಭವ್ಯಾ ಗೌಡ ಕಾಲೆಳೆದಿದ್ದಾರೆ.

ಇನ್ನು ಭವ್ಯ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 11ರ ಮಹಿಳಾ ಸ್ಪರ್ಧಿಗಳಲ್ಲಿ ಅತ್ಯಂತ ಸ್ಟ್ರಾಂಗ್ ಸ್ಪರ್ಧಿಯಾಗಿದ್ದರು. ಯಾವುದೇ ಆಟಗಳಿದ್ದರೂ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದು, ಹುಡುಗರಿಗೂ ಕಠಿಣ ಸ್ಪರ್ಧೆ ಕೊಡುತ್ತಿದ್ದ ಭವ್ಯ ಗೌಡ ಟಾಪ್ ಆರು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮಹಿಳಾ ವಿನ್ನರ್ ಆದರೆ ಅದು ಭವ್ಯ ಗೌಡ ಎಂದು ಪ್ರೇಕ್ಷಕರು ಊಹಿಸಿದ್ದರು. ಆದರೆ ಐದನೇ ರನ್ನರ್ ಅಪ್ ಆಗಿ ಭವ್ಯ ಗೌಡ ಬಿಗ್ ಬಾಸ್ ಮನೆಯಿಂದ ಹೊರ ಬಂದರು.












Click it and Unblock the Notifications