Bigg Boss Kannada 13: ಕಿರಣ್ ಶಾಸ್ತ್ರಿಗೆ ಬಿಗ್ ಶಾಕ್: ಇನ್ನಿಬ್ಬರು ಸ್ಪರ್ಧಿಗಳು "EMERGENCY EXIT!' ಹೊಸ ಪ್ರೋಮೋದಲ್ಲೇನಿದೆ

Bigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್ 13 ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಈ ವಾರದ ಕಳಪೆ ಯಾರು ಅಂತ ಹೆಸರು ಸೂಚಿಸುವಂತೆ ಟಾಸ್ಕ್ ಕೊಡಲಾಗಿದೆ. ಈ ಟಾಸ್ಕ್‌ನಲ್ಲಿ ಹಲವರು ಕಿರಣ್ ಶಾಸ್ತ್ರಿ ಅವರ ಹೆಸರು ತೆಗೆದುಕೊಂಡಿದ್ದಾರೆ. ಇನ್ನು ಬಿಗ್‌ಬಾಸ್ (Bigg Boss Kannada 13) ಕನ್ನಡ ಸೀಸನ್ 13ರಲ್ಲಿ ಯಾರೂ ನಿರೀಕ್ಷೆಯೇ ಮಾಡದೆ ಇರುವ "EMERGENCY EXIT!' ಆಗಿದೆ. ಅವರು ವಾರದ ಮಧ್ಯೆ ನಡೆದ ಎಮರ್ಜೆನ್ಸಿ ಎಕ್ಸಿಟ್ ಪ್ರಕ್ರಿಯೆಯಲ್ಲಿ ತಾಂಡವ್ ರಾಮ್ ಅವರು ಹೊರಗೆ ಹೋಗಿರುವಂತೆ ತೋರಿಸಲಾಗಿದೆ. ಆದರೆ ಇದರೊಂದಿಗೆ ಇದೀಗ ಮತ್ತೊಂದು ಎಮರ್ಜೆನ್ಸಿ ಎಕ್ಸಿಟ್ ನಡೆಯಲಿದ್ದು, ಇನ್ನಿಬ್ಬರು ಬಿಗ್‌ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ಎಲ್ಲರೂ ಕಿರಣ್ ಶಾಸ್ತ್ರಿ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮೂರನೇ ವಾರದಲ್ಲಿ ಈ ಹಿಂದಿನ ಸೀಸನ್‌ಗಳಿಗಿಂತಲೂ ಭಿನ್ನವಾದ ಟಾಸ್ಕ್‌ಗಳು ನಡೆದಿವೆ. ಅದರಲ್ಲಿ ಮುಖ್ಯವಾಗಿ ಮಿಡ್ ವೀಕ್ ಎಲಿಮಿನೇಟ್‌ ಪ್ರಕ್ರಿಯೆಯು ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್ ನೀಡಿದೆ. ಇದರೊಂದಿಗೆ ವಾರದ ಕಥೆ ಕಿಚ್ಚ ಸುದೀಪ್ ಜೊತೆ ಪ್ರಾರಂಭವಾಗುವುದಕ್ಕೂ ಮುಂಚೆಯೇ ಮತ್ತೊಂದು ಮಹತ್ವದ ಟಾಸ್ಕ್‌ ಕೊಡಲಾಗಿದೆ. ಈ ಟಾಸ್ಕ್‌ನಲ್ಲಿ ಬಹುತೇಕ ಎಲ್ಲ ಸ್ಪರ್ಧಿಗಳು ಕಿರಣ್ ಶಾಸ್ತ್ರಿ ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ.

Bigg Boss Kannada 13 Big Shock Kiran Shastri 2 More Contestants Face Emergency Exit What New Promo

Bigg Boss Kannada 13: ಈ ವಾರದ ಕಳಪೆ ಯಾರು ಎನ್ನುವ ಟಾಸ್ಕ್‌

ಇನ್ನು ಬಿಗ್‌ಬಾಸ್ ಕನ್ನಡ ಸೀಸನ್‌ 13ರ ಮೂರನೇ ವಾರದಲ್ಲಿ ವಾರದ ಕಳಪೆ ಯಾರಿಗೆ ಕೊಡುತ್ತೀರಿ ಎಂದು ಕೇಳಲಾಗಿದ್ದು, ಹಲವರು ಕಿರಣ್ ಶಾಸ್ತ್ರಿ ಅವರು ಹೆಸೆರು ತೆಗೆದುಕೊಂಡಿದ್ದಾರೆ. ಲಿಖಿತ್ ಗೊಂದಿ, ಅವಿನಾಶ್ ಷಠಮರ್ಷಣ್ ಹಾಗೂ ಮಂಜು ಅವರು ಕಿರಣ್ ಶಾಸ್ತ್ರಿ ಅವರ ಹೆಸರು ಹೇಳಿದ್ದಾರೆ. ದೇವಿ ಬಳಿ ಎಲ್ಲ ವರವನ್ನೂ ಅವನೇ ಕೇಳುತ್ತಿದ್ದಾನೆ. ನಮಗೆ ಏನೂ ವರ ಸಿಕ್ಕಿಲ್ಲ ಅಂತ ಲಿಖಿತ್ ಹೇಳಿದ್ದಾರೆ.

ಮಂಜು ಅವರು, ಆ ತಾಯಿಯನ್ನೂ ಸಹ ತಮ್ಮ ಆಟದ ಸ್ವಾರ್ಥಕ್ಕಾಗಿ ಬಳಸಿಕೊಂಡ ಕೆಟ್ಟ ಯೋಚನೆಯುಳ್ಳ ಕಳ್ಳ ಕಿರಣ ಅಂತ ಹೇಳುವುದಕ್ಕೆ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ನನಗೆ ಲೋ ಬಜೆಟ್ ವೈಷ್ಣವಿ ಅಂತ ಹೇಳಿದ್ದು, ಖಂಡಿತವಾಗಿಯೂ ನನಗೆ ತುಂಬಾನೇ ಬೇಜಾರಾಯ್ತು ಅಂತ ವೈಷ್ಣವಿ ಹೇಳಿದ್ದಾರೆ. ಸೌಂದರ್ಯ ಅವರು ಸಹ ಸೇಡು ತೀರಿಸಿಕೊಂಡಿದ್ದಾರೆ. ಈ ಹಿಂದಿನ ಟಾಸ್ಕ್‌ನಲ್ಲಿ ಸೌಂದರ್ಯ ಅವರ ಶೇ 50ರಷ್ಟು ವೋಟ್‌ಗಳನ್ನು ಕಿರಣ್ ಶಾಸ್ತ್ರಿ ಅವರು ತೆಗೆದುಕೊಂಡಿದ್ದರು.

ಇವೊತ್ತು ನನ್ನ ಅಣ್ಣ ಹೇಗಾದರೂ ಅಲ್ಲಿಂದ ಹೊರಗೆ ಬರ್ತಾನೆ ಅಂದುಕೊಂಡು.. ನನಗೆ ನಂಬಿಕೆ ಇರುವುದರಿಂದ ಕಿರಣ್ ಶಾಸ್ತ್ರಿ ಅವರನ್ನು ಜೈಲಿಗೆ ಕಳುಹಿಸಬೇಕೆಂದು ವಿನಂತಿ ಅಂತ ಟಾಂಗ್‌ ಕೊಟ್ಟಿದ್ದಾರೆ. ಸ್ಪರ್ಧಿಗಳ ಮಾತಿಗೆ ಪ್ರತಿಕ್ರಿಯೆ ಕೊಟ್ಟಿರುವ ಕಿರಣ್ ಶಾಸ್ತ್ರಿ ಅವರು, ಬೊಗಳೋರು ಬೊಗಳ್ರಿ ಬೆಳೆಯೋರು ಬೆಳೆಯುತ್ತೀವಿ. ನೀವು ಅಲ್ಲೇ ನಾವು ಇಲ್ಲೇ ಅಂತ ಹೇಳಿದ್ದಾರೆ. ಹಲವು ಸ್ಪರ್ಧಿಗಳು ಕಿರಣ್ ಶಾಸ್ತ್ರಿ ಅವರಿಗೆ ವಾರದ ಕಳಪೆ ಅಂತ ಬಿರುದು ಕೊಟ್ಟ ಮೇಲೆ ಅವರು ಬಿಗ್‌ಬಾಸ್ ನಿಯಮದಂತೆ ಬಿಗ್‌ಬಾಸ್ ಮನೆಯಲ್ಲಿರುವ ಜೈಲು ಸೆಲ್‌ಗೆ ಹೋಗಿದ್ದಾರೆ. ಯಶಸ್ ಕೃಷ್ಣ ಸೇರಿದಂತೆ ಹಲವರು ಯಾರ ಹೆಸರು ತೆಗೆದುಕೊಂಡಿರುವುದು ಪೂರ್ತಿ ಪ್ರೋಮೋದಲ್ಲಿ ಇಲ್ಲ. ಇನ್ನಷ್ಟು ಹೊಸ ವಿಷಯಗಳು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+