Gilli: ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಗೃಹ ಸಚಿವ ಜಿ.ಪರಮೇಶ್ವರ್ ಅಭಿನಂದನೆ
ಬಿಗ್‌ಬಾಸ್ ಕನ್ನಡ ಸೀಸನ್-12ರ ವಿಜೇತ ನಟ ಗಿಲ್ಲಿ ನಟ ಅವರು ರಾಜ್ಯದ ಗೃಹಸಚಿವರಾದ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಗೃಹ ಸಚಿವರು ಗಿಲ್ಲಿ ನಟ ಅವರನ್ನು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಭವ್ಯವಾಗಿ ಸನ್ಮಾನಿಸಿದರು. ಬಿಗ್‌ಬಾಸ್ ವಿಜೇತರಾಗಿ ಹೊರಹೊಮ್ಮಿದ್ದಕ್ಕೆ ಗಿಲ್ಲಿಗೆ ಅಭಿನಂದಿಸಿದರು.
ಗ್ರಾಮೀಣ ಹಿನ್ನೆಲೆ, ಹಳ್ಳಿ ಸೊಗಡಿನ ಮಾತು, ವಿಶಿಷ್ಟ ಹಾಸ್ಯ ಶೈಲಿ ಹಾಗೂ ಸಹಜ ಅಭಿನಯದ ಮೂಲಕ ನಾಡಿನ ಜನತೆಯ ಮನಗೆದ್ದಿರುವ ಗಿಲ್ಲಿ ಬಿಗ್‌ಬಾಸ್ ಕನ್ನಡದ 12ನೇ ಆವೃತ್ತಿಯಲ್ಲಿ ಆರಂಭದಿಂದ ಅಂತ್ಯದವರೆಗೆ ಗಮನ ಸೆಳೆದಿದ್ದರು. ಸರಳ ವ್ಯಕ್ತಿತ್ವ, ಸ್ಪಷ್ಟ ಅಭಿಪ್ರಾಯ ಮತ್ತು ಮನರಂಜನೆಯ ಜೊತೆಗೆ ಆಟದ ಮೂಲಕ ಅವರು ಪ್ರೇಕ್ಷಕರ ಅಪಾರ ಬೆಂಬಲ ಪಡೆದು ವಿಜೇತ ಪಟ್ಟವನ್ನು ಅಲಂಕರಿಸಿದ್ದರು. ಈ ಸಾಧನೆಯನ್ನು ಮನಗಂಡ ಜಿ.ಪರಮೇಶ್ವರ್ ಅವರು, ಗಿಲ್ಲಿಯ ಪ್ರತಿಭೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಮತ್ತಷ್ಟು ಯಶಸ್ಸು ಲಭಿಸಲಿ
"ವಿಶಿಷ್ಟ ಹಾಸ್ಯದ ಮೂಲಕ ನಾಡಿನ ಜನತೆಯನ್ನು ಮನರಂಜಿಸುತ್ತಿರುವ ಹಳ್ಳಿ ಸೊಗಡಿನ ಪ್ರತಿಭೆ 12ನೇ ಆವೃತ್ತಿಯ ಬಿಗ್‌ಬಿಗ್ ಬಾಸ್ ವಿಜೇತ ನಟ ಗಿಲ್ಲಿ ನಟರಾಜ್ ಅವರಿಗೆ ಮತ್ತಷ್ಟು ಯಶಸ್ಸು ಲಭಿಸಲಿ. ಹಾಸ್ಯ ಮತ್ತು ಹಳ್ಳಿ ಸೊಗಡಿನ ಮೂಲಕ ನಾಡಿನ ಜನರನ್ನು ಮನರಂಜಿಸುವ ನಿಮ್ಮ ಪ್ರತಿಭೆ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸು, ಅವಕಾಶಗಳು ದೊರೆಯಲಿ" ಎಂದು ಹಾರೈಸಿದರು.
ಬಿಗ್‌ಬಾಸ್ ವಿಜೇತನಾದ ಬಳಿಕ ಗಿಲ್ಲಿ ನಟರಾಜ್ ಅವರನ್ನು ಅಭಿನಂದಿಸುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ರಾಜಕೀಯ, ಸಾಂಸ್ಕೃತಿಕ ಹಾಗೂ ಹಿರಿಯ ಕಲಾವಿದರು ಅವರನ್ನು ಭೇಟಿ ಮಾಡಿ ಗೌರವ ಸಲ್ಲಿಸುತ್ತಿದ್ದಾರೆ. ಗೃಹಸಚಿವರೊಂದಿಗೆ ನಡೆದ ಈ ಭೇಟಿ ಅದರಲ್ಲೂ ವಿಶೇಷ ಗಮನ ಸೆಳೆದಿದೆ.

ಈ ಭೇಟಿಯ ಸಂದರ್ಭದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು "ಹಳ್ಳಿ ಪ್ರತಿಭೆಗೆ ಸಿಕ್ಕ ಗೌರವ", "ಸರಳತೆಯ ಗೆಲುವು" ಎಂದು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಗಿಲ್ಲಿ ನಟರಾಜ್ ಅವರ ಮುಂದಿನ ಸಿನಿ ಹಾಗೂ ಮನರಂಜನಾ ಕ್ಷೇತ್ರದ ಪ್ರಯಾಣಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್-12ರ ಮೂಲಕ ಕರ್ನಾಟಕದ ಮನೆಮಾತಾಗಿರುವ ಗಿಲ್ಲಿ ನಟರಾಜ್ ಅವರಿಗೆ ದೊರಕುತ್ತಿರುವ ಈ ಗೌರವಗಳು, ಹಳ್ಳಿ ಪ್ರತಿಭೆಯ ಶಕ್ತಿ ಮತ್ತು ಜನ ಪ್ರೀತಿಯ ಪ್ರತಿಬಿಂಬ ಎಂದು ಕರೆಯಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗಿಲ್ಲಿ, ರಿಯಾಲಿಟಿ ಶೋಗಳಿಂದ ಜನಪ್ರಿಯರಾಗಿದ್ದಾರೆ. ಬಿಗ್‌ಬಾಸ್ ಆರಂಭದಿಂದಲೂ ಗಿಲ್ಲಿ ಗಮನ ಸೆಳೆದಿದ್ದರು. ಗ್ರ್ಯಾಂಡ್ ಫಿನಾಲೆಗೂ ಮುನ್ನವೇ ಜನ ಬಿಗ್‌ಬಾಸ್ ಗೆಲ್ಲೋದು ಗಿಲ್ಲಿನೇ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಗಿಲ್ಲಿ ಬಿಗ್‌ಬಾಸ್ ಟ್ರೋಫಿ ಕೈಗೆತ್ತಿಕೊಂಡರು. ಇದಾದ ಬಳಿಕ ಗಿಲ್ಲಿ ನಟ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅವರ ನಿವಾಸಗಳಿಗೆ ತೆರಳಿ ಭೇಟಿಯಾಗಿದ್ದರು. ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಗಿಲ್ಲಿ ಭೇಟಿಯಾಗಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಗಿಲ್ಲಿಗೆ ಅಭಿನಂದಿಸಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications