Gilli: ಬಿಗ್‌ಬಾಸ್ ವಿನ್ನರ್ ಗಿಲ್ಲಿಯನ್ನ ಕೈದಿಯಂತೆ ಕರೆತಂದ ಪೊಲೀಸರು, ವಿಡಿಯೋ ವೈರಲ್
ಬಿಗ್‌ಬಾಸ್ ಕನ್ನಡ ಸೀಸನ್-12ರ ವಿಜೇತರಾದ ಬಳಿಕ ಗಿಲ್ಲಿ ಜೀವನವೇ ಸಂಪೂರ್ಣವಾಗಿ ಬದಲಾಗಿದೆ. ರಿಯಾಲಿಟಿ ಶೋ ಮೂಲಕ ಮನೆಮಾತಾಗಿರುವ ಗಿಲ್ಲಿಗೆ ಇದೀಗ ಎಲ್ಲೆಡೆ ಅಪಾರ ಜನಪ್ರಿಯತೆ ಸಿಕ್ಕಿದ್ದು, ಅವರು ಕಾಣಿಸಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮವೂ ಅಭಿಮಾನಿಗಳ ಪಾಲಿಗೆ ಹಬ್ಬದಂತಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ನಡೆಯುವ ಸಾಂಸ್ಕೃತಿಕ, ಮನರಂಜನಾ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಗಿಲ್ಲಿಯೇ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗುತ್ತಿದ್ದು, ಅವರ ಆಗಮನ ವೇದಿಕೆಯ ಆಕರ್ಷಣೆಯಾಗುತ್ತಿದೆ.
ಗಿಲ್ಲಿಯನ್ನು ನೇರವಾಗಿ ನೋಡಬೇಕು, ಕೈಕುಲುಕಬೇಕು, ಸೆಲ್ಫಿ ತೆಗೆದುಕೊಳ್ಳಬೇಕು ಎನ್ನುವ ಅಭಿಮಾನಿಗಳ ಆಸೆ ಕಾರಣದಿಂದ ಕಾರ್ಯಕ್ರಮದ ಸ್ಥಳಗಳಲ್ಲಿ ಭಾರೀ ಜನಸಂದಣಿ ಸೇರುತ್ತಿದೆ. ಕೆಲವೊಮ್ಮೆ ಜನಸಮೂಹ ಅತಿಯಾಗಿ ಹೆಚ್ಚಾಗುವ ಕಾರಣ ಗಿಲ್ಲಿಗೆ ಕಾರ್ಯಕ್ರಮದೊಳಗೆ ಮುಕ್ತವಾಗಿ ಸಂಚರಿಸುವುದೇ ಕಷ್ಟವಾಗುತ್ತಿದೆ. ಅಭಿಮಾನಿಗಳ ಉತ್ಸಾಹ ನಿಯಂತ್ರಣಕ್ಕೆ ಬರದ ಸಂದರ್ಭಗಳಲ್ಲಿ ಪೊಲೀಸರಿಗೆ ಮಧ್ಯಪ್ರವೇಶಿಸಿ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗಿಲ್ಲಿಯ ಸುತ್ತ ಹಲವಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲಾಗುತ್ತಿದೆ.

ಪೊಲೀಸರಿಗೂ ಜೋಕ್ ಮಾಡಿದ ಗಿಲ್ಲಿ
ಇತ್ತೀಚೆಗೆ ಇಂತಹದ್ದೇ ಒಂದು ಕಾರ್ಯಕ್ರಮದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಗಿಲ್ಲಿಯನ್ನು ಕಾರ್ಯಕ್ರಮದಿಂದ ಹೊರಗೆ ಕರೆತರುವಾಗ ಪೊಲೀಸರು ಸುತ್ತುವರಿದು ಕರೆದೊಯ್ಯುತ್ತಿರುವುದು ಕಾಣಿಸುತ್ತದೆ. ಕೆಲವರು ಇದನ್ನು 'ಕಳ್ಳನನ್ನು ಕರೆತಂದಂತೆ' ಎಂದು ಹಾಸ್ಯಮಾಡಿಕೊಂಡರೂ, ಆ ಕ್ಷಣದಲ್ಲೂ ಗಿಲ್ಲಿ ತಮ್ಮ ಸಹಜ ಸರಳತೆ ಮತ್ತು ನಗುಮುಖವನ್ನು ಕಳೆದುಕೊಳ್ಳಲಿಲ್ಲ. ಅಲ್ಲಿಯೂ ಗಿಲ್ಲಿ ಪೊಲೀಸರೊಂದಿಗೆ ಹಾಸ್ಯವಾಗಿ ಮಾತನಾಡಿ ಜೋಕ್ ಮಾಡಿದ್ದಾರೆ. ಗಿಲ್ಲಿಯ ಮಾತುಗಳಿಗೆ ಅಲ್ಲಿದ್ದ ಪೊಲೀಸರು ಕೂಡ ನಗು ತಡೆಯಲಾಗದೆ, ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು, ಆ ಕ್ಷಣಗಳು ಅಲ್ಲಿದ್ದವರ ಗಮನ ಸೆಳೆದಿವೆ.
ಕಾರ್ಯಕ್ರಮವೊಂದರಿಂದ ಗಿಲ್ಲಿಯನ್ನು ಪೊಲೀಸರು ಹೊರಗೆ ಕರೆದುಕೊಂಡು ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆ ದೃಶ್ಯದಲ್ಲಿ ಗಿಲ್ಲಿಯನ್ನು ಕಳ್ಳನನ್ನು ಕರೆತಂದಂತೆ ಪೊಲೀಸರು ಸುತ್ತುವರಿದು ಕರೆತರುತ್ತಿರುವುದು ಕಂಡುಬಂದಿದ್ದು, ಇದಕ್ಕೆ ನೆಟ್ಟಿಗರು ವಿಭಿನ್ನ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲೂ ತಮ್ಮ ಸರಳತೆ ಮತ್ತು ಹಾಸ್ಯಭಾವವನ್ನು ಕಾಪಾಡಿಕೊಂಡ ಗಿಲ್ಲಿ, ಪೊಲೀಸರೊಂದಿಗೆ ಜೋಕ್ ಮಾಡಿ ನಗು ತಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಗಿಲ್ಲಿಗೆ ಕಳಪೆ ಕೊಟ್ಟು ಜೈಲಿಗೆ ಎಳ್ಕೊಂಡು ಹೋದಂಗ್ ಹೋಗ್ತಾ ಇದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಬಿಗ್‌ಬಾಸ್ ಗೆಲುವಿನ ಬಳಿಕ ಗಿಲ್ಲಿಯ ಕ್ರೇಜ್ ದಿನೇದಿನೇ ಹೆಚ್ಚುತ್ತಿದ್ದು, ಅಭಿಮಾನಿಗಳ ಅಪಾರ ಪ್ರೀತಿಯ ಜೊತೆಗೆ ಪೊಲೀಸರು ಕೂಡ ಅವರ ಸುರಕ್ಷತೆಗೆ ಹೆಚ್ಚುವರಿ ಶ್ರಮವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗಿಲ್ಲಿಯ ಈ ನಡೆ ಅಭಿಮಾನಿಗಳ ಹೃದಯ ಗೆದ್ದಿದ್ದು, ಅವರ ಜನಪ್ರಿಯತೆಗೆ ಇನ್ನಷ್ಟು ಮೆರುಗು ತಂದಿದೆ. ಸೆಲೆಬ್ರಿಟಿಯಾಗಿದ್ದರೂ ಎಲ್ಲರೊಂದಿಗೆ ಸ್ನೇಹಪೂರ್ಣವಾಗಿ ವರ್ತಿಸುವ ಗುಣವೇ ಗಿಲ್ಲಿಯನ್ನು ವಿಭಿನ್ನವಾಗಿ ಗುರುತಿಸುತ್ತಿದೆ. ಬಿಗ್‌ಬಾಸ್ ವಿನ್ನರ್ ಆಗಿ ಪಡೆದ ಖ್ಯಾತಿಯ ಜೊತೆಗೆ, ಅಭಿಮಾನಿಗಳ ಅಪಾರ ಪ್ರೀತಿ ಮತ್ತು ಗೌರವ ಗಿಲ್ಲಿಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತಿದೆ.












Click it and Unblock the Notifications