ದರ್ಶನ್ ಸರ್ ಮಾಡಿದ ಆ ಸಹಾಯದಿಂದಲೇ ಸಕ್ಸಸ್ ಸಿಕ್ತು: ಬಿಗ್‌ಬಾಸ್ ರಘು
"ಕ್ವಾಟ್ಲೆ ಕಿಚನ್" ವಿನ್ನರ್ ಆಗಿ ಹೊರಹೊಮ್ಮಿದ್ದ ರಘು ಇದೀಗ ಬಿಗ್‌ಬಾಸ್ ಕನ್ನಡ ಸೀಸನ್-12ರ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನವೇ ಹಳೆಯ ಸ್ಪರ್ಧಿಗಳಿಗೆ ರಘು ಹಾವಳಿ ಕೊಟ್ಟಿದ್ದರು. ಇತ್ತೀಚೆಗೆ ತೆರೆ ಕಂಡಿರುವ ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿಯೂ ರಘು ಖಡಕ್ ವಿಲನ್ ಆಗಿ ಗುರುತಿಸಿಕೊಂಡಿದ್ದರು. ಸದ್ಯ ಬಿಗ್‌ಬಾಸ್ ಜರ್ನಿ ಮುಂದುವರಿಸಿರುವ ರಘು, ನಟ ದರ್ಶನ್ ಅವರೊಂದಿಗಿನ ಒಡನಾಟವನ್ನು ವಿವರಿಸಿದ್ದಾರೆ. ನನ್ನ ಈ ಸಕ್ಸಸ್‌ಗೆ ದರ್ಶನ್ ಅವರು ಮಾಡಿದ ಆ ಸಹಾಯವೇ ಕಾರಣ ಎಂದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಘು ಬಿಗ್‌ಬಾಸ್ ಮನೆಗೆ ಕಾಲಿಟ್ಟ ಬೆನ್ನಲ್ಲೇ ದರ್ಶನ್ ಅವರೊಂದಿಗೆ ಕಾಣಿಸಿಕೊಂಡಿದ್ದ ಫೋಟೊಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜಿಮ್ ಟ್ರೇನರ್ ಆಗಿ ಗಮನ ಸೆಳೆದಿದ್ದ ರಘು ಅವರು, ಕ್ವಾಟ್ಲೆ ಕಿಚನ್ ಶೋನಲ್ಲಿ ವಿನ್ನರ್ ಆಗಿದ್ದರು. ಅಷ್ಟಕ್ಕೂ ಇದೀಗ ದರ್ಶನ್ ಅವರೊಂದಿನ ಫೋಟೊಗಳು ವೈರಲ್ ಆಗಲು ಕಾರಣವೇನೆಂದರೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುವ ಮುನ್ನ ರಘು ತಮ್ಮ ಮತ್ತು ದರ್ಶನ್ ಜತೆಗಿನ ಸಂಬಂಧ ಕುರಿತು ವಿಡಿಯೊ ಮಾಡಿದ್ದಾರೆ.

ಹೌದು ಈ ವಿಡಿಯೋ ರಘು ಇದೀಗ ಅವರು ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ ಬಳಿಕ ಹೆಚ್ಚು ಸದ್ದು ಮಾಡುತ್ತಿದೆ. ಕೇವಲ ಜಿಮ್ ಟ್ರೇನರ್ ಆಗಿದ್ದ ನನಗೆ ದರ್ಶನ್ ಸರ್ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ನನ್ನ ಜಿಮ್ ಓಪನಿಂಗ್‌ಗೆ ಅವರು ಬಂದಿದ್ದರು. ಬಳಿಕ ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಿಕೊಂಡೆ. ಇದಾದ ಮೇಲೆ ಸಿನಿಮಾದಲ್ಲೂ ಅವಕಾಶ ಸಿಕ್ಕಿತು ಎಂದು ತಿಳಿಸಿದ್ದಾರೆ.
ಇಂದು ನಾನು ಏನಾದರೂ ಮಾಡಿದ್ದರೆ ಅದಕ್ಕೆ ದರ್ಶನ್ ಅವರೇ ಕಾರಣ. ಅವರು ಸದಾ ನನ್ನ ಜೀವನದ ಭಾಗವಾಗಿರುತ್ತಾರೆ. ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ದರ್ಶನ್ ಜತೆಗಿನ ಒಡನಾಟವನ್ನು ರಘು ಹಂಚಿಕೊಂಡಿದ್ದಾರೆ. ಅಲ್ಲದೆ ಈ ವಿಡಿಯೋದಲ್ಲಿ ನಾನು ಬಿಗ್‌ಬಾಸ್ ಗೆದ್ದು ಬರುತ್ತೇನೆ ಎಂದೂ ರಘು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಶ್ವಿನಿ ಗೌಡ ಜೊತೆ ರಘು ಕಿರಿಕ್
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ರಘು, ಬಿಗ್‌ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನವೇ ಅಶ್ವಿನಿ ಗೌಡ ಹಾಗೂ ಜಾನ್ವಿ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಯಾಗಿತ್ತು. ರಘು ಬಂದ ಮೇಲೆ ಅಸಲಿ ಆಟ ಶುರುವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕಾಂತಾರ ಚಾಪ್ಟರ್-1 ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಜೀವ ತುಂಬಿರುವ ರಘು, ಎಲ್ಲರ ಗಮನ ಸೆಳೆದಿದ್ದರು. ಕಾಂತಾರ ಯಶಸ್ಸು ಕೂಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೆ ಒಂದು ಕಾರಣ ಆಗಿರಬಹುದು ಎಂದು ಹೇಳಲಾಗುತ್ತಿದೆ.
ಕಾಂತಾರ ಪಾತ್ರಕ್ಕಾಗಿ ರಘು ಸುಮಾರು ಗಂಟೆಗಳ ಕಾಲ ಮೇಕಪ್ ಹಾಕಿಕೊಳ್ಳುತ್ತಿದ್ದರು. ಈ ರೀತಿಯ ಶ್ರಮ ಹಾಗೂ ಪಾತ್ರದ ಮೇಲಿನ ಕಲಾವಿದರ ಪ್ರೀತಿ ಕುರಿತ ವಿಡಿಯೊಗಳು ಇತ್ತೀಚೆಗೆ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದ್ದವು. ರಘು ಅವರು ಪಾತ್ರಕ್ಕಾಗಿ ಮೇಕಪ್ ಹಾಕಿಸಿಕೊಳ್ಳುವ ವಿಡಿಯೋ ಕೂಡ ಗಮನ ಸೆಳೆದಿದೆ. ಕ್ವಾಟ್ಲೆ ಕಿಚನ್ ಟೈಟಲ್ ಮುಡಿಗೇರಿಸಿಕೊಂಡಿರುವ ರಘು, ಬಿಗ್‌ಬಾಸ್ ಕೂಡ ಗೆದ್ದು ಬರಲಿ ಎಂದು ಜನ ಆಶಿಸುತ್ತಿದ್ದಾರೆ.












Click it and Unblock the Notifications