ಗಿಲ್ಲಿನ ನೆಗೆಟಿವ್ ಮಾಡೋಕೆ ಅವರಿಂದ ಷಡ್ಯಂತ್ರ ನಡೀತಿದೆ: ನಟ ವಿನಯ್ ಗೌಡ
ಬಿಗ್‌ಬಾಸ್ ಕನ್ನಡ ಸೀಸನ್-12ರ ಪ್ರಬಲ ಸ್ಪರ್ಧಿಗಳಲ್ಲಿ ಗಿಲ್ಲಿ ಸಹ ಒಬ್ಬರು. ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲಿ ನೋಡಿದ್ರೂ ಗಿಲ್ಲಿ, ಗಿಲ್ಲಿ ಅನ್ನೋ ಹೆಸರೇ ಹೆಚ್ಚಾಗಿ ಕೇಳಿಬರುತ್ತಿದೆ. ಅಷ್ಟರಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿದ್ದಾರೆ ಈ ಸ್ಪರ್ಧಿ. ಅವರ ಡೈಲಾಗ್, ಕಾಮಿಡಿಗೆ ಫುಲ್ ಫಿದಾ ಆಗಿರುವ ಜನ "ಈ ಬಿಗ್‌ಬಾಸ್ ಟ್ರೋಫಿ ಗೆಲ್ಲೋದು ಗಿಲ್ಲಿನೇ.." ಅಂತಿದ್ದಾರೆ. ಹೀಗಿರುವಾಗ ಗಿಲ್ಲಿ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಮಾಜಿ ಸ್ಪರ್ಧಿ ವಿನಯ್ ಗೌಡ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಗಿಲ್ಲಿ ಬಗ್ಗೆ ವಿನಯ್ ಗೌಡ ಮಾತನಾಡಿದ್ದಾರೆ. 'ಗಿಲ್ಲಿಯನ್ನ ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಅವನು ಇರೋದೆ ಹಾಗೆ. ತಮಾಷೆ ಮಾಡೋದು, ಕಾಲೆಳೆಯುವುದು ಎಲ್ಲವೂ ಸೀರಿಯಸ್ ಅಲ್ಲ. ಇದೆಲ್ಲವೂ ಅವನಲ್ಲಿ ಮೊದಲಿನಿಂದಲೂ ಇದೆ. ನನ್ನ ಪ್ರಕಾರ ಗಿಲ್ಲಿ ಎಲ್ಲರನ್ನೂ ಓವರ್‌ಟೇಕ್ ಮಾಡ್ತಿದ್ದಾರೆ. ಈಗಿನ ಸೋಷಿಯಲ್ ಮೀಡಿಯಾ ಗಮನಿಸಿದರೆ ಗೆಲ್ಲೋದು ಗಿಲ್ಲಿನೇ ಎನ್ನುವುದರಲ್ಲಿ ಅನುಮಾನ ಇಲ್ಲ' ಎಂದಿದ್ದಾರೆ.

ಆಟ ಆಡಲು ಬಿಡಿ..
'ಬಿಗ್‌ಬಾಸ್ ಸ್ಪರ್ಧಿಗಳನ್ನು ಒಳಗೆ ಅವರ ಆಟ ಆಡಲು ಬಿಡಿ. ಅದು ಬಿಟ್ಟು ಹೊರಗಡೆ ನೀವು ಆಟ ಆಡಬೇಡಿ ಎಂದಿದ್ದಾರೆ. ಗಿಲ್ಲಿಯ ಬಾಡಿ ಲಾಂಗ್ವೇಜ್, ಟೈಮಿಂಗ್, ಜೋಕ್‌ಗಳು ತುಂಬಾ ವೈರಲ್ ಆಗ್ತಿವೆ. ಜನ ಅದನ್ನ ಇಷ್ಟಪಡುತ್ತಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಗಿಲ್ಲಿ, ಗಿಲ್ಲಿ ಅಂತಾರೆ' ಎಂದಿದ್ದಾರೆ.
'ಆದರೆ ಕೆಲವೊಂದು ಪಿಆರ್‌ಗಳನ್ನು ಗಿಲ್ಲಿ ಬಗ್ಗೆ ಓವರ್ ಹೈಪ್ ಮಾಡಿ, ನೆಗೆಟಿವ್ ಮಾಡುತ್ತಿದ್ದಾರೆ. ಹೊರಗೆ ಹೀಗೆಲ್ಲ ನಡೀತಿದೆ ಎಂದು ಇದು ಗಿಲ್ಲಿಗೂ ಗೊತ್ತಿರಲ್ಲ. ನಾನು ಎಲ್ಲ ಪಿಆರ್‌ಗಳು ಅದೇ ರೀತಿ ಮಾಡ್ತಾರೆ ಅಂತ ಹೇಳಲ್ಲ, ಆದರೆ ಬಹುತೇಕರು ತಮ್ಮ ಕ್ಲೈಂಟ್‌ಗಳ ಬಗ್ಗೆ ಒಳ್ಳೆಯದನ್ನೇ ತೋರಿಸಲು ಬಯಸುತ್ತಾರೆ. ಅವರಿಗೆ ಸಂಬಂಧಿಸಿದ ಒಳ್ಳೆಯ ಕ್ಲಿಪಿಂಗ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡೈಲಾಗ್ಸ್ ಎಲ್ಲ ಹಾಕಿ ಈ ರೀತಿ ಬಿಂಬಿಸುತ್ತಾರೆ' ಎಂದಿದ್ದಾರೆ.
'ಗಿಲ್ಲಿ ಪ್ರಚಾರ ಮಾಡಿ ಅನ್ನಲ್ಲ'
'ಈಗೆಲ್ಲ ಯಾರೂ ಕೂಡ ಹಣ ನೀಡಿ ಒಬ್ಬರನ್ನು ಕೆಳಗೆ ಹಾಕಿ ಅಂತ ಹೇಳೋದಿಲ್ಲ. ಆದರೆ ಕೆಲವೊಂದು ಪಿಆರ್‌ಗಳು ಅದನ್ನು ಮಾಡುತ್ತಿದ್ದಾರೆ. ಉದಾಹರಣೆಗೆ ಈ ಬಿಗ್‌ಬಾಸ್ ಸೀಸನ್‌ನಲ್ಲಿರೋ ಗಿಲ್ಲಿ ಅವರನ್ನೇ ತೆಗೆದುಕೊಳ್ಳೋಣ. ಗಿಲ್ಲಿನ ನೆಗೆಟಿವ್ ಮಾಡುವುದಕ್ಕೇ ಒಂದಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ. ಗಿಲ್ಲಿ ತಾನೇ ಹಣ ನೀಡಿ ನನಗೆ ಪ್ರಚಾರ ಮಾಡಿ ಎನ್ನುವ ವ್ಯಕ್ತಿಯಲ್ಲ. ಅಸಲಿಗೆ ಗಿಲ್ಲಿಗೆ ಪಿಆರ್ ಟೀಂ ಇದೆಯೋ ಇಲ್ಲವೋ ಗೊತ್ತಿಲ್ಲ' ಎಂದಿದ್ದಾರೆ ವಿನಯ್ ಗೌಡ.
'ಗಿಲ್ಲಿಗೆ ಬಗ್ಗೆ ನೆಗೆಟಿವ್ ತೋರಿಸುತ್ತಿದ್ದಾರೆ. ಹೀಗೆ ನಡೆಯಬಾರದು, ಯಾಕಂದ್ರೆ ಬೇರೆಯವರಿಗೂ ಕುಟುಂಬಗಳಿರುತ್ತೆ. ಹೆಂಡತಿ ಮಕ್ಕಳು ಅಂತ ಇರ್ತಾರೆ. ಇದನ್ನೆಲ್ಲ ಪಿಆರ್ ಏಜೆನ್ಸಿಗಳು ಯೋಚಿಸಬೇಕು. ಇದರಿಂದ ಅವರ ಕುಟುಂಬಸ್ಥರು ಮಾನಸಿಕವಾಗಿ ತುಂಬಾ ಹಾನಿಗೆ ಒಳಗಾಗುತ್ತಾರೆ. ಇದೊಂದು ಸರಿಹೋದರೆ, ಬಿಗ್‌ಬಾಸ್ ಅನ್ನೋದು ಒಂದು ಆಟ ಅಷ್ಟೇ. ಸ್ಪರ್ಧಿಗಳ ಆಟವನ್ನು ಅವರೇ ಆಡಲು ಬಿಡಬೇಕು. ಅವರ ಬಗ್ಗೆ ಆಟವಾಡಬಾರದು' ಎಂದು ಪಿಆರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications