BBK 12: ಬಿಗ್‌ಬಾಸ್ ಶಾಕಿಂಗ್ ಎಲಿಮಿನೇಷನ್, ಈ ಸ್ಪರ್ಧಿ ಹೋಗಬಾರದಿತ್ತು ಎಂದ ವೀಕ್ಷಕರು
ಬಿಗ್‌ಬಾಸ್ ಕನ್ನಡ ಸೀಸನ್-12ರಲ್ಲಿ ಈ ವಾರವೂ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ಯಾರೂ ಊಹಿಸದ ಸ್ಪರ್ಧಿ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಸದ್ಯ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಎಂಟ್ರಿ ನೀಡಿದ್ದರೆ, ಹಳೆಯ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಿದ್ದಾರೆ. ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಪಟ್ಟ ಸಿಕ್ಕರೂ ನಟ ಅಭಿಷೇಕ್ ಶ್ರೀಕಾಂತ್ ಅವರು ಎಲಿಮಿನೇಷನ್‌ನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಕೊನೆಗೆ ಅವರು ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಅಭಿಷೇಕ್ ಅಷ್ಟಾಗಿ ಹೈಲೈಟ್ ಆಗಲಿಲ್ಲ, ತಾನಾಯ್ತು ತನ್ನ ಪಾಡಾಯ್ತು ಎನ್ನುವಂತೆಯೇ ಇರುತ್ತಾರೆ ಎನ್ನುವುದು ಬಿಗ್‌ಬಾಸ್ ನೋಡುವವರ ಮಾತಾಗಿತ್ತು. ಕೆಲವರು ಮುಂದಿನ ವಾರ ಅಭಿಷೇಕ್ ಎಲಿಮಿನೇಟ್ ಆಗ್ತಾರೆ ಎಂದೂ ಭವಿಷ್ಯ ನುಡಿದಿದ್ದರು. ಆದರೆ ಅವರು ಸೈಲೆಂಟಾಗಿ ಇದ್ದಿದ್ದೇ ಅಭಿಷೇಕ್‌ಗೆ ಮುಳುವಾಯ್ತು ಎಂದು ಹೇಳಲಾಗ್ತಿದೆ.

ನಾನು ನಾನಾಗಿರೋದಕ್ಕೆ ಪ್ರಯತ್ನಿಸಿದೆ
ಎಲಿಮಿನೇಷನ್ ಬಳಿಕ ಬಿಗ್‌ಬಾಸ್ ವೇದಿಕೆಗೆ ಬಂದ ಅಭಿಷೇಕ್ ತುಸು ಬೇಸರ ವ್ಯಕ್ತಪಡಿಸಿದರು. ಎರಡನೇ ಬಾರಿ ಕ್ಯಾಪ್ಟನ್ ಆಗಿ ಎಲಿಮಿನೇಟ್ ಆಗಿದ್ದು ಬ್ಯಾಡ್ ಲಕ್, ನಿಮ್ಮಲ್ಲಿ ತುಂಬಾ ಒಳ್ಳೆತನ ಇದೆ, ಹಾಗೆಯೇ ಇರಿ ಎಂದು ಸುದೀಪ್ ಅಭಿಷೇಕ್‌ಗೆ ಹೇಳಿದ್ರು. ಬಿಗ್‌ಬಾಸ್ ಒಂದು ಬ್ಯೂಟಿಫುಲ್ ಜರ್ನಿ, ನಾನು ಇದನ್ನ ನಿರೀಕ್ಷೆ ಮಾಡಿರಲಿಲ್ಲ. ದಿನ ಕಳೆದಂತೆ ನನಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾದವು. ಅದೇ ನನ್ನನ್ನ ಕೆಳಗೆ ಹಾಕಿದ್ದು ಅನಿಸುತ್ತೆ. ಬಿಗ್‌ಬಾಸ್‌ನಲ್ಲಿ ನಾನು ಸಾಧ್ಯವಾದಷ್ಟು ನನ್ನಂತೆಯೇ ಇರಲು ಪ್ರಯತ್ನಿಸಿದೆ. ಏನೇ ಆದರೂ ನಾನು ಸುಮ್ಮನೆ ಇರಲು ಟ್ರೈ ಮಾಡ್ದೆ ಎಂದರು ಅಭಿಷೇಕ್.
ಬಿಗ್ ಬಾಸ್ ಗೆಲ್ಲಲು ನನ್ನ ಪ್ರಕಾರ ಮನೆಯಲ್ಲಿ ಸ್ಪಾಂಟೇನಿಯಸ್ ಆಗಿರಬೇಕು, ಬೇಗ ಬೇಗ ಮಾತನಾಡಬೇಕು. ನಾನು ನೋಡಿರುವ ಪ್ರಕಾರ ಮೆಜಾರಿಟಿ ಇದೇ ಅನಿಸುತ್ತೆ ಎಂದು ಅಭಿಷೇಕ್ ಸುದೀಪ್‌ಗೆ ಹೇಳಿದರು. ಅಭಿಷೇಕ್ ಸಹೋದರ ಕೂಡ ಎಲಿಮಿನೇಷನ್ ಬಗ್ಗೆ ಬೇಸರ ಹೊರಹಾಕಿದರು. ಅಭಿಷೇಕ್ ಹೆಚ್ಚಾಗಿ ಮಾತನಾಡಬೇಕಿತ್ತು. ಆದರೆ ನೀನು ಚೆನ್ನಾಗಿ ಆಟ ಆಡಿದ್ದೀಯ, ನಿನ್ನ ಬಗ್ಗೆ ಹೆಮ್ಮೆ ಇದೆ ಎಂದು ಧೈರ್ಯ ತುಂಬಿದರು.
ಬಿಗ್‌ಬಾಸ್ ಮನೆಗೆ ವಿಲನ್ ಎಂಟ್ರಿ
ಬಿಗ್‌ಬಾಸ್ ಮನೆಗೆ ವಿಲನ್ ಎಂಟ್ರಿಯಾಗಿದ್ದು, ಈಗ ಮನೆಯನ್ನು ಕಂಟ್ರೋಲ್ ಮಾಡ್ತಿರೋದು ಬಿಗ್‌ಬಾಸ್ ಅಲ್ಲ, ನಾನು ವಿಲನ್ ಎಂದು ಸ್ಪರ್ಧಿಗಳಿಗೆ ಶಾಕ್ ನೀಡಲಾಗಿದೆ. ವಿಲನ್ ಸದ್ದು ಕೇಳಿ ಮನೆಮಂದಿ ಬೆಚ್ಚಿಬಿದ್ದಿದ್ದಾರೆ. ಹೊಸ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಭೂತದ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು ಕಲರ್ಸ್ ಪ್ರೋಮೋದಲ್ಲಿದೆ.












Click it and Unblock the Notifications