Bigg Boss Kannada 12: ಒಂದೇ ದಿನಕ್ಕೆ ಬಿಗ್‌ ಬಾಸ್‌ ಜರ್ನಿ ಮುಗಿಸಿದ ಸ್ಪರ್ಧಿ ಇವರೇ

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶುರುವಾಗಿ ಕೇವಲ ಒಂದು ದಿನವಷ್ಟೇ ಕಳೆದಿದ್ದು, ಈ ಬಾರಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ನೀಡುತ್ತಿದೆ. ಮೊದಲ ದಿನವೇ ಯಾರೂ ಊಹಿಸಿರದ ಎಲಿಮಿನೇಷನ್‌ ನಡೆದಿದೆ. ನಿನ್ನೆಯಷ್ಟೇ ಬಿಗ್‌ಬಾಸ್‌ ಮನೆಗೆ ಕಾಲಿಟ್ಟ ಸ್ಪರ್ಧಿಯೊಬ್ಬರು ಒಂದೇ ದಿನಕ್ಕೆ ತಮ್ಮ ಬಿಗ್‌ಬಾಸ್‌ ಪ್ರಯಾಣ ಮುಗಿಸಿದ್ದಾರೆ. ಶೋಗೆ ಹೋಗಾಯ್ತು ಎಂದು ಖುಷಿಪಡುವಷ್ಟರಲ್ಲೇ ಸ್ಪರ್ಧಿಗಳಿಗೆ ಎಲಿಮಿನೇಷನ್‌ ಶಾಕ್‌ ಕೊಟ್ಟಿರುವ ಬಿಗ್‌ ಬಾಸ್‌ ಮೊದಲ ಸ್ಪರ್ಧಿಗೆ ಮೊದಲ ದಿನವೇ ಟಾಟಾ ಹೇಳಿದ್ದಾರೆ.

ಗ್ರ್ಯಾಂಡ್‌ ಓಪನಿಂಗ್‌ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದ ಸ್ಪರ್ಧಿಗಳು ಮೊದಲ ದಿನ ಇನ್ನೂ ಹೊಂದಿಕೊಳ್ಳುವ ಹಂತದಲ್ಲಿದ್ದರು. ಅಷ್ಟರಲ್ಲೇ ಬಿಗ್‌ಬಾಸ್‌ ಮೊದಲ ದಿನವೇ ಎಲಿಮಿನೇಷನ್‌ ಅಸ್ತ್ರ ಪ್ರಯೋಗಿಸಿದೆ. ಇದನ್ನು ಕೇಳಿ ಮನೆಮಂದಿಯೆಲ್ಲ ಶಾಕ್‌ ಆಗಿದ್ದರು. ಅಂತಿಮವಾಗಿ ಎಲಿಮಿನೇಷನ್‌ಗೆ ಮೂರು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಯಿತು.

bigg-boss-kannada-12-rakshitha-shetty-eliminated-on-day-1-shocking-fans

ಕರಿಮಣಿ ಧಾರಾವಾಹಿ ಖ್ಯಾತಿಯ ಸ್ಪಂದನಾ ಸೋಮಣ್ಣ, ನಾ ಡ್ರೈವರಾ, ನೀ ನನ್ನ ಲವ್ವರಾ ಹಾಡಿನ ಖ್ಯಾತಿಯ ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ, ಕರಾವಳಿ ಮೂಲದ ಸೋಷಿಯಲ್‌ ಮೀಡಿಯಾ ಸ್ಟಾರ್‌ ರಕ್ಷಿತಾ ಶೆಟ್ಟಿ ಈ ಮೂವರನ್ನು ಎಲಿಮಿನೇಷನ್‌ಗೆ ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ರಕ್ಷಿತಾ ಶೆಟ್ಟಿ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ.

ಪ್ರೋಮೋದಲ್ಲೇ ಎಲಿಮೇಷನ್‌ ಸುಳಿವು ಕೊಟ್ಟಿದ್ದ ವಾಹಿನಿ, ಈ ಮೂವರ ಹೆಸರನ್ನು ಸೂಚಿಸಿತ್ತು. ಮೊದಲ ದಿನದ ಟಾಸ್ಕ್‌ನಲ್ಲಿ ಒಂದು ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳುಹಿಸಲು ಉಳಿದ ಸ್ಪರ್ಧಿಗಳಿಗೆ ಅವಕಾಶ ಕೊಡಲಾಯಿತು. ಅದರಂತೆ ಮೂವರಲ್ಲಿ ಬಹುತೇಕರು ರಕ್ಷಿತಾ ಶೆಟ್ಟಿ ಹೆಸರನ್ನು ಸೂಚಿಸಿದರು. ಹೀಗಾಗಿ ಒಂದೇ ದಿನಕ್ಕೆ ರಕ್ಷಿತಾ ಬಿಗ್‌ಬಾಸ್‌ ಜರ್ನಿ ಮುಗಿಸಿದ್ದಾರೆ.

bigg-boss-kannada-12-rakshitha-shetty-eliminated-on-day-1-shocking-fans

ಇವತ್ತು ಏನಂತ ಮನವೊಲಿಸೋದು ಗೊತ್ತಿಲ್ಲ. ನಾನು ತುಳುನಾಡಲ್ಲಿ ಸ್ವಲ್ಪ ಜನಕ್ಕೆ ಗೊತ್ತು. ಬಿಗ್‌ಬಾಸ್‌ನಲ್ಲಿ ಅವಕಾಶ ಸಿಕ್ಕರೆ ಇನ್ನೂ ತುಂಬಾ ಜನರಿಗೆ ನಾನು ಪರಿಚಯ ಆಗ್ತೀನಿ, ಇದೇ ಅದಕ್ಕೆ ಒಳ್ಳೆಯ ಅವಕಾಶ ಎಂದು ಅನ್ಕೊಂಡಿದ್ದೀನಿ ಎಂದು ರಕ್ಷಿತಾ ಉಳಿದ ಸ್ಪರ್ಧಿಗಳಿಗೆ ತನ್ನನ್ನ ಉಳಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ರು. ಆದರೆ ಅಂತಿಮವಾಗಿ ರಕ್ಷಿತಾ ಬಿಗ್‌ಬಾಸ್‌ಗೆ ಬಾಯ್‌ ಬಾಯ್‌ ಎಂದಿದ್ದಾರೆ.

ಕರಾವಳಿ ಕನ್ನಡತಿ ರಕ್ಷಿತಾ ಶೆಟ್ಟಿ ತುಳು, ಕನ್ನಡ, ಹಿಂದಿ ಭಾಷೆಯನ್ನು ಮಿಕ್ಸ್‌ ಮಾಡಿ ಮಾತನಾಡಿಯೇ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿದ್ದಾರೆ. ಈ ಹಿಂದೆ ರಕ್ಷಿತಾ ಶೆಟ್ಟಿ ಯೂಟ್ಯೂಬ್ ವ್ಲಾಗ್‌ನಲ್ಲಿ ಆಟೋ ಚಾಲಕರೊಂದಿಗೆ ಮಾತನಾಡುವಾಗ ತುಳು ಹಾಗೂ ಕನ್ನಡ ಭಾಷೆಯ ವಿಚಾರವಾಗಿ ಆಡಿದ್ದ ಮಾತುಗಳು ವಿವಾದಕ್ಕೆ ಕಾರಣವಾಗಿತ್ತು. ಈ ಬಾರಿ ಬಿಗ್‌ಬಾಸ್‌ ಮೊದಲೇ ಘೋಷಣೆ ಮಾಡಿದ ಸ್ಪರ್ಧಿಗಳಲ್ಲಿ ರಕ್ಷಿತಾ ಕೂಡ ಒಬ್ಬರಾಗಿದ್ರು. ರಕ್ಷಿತಾ ಅವರ ಕನ್ನಡ ಕೇಳಿ ಸುದೀಪ್‌ ವೇದಿಕೆಯಲ್ಲಿ ಬಿದ್ದು ಬಿದ್ದು ನಕ್ಕಿದ್ದರು. ಬಿಗ್‌ಬಾಸ್‌ ಮನೆಯಲ್ಲೂ ಇದೇ ರೀತಿಯ ಕಾಮಿಡಿ ಮುಂದುವರಿಯುತ್ತೆ ಎಂದು ಕಾದಿದ್ದ ಪ್ರೇಕ್ಷಕರು ನಿರೀಕ್ಷೆ ಎಲಿಮಿನೇಷನ್‌ನಿಂದ ಸುಳ್ಳಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+