ಬಿಗ್‌ಬಾಸ್‌ಗೆ ಹೋಗಿ ಭಾರೀ ತೂಕ ಕಳೆದುಕೊಂಡ ಮ್ಯೂಟಂಟ್ ರಘು, ಫೋಟೋ ವೈರಲ್
ಕನ್ನಡ ಬಿಗ್‌ಬಾಸ್ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ನೀಡಿದ್ದ ಟಾಪ್ ಆರು ಸ್ಪರ್ಧಿಗಳಲ್ಲಿ ಮ್ಯೂಟೆಂಟ್ ರಘು ಒಬ್ಬರಾಗಿದ್ದರು. ಬಿಗ್‌ಬಾಸ್ ಮನೆಗೆ ಕಾಲಿಟ್ಟ ದಿನದಿಂದಲೇ ತಮ್ಮ ವಿಭಿನ್ನ ವ್ಯಕ್ತಿತ್ವ, ಆಟದ ಶೈಲಿಯಿಂದ ಗಮನ ಸೆಳೆದಿದ್ದ ರಘು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಭಾರೀ ವೈರಲ್ ಆಗಿದೆ. ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಗುರುತಿಸಿಕೊಂಡಿರುವ ರಘು ವೈಲ್ಡ್‌ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದರು. ಟಾಪ್ ಆರು ಸ್ಪರ್ಧಿಗಳಲ್ಲಿ ಒಬ್ಬರಾಗಿ ಬಂದು ಅಂತಿಮವಾಗಿ ಎಲಿಮಿನೇಟ್ ಆದರು.
ಬಿಗ್‌ಬಾಸ್ ಮನೆ ಒಳಗಿನ ಪ್ರಯಾಣದ ಬಗ್ಗೆ ಮಾತನಾಡಿರುವ ಮ್ಯೂಟೆಂಟ್ ರಘು, ಈ ಅವಧಿಯಲ್ಲಿ ತಾನು ಸುಮಾರು 25 ಕೆಜಿ ತೂಕ ಕಳೆದುಕೊಂಡಿರುವುದನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ಅವರು, "ಬಿಗ್‌ಬಾಸ್ 12ರ ಅದ್ಭುತ ಪ್ರಯಾಣ. ಈ ಸಮಯದಲ್ಲಿ ನಾನು 25 ಕೆ.ಜಿ ತೂಕ ಇಳಿಸಿಕೊಂಡೆ. ಆದರೆ ಜನರ ಅಪಾರ ಬೆಂಬಲ ಸಿಕ್ಕಿತು. ಪ್ರತಿದಿನ ನನ್ನನ್ನು ನಾನು ಹಿಡಿದಿಟ್ಟುಕೊಳ್ಳುವುದು ಅತ್ಯಂತ ಕಠಿಣ ಕೆಲಸವಾಗಿತ್ತು" ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

ಬಿಗ್‌ಬಾಸ್‌ಗೂ ಮುನ್ನ 125 ಕೆ.ಜಿ ಇದ್ದೆ
"ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಮತ್ತು ಖಂಡಿತವಾಗಿಯೂ ನನ್ನ ಈ ಪ್ರಯಾಣವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ. ನನಗೆ ಬೆಂಬಲ ನೀಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು" ಎಂದು ತಿಳಿಸಿದ್ದಾರೆ. ಇದರೊಂದಿಗೆ ಬಿಗ್‌ಬಾಸ್‌ಗೂ ಮುಂಚೆ ಹಾಗೂ ಬಿಗ್‌ಬಾಸ್ ನಂತರ ಎನ್ನುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್‌ಗೂ ಮುನ್ನ 125 ಕೆ.ಜಿ, ಬಿಗ್‌ಬಾಸ್ ನಂತರ 100 ಕೆ.ಜಿಗೆ ತೂಕ ಇಳಿದಿದೆ ಎಂದು ರಘು ಉಲ್ಲೇಖಿಸಿದ್ದಾರೆ.
ಬಿಗ್‌ಬಾಸ್ ಮನೆಯೊಳಗಿನ ಶಾರೀರಿಕ ಹಾಗೂ ಮಾನಸಿಕ ಸವಾಲುಗಳು ರಘು ಮೇಲೆ ದೊಡ್ಡ ಪರಿಣಾಮ ಬೀರಿದ್ದು, ಅವರ ತೂಕ ಇಳಿಕೆ ಈಗ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಫಿನಾಲೆಯ ಬಳಿಕ ಹಂಚಿಕೊಂಡಿರುವ ಈ ಪೋಸ್ಟ್‌ಗೆ ಅಭಿಮಾನಿಗಳು ಹಾಗೂ ಸಹ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿ, ರಘು ಅವರ ಧೈರ್ಯ ಮತ್ತು ಹೋರಾಟ ಮನೋಭಾವಕ್ಕೆ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ. ಕನ್ನಡ ಬಿಗ್‌ಬಾಸ್ ಸೀಸನ್ 12 ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿರುವ ಮ್ಯೂಟೆಂಟ್ ರಘು, ಮುಂದಿನ ದಿನಗಳಲ್ಲಿ ತಮ್ಮ ಜೀವನದ ಈ ವಿಶೇಷ ಪ್ರಯಾಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮ್ಯೂಟೆಂಟ್ ರಘು ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಭಿಮಾನಿಗಳು ಅವರ ಹೋರಾಟ ಮನೋಭಾವ, ಧೈರ್ಯ ಮತ್ತು ಶಿಸ್ತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು "ನಿಜವಾದ ಗೆಲುವು ಇದೇ", "ನೀವು ಪ್ರೇರಣೆಯಾಗಿದ್ದೀರಿ" ಎಂದು ಕಾಮೆಂಟ್ ಮಾಡಿದ್ದಾರೆ. ಕನ್ನಡ ಬಿಗ್‌ಬಾಸ್ ಸೀಸನ್ 12 ಮೂಲಕ ಮ್ಯೂಟೆಂಟ್ ರಘು ಹೊಸ ಅಭಿಮಾನಿ ಬಳಗವನ್ನು ಸಂಪಾದಿಸಿದ್ದು, ಮುಂದಿನ ದಿನಗಳಲ್ಲಿ ಅವರು ಯಾವ ರೀತಿಯ ಹೊಸ ಪ್ರಯಾಣ ಆರಂಭಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.












Click it and Unblock the Notifications