Bigg Boss 12: ಆರಂಭಕ್ಕೂ ಮುನ್ನವೇ ಭಾರೀ ದಾಖಲೆ ಬರೆದ ಬಿಗ್‌ಬಾಸ್‌ ಕನ್ನಡ

Bigg Boss Kannada 12: ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗುತ್ತಿದೆ. ಎಲ್ಲರ ಗಮನ ಈಗ ಸೆಪ್ಟೆಂಬರ್‌ 28ರ ಕಡೆ ಇದೆ. ಕಲರ್ಸ್‌ ವಾಹಿನಿಯು ಇತ್ತೀಚೆಗೆ ಬಿಗ್‌ಬಾಸ್‌ ಆರಂಭದ ಕುರಿತು ಎರಡು ಪ್ರೋಮೋಗಳನ್ನು ಹಂಚಿಕೊಂಡಿತ್ತು. ಇನ್ನು ಪ್ರತಿ ಬಾರಿಯೂ ಬಿಗ್‌ಬಾಸ್‌ ಟಿಆರ್‌ಪಿ ವಿಚಾರದಲ್ಲಿ ಕಿಂಗ್‌ ಎನಿಸಿಕೊಂಡಿದೆ. ಅಷ್ಟರ ಮಟ್ಟಿಗೆ ಈ ಶೋಗೆ ವೀಕ್ಷಕರಿದ್ದಾರೆ. ಆದರೆ ಈ ಬಾರಿ ಶೋ ಆರಂಭಕ್ಕೂ ಮುನ್ನವೇ ಕನ್ನಡ ಬಿಗ್‌ಬಾಸ್‌ ದಾಖಲೆ ಬರೆದಿದೆ.

ಬಿಗ್ ಬಾಸ್ ಕನ್ನಡ 12 ಕನ್ನಡ ಶುರುವಾಗುವ ಮುನ್ನವೇ ಭಾರಿ ಸಂಚಲನ ಮೂಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪರ್ಧಿಗಳ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಬಿಗ್‌ಬಾಸ್ ಕನ್ನಡದ ಕುರಿತು ಕಿಚ್ಚ ಸುದೀಪ್ ಅವರ ಪ್ರೋಮೋಗಳು ಹೊಸ ದಾಖಲೆಗಳನ್ನು ನಿರ್ಮಿಸಿವೆ. ವಿಶೇಷವಾಗಿ ಸುದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 2ರಂದು ಬಿಡುಗಡೆಯಾದ ವಿಶೇಷ ಪ್ರೋಮೋ ಬರೋಬ್ಬರಿ 15 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Bigg Boss Kannada 12 Kiccha Sudeep Record Breaking Promo

ಸೆಪ್ಟೆಂಬರ್ 13ರಂದು ಬಿಡುಗಡೆಯಾದ ಮತ್ತೊಂದು ಪ್ರೋಮೋದಲ್ಲಿ ಸುದೀಪ್ ಕೃತಕ ಬುದ್ಧಿಮತ್ತೆಯ ಅಂಶಗಳೊಂದಿಗೆ ಕಾಗೆ ಮತ್ತು ನರಿಯ ಕಥೆಯನ್ನು ಹೇಳಿದ್ದರು. ಈ ಪ್ರೋಮೋ ಕೂಡ ದಾಖಲೆ ಬರೆದಿದ್ದು, ಕೇವಲ 12 ಗಂಟೆಗಳಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಈ ಪ್ರೋಮೋಗಳು ಕನ್ನಡ ಕಿರುತೆರೆ ವಿಭಾಗದಲ್ಲಿ ಭಾರಿ ದಾಖಲೆಗಳನ್ನು ನಿರ್ಮಿಸುತ್ತಿವೆ. ಕಿಚ್ಚ ಸುದೀಪ್ ಅವರ ಈ ದಾಖಲೆ ಪ್ರೋಮೋಗಳು, ಬಿಗ್‌ಬಾಸ್ ಕನ್ನಡದ ಈ ಸೀಸನ್ ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ 28ರಂದು ಗ್ರ್ಯಾಂಡ್‌ ಓಪನಿಂಗ್‌ ಆಗಲಿದೆ. ಕಿಚ್ಚ ಸುದೀಪ್ ನಿರ್ಗಮಿಸುವ ಆತಂಕ ದೂರವಾಗಿ ಮತ್ತೆ ಅವರೇ ನಿರೂಪಕರಾಗಿ ಮರಳಿದ್ದಾರೆ. ಈ ಸೀಸನ್‌ನ ಪ್ರೋಮೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲೆಗಳನ್ನು ನಿರ್ಮಿಸಿದ್ದು ಕಳೆದ ಸೀಸನ್‌ಗಿಂತ ಈ ಬಾರಿ ನಿರೀಕ್ಷೆ ಹೆಚ್ಚಾಗಿದೆ.

Bigg Boss Kannada 12 Kiccha Sudeep Record Breaking Promo

ಸಂಭಾವ್ಯ ಸ್ಪರ್ಧಿಗಳು ಯಾರೆಲ್ಲ?

ಕರರ್ಸ್‌ ವಾಹಿನಿ ಅಧಿಕೃತವಾಗಿ ಸ್ಪರ್ಧಿಗಳ ಪಟ್ಟಿಯನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಈ ವರ್ಷ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸಂಭಾವ್ಯರ ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸ್ವಾತಿ, ಸಾಗರ್ ಬಿಳಿಗೌಡ, ಸಂಜನಾ ಬುರ್ಲಿ, ಸಮೀರ್ ಎಂಡಿ, ದಿವ್ಯಾ ವಸಂತ್, ಡಾ.ಬ್ರೋ ಗಗನ್, ಶ್ವೇತಾ ಪ್ರಸಾದ್, ಗಗನಾ, ವಿಜಯ್ ಸೂರ್ಯ, ದೀಪಿಕಾ ಗೌಡ, ಬಾಳು ಬೆಳಗುಂದಿ, ವರುಣ್ ಆರಾಧ್ಯ, ಮೇಘಾ ಶೆಟ್ಟಿ, ರಮೋಲಾ, ಅಭಿಜ್ಞಾ ಭಟ್ ಸೇರಿದಂತೆ ಹಲವರ ಹೆಸರು ಚರ್ಚೆಯಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+