Bigg Boss: ಬಿಗ್‌ಬಾಸ್‌ ಮನೆ ನಿರ್ಮಾಣಕ್ಕೆ ಎಷ್ಟೆಲ್ಲ ಖರ್ಚಾಗುತ್ತೆ? ಏನೆಲ್ಲ ದುಬಾರಿ ವಸ್ತುಗಳಿರುತ್ತೆ?

Bigg Boss Kannada 12: ಬಿಗ್‌ಬಾಸ್‌ ಕನ್ನಡ ಸೀಸನ್‌-12 ರಿಯಾಲಿಟಿ ಶೋನಲ್ಲಿ ಮುಖ್ಯ ಹೈಲೈಟ್‌ ಅಂದ್ರೆ ಅದು ಬಿಗ್‌ಬಾಸ್‌ ಮನೆ. ಪ್ರೇಕ್ಷಕರಿಗೆ ನೋಡಲು ಅನುಕೂಲವಾಗುವಂತೆ ಕಲರ್‌ಫುಲ್‌ ಆಗಿ ಬಿಗ್‌ಬಾಸ್‌ ಮನೆಯನ್ನ ಪ್ರತಿ ಸೀಸನ್‌ಗೂ ವಿಭಿನ್ನವಾಗಿ ಡಿಸೈನ್‌ ಮಾಡಲಾಗುತ್ತೆ. ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಭಾರೀ ಮೊತ್ತದ ಸಂಭಾವನೆ ಕೊಡ್ತಾರೆ ಅನ್ನೋದು ಗೊತ್ತಿರುವ ವಿಚಾರ. ಆದ್ರೆ ಬಿಗ್‌ಬಾಸ್‌ ಮನೆಗೆ ಎಷ್ಟೆಲ್ಲ ಖರ್ಚಾಗುತ್ತೆ ಅನ್ನೋ ಮಾಹಿತಿ ಇದೀಗ ರಿವೀಲ್‌ ಆಗಿದೆ.

ಪ್ರತಿ ಸೀಸನ್‌ಗೆ ಬಿಗ್ ಬಾಸ್ ಮನೆಯನ್ನು ನಿರ್ಮಿಸುವ ವೆಚ್ಚ ಮತ್ತು ಪ್ರಕ್ರಿಯೆ ಹೇಗಿರುತ್ತೆ ಎಂಬ ವಿಚಾರವು ಇತ್ತೀಚೆಗೆ ಬಹಿರಂಗವಾಗಿದೆ. ಬಿಗ್‌ಬಾಸ್‌ ಮನೆಯ ವಿನ್ಯಾಸ, ಸೆಟ್ ಮಾರ್ಪಾಡುಗಳು, ಭದ್ರತೆ ಹಾಗೂ ಪ್ರದರ್ಶನದ ಕಾರ್ಯಾಚರಣೆಗಳಿಗೆ ಅಗತ್ಯವಾದ ಸಹಾಯಕ ಸಿಬ್ಬಂದಿಯನ್ನ ನೇಮಿಸಿಕೊಳ್ಳುವುದು ಸೇರಿ ಈ ವೆಚ್ಚ ಒಳಗೊಂಡಿದೆ.

ಪ್ರತಿ ಸೀಸನ್‌ನಲ್ಲಿ ಬಿಗ್ ಬಾಸ್ ಮನೆಯನ್ನು ನಿರ್ಮಿಸುವುದು ಬಹುಕೋಟಿ ವೆಚ್ಚದ ಕಾರ್ಯಾಚರಣೆಯಾಗಿದ್ದು, ಇದು ವಿನ್ಯಾಸ, ಕಾರ್ಮಿಕ, ತಂತ್ರಜ್ಞಾನ ಮತ್ತು ಸೌಲಭ್ಯಗಳಲ್ಲಿ ಪ್ರಮುಖ ಹೂಡಿಕೆಗಳನ್ನು ಒಳಗೊಂಡಿರುತ್ತದೆ. ಒಂದು ಸೀಸನ್‌ನಲ್ಲಿ ಮನೆಗೆ ಬಳಸುವ ಹೆಚ್ಚಿನ ವಸ್ತುಗಳು, ಉಪಕರಣಗಳನ್ನು ಮರುಬಳಕೆ ಮಾಡಲಾಗುವುದಿಲ್ಲ. ಲಾಜಿಸ್ಟಿಕ್ಸ್, ಸೆಟ್ ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಕೂಡ ಭಾರೀ ಮೊತ್ತದಲ್ಲಿದೆ.

bigg-boss-kannada-12-house-construction-cost-how-much-does-it-take

ಭದ್ರತೆ ಮತ್ತು ಕಣ್ಗಾವಲು ಪ್ರಮುಖ ಆದ್ಯತೆಯಾಗಿದ್ದು, ಬಿಗ್‌ಬಾಸ್‌ ಮನೆ ಆವರಣದಾದ್ಯಂತ ದುಬಾರಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಸಾಮಾನ್ಯವಾಗಿ ಇವುಗಳನ್ನು ಬಾಡಿಗೆಗೆ ಪಡೆದು ಒಂದು ಸೀಸನ್‌ ನಂತರ ಹಿಂತಿರುಗಿಸಲಾಗುತ್ತದೆ. ಸ್ಪರ್ಧಿಗಳ ದೈನಂದಿನ ಬಳಕೆಗಾಗಿ ರೆಫ್ರಿಜರೇಟರ್‌ಗಳು, ಓವನ್‌ಗಳು, ಗ್ಯಾಸ್ ಸ್ಟೌವ್‌ಗಳು ಮತ್ತು ಅಡುಗೆ ಪಾತ್ರೆಗಳಂತಹ ಅಡುಗೆ ಸಲಕರಣೆಗಳನ್ನು ಸಹ ಇಡಲಾಗುತ್ತದೆ. ಇವುಗಳನ್ನೇ ಮುಂದಿನ ಸೀಸನ್‌ಗೆ ಬಳಸುವುದಿಲ್ಲ.

ಪ್ರಮುಖವಾಗಿ ಸ್ಪರ್ಧಿಗಳಿಗೆ ಹಾಸಿಗೆಗಳನ್ನು ಕೂಡ ಪ್ರತಿ ಸೀಸನ್‌ಗೂ ಬದಲಾಯಿಸುತ್ತದೆ. ಹಾಸಿಗೆಗಳನ್ನು ಪ್ರತಿ ಸೀಸನ್‌ಗೆ ಹೊಸದಾಗಿ ತಯಾರಿಸಲಾಗುತ್ತದೆ ಮತ್ತು ಹಳೆಯದನ್ನು ಮರುಬಳಕೆ ಮಾಡುವುದಿಲ್ಲ ಎನ್ನಲಾಗಿದೆ. ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಮನೆಯ ಒಳಗೆ ಐಷಾರಾಮಿ ವ್ಯವಸ್ಥೆ ಕಲ್ಪಿಸುವುದರಿಂದ ಇದಕ್ಕೂ ಭಾರೀ ಖರ್ಚು ಬೀಳುತ್ತದೆ. ಮನೆಯ ಒಳಾಂಗಣದ ವಿನ್ಯಾಸಕ್ಕೆ ಕಲಾ ನಿರ್ದೇಶಕರು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರತಿ ಸೀಸನ್‌ಗೂ ವಿಶೇಷವಾದ ಥೀಮ್‌ನಲ್ಲಿ ಮನೆ ನಿರ್ಮಾಣ ಮಾಡುತ್ತಾರೆ.

ಒಟ್ಟು ಖರ್ಚೆಷ್ಟು?

ವರದಿಗಳ ಪ್ರಕಾರ, ಪ್ರತಿ ಸೀಸನ್‌ಗೆ ಮನೆ ನಿರ್ಮಿಸಲು ಹಾಗೂ ನಿರ್ವಹಿಸಲು ಸುಮಾರು 500ರಿಂದ 600 ಕಾರ್ಮಿಕರು ಸುಮಾರು ಆರು ತಿಂಗಳ ಕಾಲ ಕೆಲಸ ಮಾಡುತ್ತಾರಂತೆ. ಬಿಗ್ ಬಾಸ್ ಮನೆಯನ್ನು ಒಂದು ಸೀಸನ್‌ಗೆ ನಿರ್ಮಿಸಲು ಮತ್ತು ಮರುವಿನ್ಯಾಸಗೊಳಿಸಲು ಸಾಮಾನ್ಯವಾಗಿ ₹3 ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚಾಗುತ್ತದೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+