Gauthami Jadav: ನನಗೆ ಮೂರು ಮಕ್ಕಳಿವೆ: ಬಿಗ್ ಬಾಸ್ ಗೌತಮಿ ಜಾದವ್
Gauthami Jadav: ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಸಹ ಒಂದಾಗಿದೆ. ಅದರಲ್ಲೂ ಕನ್ನಡದ ಸೀಸನ್ 11 ಸಖತ್ ಸೌಂಡ್ ಮಾಡಿದ್ದು, ಈ ವೇಳೆ ಗೌತಮಿ ಜಾದವ್ ಅವರು ಪಾಸಿಟೀವ್ ಅಂತಲೇ ಹೇಳುವ ಗಮನ ಸೆಳೆದಿದ್ದರು. ಈ ಸೀಸನ್ ಮುಗಿದ ಬಳಿಕವೇ ಅವರಿಗೆ ತುಂಬಾ ಜನ ನೆಟ್ಟಿಗರು ಹೆಚ್ಚಾಗಿ ಕೇಳವ ಒಂದೇ ಒಂದು ಪ್ರಶ್ನೆಯೆಂದರೆ ನಿಮಗೆ ಮಕ್ಕಳಿಲ್ಲವಾ? ಅಂತಾ. ಇದಕ್ಕೆ ಸ್ವತಃ ಗೌತವಿಯವರೇ ವಿಡಿಯೋವೊಂದರಲ್ಲಿ ಉತ್ತರಿಸಿ ನನಗೆ ಮೂರು ಮಕ್ಕಳು ಎಂದು ಹೇಳುವ ಮೂಲಕ ಅಚ್ಚರಿಸಿ ಮೂಡಿಸಿದ್ದಾರೆ.
ಹೌದು.. ಕನ್ನಡದ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಗೌತಮಿ ಜಾದವ್ ಅವರು ತಮಗೆ ಮಕ್ಕಳಿರುವುದಾಗಿ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಹೊರಗಡೆ ಬಂದಾಗಿನಿಂದಲೂ ನೆಟ್ಟಿಗರು ಸೇರಿದಂತೆ, ತುಂಬಾ ಜನ ನಿಮಗೆ ಮದುವೆಯಾಗಿದೆ ಮಕ್ಕಳಿಲ್ಲವಾ ಮೇಡಂ? ಎಂದು ಪ್ರಶ್ನೆ ಕೇಳುತ್ತಲೇ ಇದ್ದರು. ಈ ಪ್ರಶ್ನೆಗಳಿಗೆ ಇದೀಗ ಉತ್ತರ ನೀಡಿದ್ದು, ನನಗೆ ಮೂರು ಮಕ್ಕಳಿದ್ದಾರೆ ಎಂದು ಹೇಳಿ ಗಮನ ಸೆಳೆದಿದ್ದಾರೆ.

ನಮ್ಮ ಮನೆಯಲ್ಲಿ ಮೂರು ಮುದ್ದಾದ ಪುಟ್ಟ ನಾಯಿ ಮರಿಗಳಿವೆ. ಅವುಗಳೇ ನನ್ನ ಮಕ್ಕಂತೆ ಕಾಣುತ್ತೇನೆ. ಈಗ ಅವು ತುಂಬಾ ಚೆನ್ನಾಗಿದ್ದು, ನಾವೂ ಸಹ ಅವುಗಳ ಜೊತೆ ಕಾಲ ಕಳೆಯುತ್ತಾ ತುಂಬಾ ಸಂತೋಷವಾಗಿದ್ದೇವೆ ಎಂದು ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವಿಡಿಯೋವನ್ನು ಅವರದ್ದೇ Gouthami Jadav ಎಂಬ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಖತ್ ವೈರಲ್ ಆಗುತ್ತಿದೆ. ಇದುವರೆಗೂ ಈ ವಿಡಿಯೋಗೆ 7.2k ಮೆಚ್ಚುಗೆಗಳು, 9 ಕಾಮೆಂಟ್ಸ್ ಬಂದಿದ್ದು, ಇಬ್ಬರು ಶೇರ್ ಮಾಡಿಕೊಂಡಿದ್ದಾರೆ.
ಗೌತಮಿ ಜಾದವ್ ಅವರು ಬಿಗ್ ಬಾಸ್‌ಗೂ ಬರೋದಿಕ್ಕೂ ಮುಂಚೆ ಸತ್ಯ ಧಾರವಾಹಿಯಿಯಲ್ಲಿ ಸತ್ಯ ಪಾತ್ರದ ಮೂಲಕ ರಘಡ್ ಲುಕ್‌ನಲ್ಲಿ ಕಾಣಿಸಿಕೊಂಡು ವೀಕ್ಷಕರ ಮನ ಗೆದ್ದವರಾಗಿದ್ದರು. ಇವರ ಹೆಸರು ಗೌತಮಿ ಜಾದವ್ ಎಂದು ಬಹುತೇಕ ಮಂದಿಗೆ ಗೊತ್ತಾಗಿದ್ದೇ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಮೇಲೆ. ಬಿಗ್ ಬಾಸ್ ಮುಗಿದ ಬಳಿಕ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.
ಆದರೆ ಇದೀಗ ಮತ್ತೊಂದು ಸೀರಿಯಲ್ ಭಾರ್ಗವಿ ಎಲ್‌ಎಲ್‌ಬಿಯಲ್ಲಿ ಮತ್ತೆ ಅದೇ ರಘಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸತ್ಯ ಸೀರಿಯಲ್‌ನಲ್ಲಿ ಥೇಟ್ ಗಂಡು ಮಕ್ಕಳಂತೆ ಬಟ್ಟೆ ಧರಿಸಿ ಫೈಟಿಂಗ್ ಮಾಡಿದ್ದರು. ಇದೀಗ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ಮತ್ತೆ ಅದೇ ಗೆಟಪ್‌ನಲ್ಲೇ ಗ್ರ್ಯಾಂಡ್ ಎಂಟ್ರಿ ಕೊಟ್ಟು ಗಮನ ಸೆಳೆದಿದ್ಧಾರೆ.
ಮೊದಲ ಪ್ರೋಮೋದಲ್ಲಿ ಸೀರೆಯಲ್ಲಿ ಕಾಣಿಸಿಕೊಂಡು ವೀಕ್ಷರ ಗಮನ ಸೆಳದಿದ್ದರು. ಆದರೆ ಇದೀಗ ಸದ್ಯ ನಟಿ ಗೌತಮಿ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾರ್ಗವಿ ಪಾತ್ರದಲ್ಲಿ ರಾಧಾ ಭಗವತಿ ಅವರು ನಟಿಸುತ್ತಿದ್ದಾರೆ. ಇದೇ ಧಾರಾವಾಹಿಯಲ್ಲಿ ಭಾರ್ಗವಿಗೆ ಪ್ರಾಣಾಪಾಯ ಎದುರಾಗಿದ್ದು, ಅವಳನ್ನು ಕಾಪಾಡಲು ಗೌತಮಿ ಜಾಧವ್ ಅವರು ವಿಶೇಷ ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ನೋಡಿದ ವೀಕ್ಷಕರು ಸತ್ಯ ಈಸ್ ಬ್ಯಾಕ್ ಅಂತಿದ್ದಾರೆ.












Click it and Unblock the Notifications