ನಟಿಯರ ಫೋಟೋ..ರೇಟ್ ಫಿಕ್ಸ್..ಅಡ್ವಾನ್ಸ್: ನಮ್ರತಾ ಬಿಚ್ಚಿಟ್ಟ Event ಕರಾಳ ಸತ್ಯ
ಚಿತ್ರರಂಗದಲ್ಲಿ ಇತ್ತೀಚಿಗೆ ಮೀಟೂ ಪ್ರಕರಣ ಮತ್ತೆ ಸದ್ದು ಮಾಡಿತ್ತು. ನಟಿಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ಏಕಾಏಕಿ ಧ್ವನಿ ಎತ್ತಿದ್ದ ಫೈರ್ ಸಂಸ್ಥೆ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿತ್ತು. ಸಮಿತಿ ರಚಿಸಬೇಕು ಎನ್ನುವ ಬಹು ನಟ-ನಟಿಯರ ಆಗ್ರಹ ಈಗಲೂ ಒತ್ತಾಯವಾಗಿಯೇ ಉಳಿದುಕೊಂಡಿದ್ದು, ಯಾವುದೇ ತಾರ್ಕಿಕ ಅಂತ್ಯ ಕಂಡಿಲ್ಲ.
ಅದೇನೆ ಇರಲಿ ಚಿತ್ರರಂಗದಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದೆಯೇ..? ಕಾಸ್ಟಿಂಗ್ ಕೌಚ್ ಎನ್ನುವುದು ಮನೋರಂಜನಾ ಕ್ಷೇತ್ರದಲ್ಲಿ ಇದೆಯಾ ಎನ್ನುವ ಪ್ರಶ್ನೆಗೆ ಬಿಗ್ ಬಾಸ್ ಖ್ಯಾತಿಯ ನಮೃತಾ ಉತ್ತರಿಸಿದ್ದು, ಇತ್ತೀಚಿಗೆ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

'ನಾನು ಬಾಲ ಕಲಾವಿದೆ ಆಗಿರುವುದರಿಂದ ನನಗೆ ಲಾಭ ಏನು ಎಂದರೆ ಮೊದಲಿಂದನೂ ಎಲ್ಲರೂ ನನ್ನನ್ನು ನೋಡಿದ್ದಾರೆ. ಹಾಗಾಗಿ ನನ್ನನ್ನು ಬೇರೆ ರೀತಿಯಾಗಿ ಯಾರು ನನ್ನ ನೋಡಲೇ ಇಲ್ಲ. ನಾನು ಶೂಟಿಂಗ್ ಹೋಗಬೇಕಾದರೆ ನನ್ನ ಅಪ್ಪ ಅಮ್ಮ ಬರುತ್ತಿದ್ದರು. ನನ್ನ ಸ್ನೇಹಿತರು ಕೂಡ ನಾಲ್ಕೈದು ಜನ ನೋಡಬಹುದು ಅಷ್ಟೇ. ಈ ರೀತಿ ವಾತಾವರಣದಲ್ಲಿ ಬೆಳೆದಿರುವುದರಿಂದ ಯಾರೂ ನನ್ನನ್ನು ಆ ರೀತಿ ಕೇಳಿಲ್ಲ' ಎಂದರು.
'ಆದರೆ ಇತ್ತೀಚಿಗೆ ಬೇರೆಯವರ ಜೊತೆ ನನ್ನ ಹೆಸರು ಕೂಡ ಕಮಿಟ್‌ಮೆಂಟ್ ವಿಚಾರದಲ್ಲಿ ತಳುಕು ಹಾಕಿಕೊಂಡಿತ್ತು. ಇತ್ತೀಚಿಗೆ ಯಾರೋ ಒಬ್ಬರು ಕಾಸ್ಟಿಂಗ್ ಡೈರೆಕ್ಟರ್ ಕರೆ ಮಾಡುತ್ತಾರೆ. ಹೋಗಬೇಕು ಎನ್ನುತ್ತಾರೆ. ನನಗೆ ಮೊದಲು ಅರ್ಥ ಆಗಲಿಲ್ಲ ಯಾಕೆಂದರೆ ನನಗೆ ಆ ರೀತಿ ಯಾವತ್ತೂ ಯಾರು ಕಾಲ್ ಮಾಡಿಲ್ಲ. ಕೆದುಕಿ ಕೇಳದೆ ನನಗೆ ಗೊತ್ತಾಗಿಲ್ಲ ಅಂತಾ. ಅದಕ್ಕೆ ಆ ವ್ಯಕ್ತಿ ನಿಮಗೆ ಗೊತ್ತಿಲ್ವಾ ಕಮಿಟ್‌ಮೆಂಟ್ ಅಂತಾ ಹೇಳಿದರು.
ಇತ್ತೀಚಿಗೆ ಅವರು ಕಮಿಟ್‌ಮೆಂಟ್ ಅನ್ನು ಈವೆಂಟ್ ಅಂತಾ ಕರೆಯುತ್ತಾರೆ. ಈಗ ಹೇಗಂದ್ರೆ ಕಮಿಟ್‌ಮೆಂಟ್ ಹೋಗುತ್ತಿರಾ ಕೇಳಲ್ಲ, ಈವೆಂಟ್ ಹೋಗುತ್ತಿರಾ ಕೇಳುತ್ತಾರೆ. ಅದಾದ ಮೇಲೆ ಮತ್ತೊಬ್ಬ ಹೆಂಗಸು ಕಾಲ್ ಮಾಡಿ ಈವೆಂಟ್ ಇದೆ ಎನ್ನುತ್ತಾಳೆ. ಏನು ಅಂತಾ ಕೇಳಿದಾಗ, ಈ ಹಿಂದೆ ಆ ಮನುಷ್ಯ ಕಾಲ್ ಮಾಡಿ ಹೇಳಿದ್ದರಲ್ವಾ..? ಹಾಗಾಗಿ ಸಂಜೆ ಈವೆಂಟ್ ಇದೆ ಎನ್ನುತ್ತಾರೆ. ನನಗೆ ಏನೂ ಅಂದರೆ ಏನೂ ಅರ್ಥ ಆಗಲ್ಲ. ಕೊನೆಗೆ ನನಗೆ ಎನೂ ಗೊತ್ತಿಲ್ಲ ಅಂತಾ ಕಾಲ್ ಕಟ್ ಮಾಡಿ ಇಟ್ಟೆ' ಎಂದು ಹೇಳಿದರು.

'ಆಮೇಲೆ ಆ ಹೆಂಗಸಿನ ಫೋಟೋ ನೋಡಿ ಸ್ಕ್ರೀನ್‌ಶಾರ್ಟ್ ತೆಗೆದುಕೊಂಡು ಯಾವುದಕ್ಕೂ ಇರಲಿ ಅಂತಾ ಇಟ್ಟುಕೊಂಡೆ. ಅದಾದ ಮೇಲೆ ಸ್ಕ್ರೀನ್‌ಶಾರ್ಟ್ ಬರಲು ಶುರುವಾಯ್ತು. ಅವರು ಒಂದು ಪ್ರೊಫೈಲ್ ಅಂತಾ ರೆಡಿ ಮಾಡುತ್ತಾರೆ. ಅವರಿಗೊಂದು ರೇಟ್ ಅಂತಾ ಫಿಕ್ಸ್ ಮಾಡುತ್ತಾರೆ. ಆಮೇಲೆ ಅವರ ಕಸ್ಟಮರ್ಸ್‌ಗಳಿಗೆ ಕಳುಹಿಸುತ್ತಾರಂತೆ. ಒಬ್ಬರು ಯಾರೋ ಬುಕ್ ಮಾಡಿದಾಗ ಅವರಿಂದ ಅಡ್ವಾನ್ಸ್ ಅಂತಾ ತೆಗೆದುಕೊಳ್ಳುತ್ತಾರಂತೆ. ಅಡ್ವಾನ್ಸ್ ತೆಗೆದುಕೊಂಡು ಮೊಬೈಲ್ ಸ್ವಿಚ್ ಆಫ್. ಈ ರೀತಿಯಾಗಿ ಒಂದು ಬ್ಯುಸಿನೆಸ್ ನಡೆಸುತ್ತಿದ್ದಾರೆ' ಎಂದು ನಮ್ರತಾ ಈವೆಂಟ್ ಹೆಸರಿನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
'ಇವರೆಲ್ಲಾ ನನ್ನ ಕೈಯಲ್ಲಿ ಸಿಕ್ಕಿ ಹಾಕಿಕೊಂಡರು. ಇಷ್ಟು ವರ್ಷದಲ್ಲಿ ಮೊದಲ ಬಾರಿಗೆ ಹೀಗೆ ಆದಾಗ ನನಗೂ ನನ್ನ ತಂದೆ ತಾಯಿಯೂ ತುಂಬಾ ಭಯ ಆಯ್ತು. ಯಾಕೆಂದರೆ ಮುಂದೆ ನನ್ನದೇ ಆದ ಬದುಕಿದೆ. ಇಂತಹ ವಿಚಾರಗಳನ್ನು ಎಷ್ಟೋ ಜನ ನಂಬಿರುತ್ತಾರೆ. ಎಲ್ಲರಿಗೂ ಅದು ತಲುಪಿದಾಗ ನಮ್ರತಾ ಹೀಗಂತೆ, ಇವರೆಲ್ಲಾ ಹೀಗೆ ದುಡ್ಡು ಮಾಡುವುದು ಅಂತಾ ಅಂದುಕೊಂಡು ಬಿಡುತ್ತಾರೆ. ಇದನ್ನು ಹೇಗೆ ಎದುರಿಸಬೇಕು ಗೊತ್ತಾಗಲಿಲ್ಲ. ಈಗ ನಾನು ಎಲ್ಲರ ಮಾಹಿತಿ ಕಲೆ ಹಾಕಿದ್ದೇನೆ. ಈ ಬಗ್ಗೆ ಕಾನೂನು ಮೂಲಕ ಹೋಗಬೇಕು ಎಂದುಕೊಂಡಿದ್ದೇನೆ. ಈ ರೀತಿ ಎಲ್ಲರಿಗೂ ಆಗೇ ಆಗಿರುತ್ತದೆ' ಎಂದು ನಟಿ ನಮ್ರತಾ ರಿಪಬ್ಲಿಕ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.












Click it and Unblock the Notifications