Bigg Boss: ನಮ್ ಸೀಸನ್‌ನಲ್ಲಿ ಜನ ಕೈಯಿಂದ ಓಟ್ ಹಾಕೋರು- ಹೀಗಂದಿದ್ದು ಯಾಕೆ ಒಳ್ಳೆ ಹುಡುಗ?
ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯುವ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ವಾರದಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು ಇದಕ್ಕಾಗಿ ವೇದಿಕೆ ಸಜ್ಜಾಗುತ್ತಿದೆ. ಈ ನಡುವೆ ಹಿಂದಿನ ಬಿಗ್‌ಬಾಸ್ ವಿನ್ನರ್ ಆಗಿದ್ದ ಒಳ್ಳೆಯ ಹುಡುಗ ಪ್ರಥಮ್ ಯಾವ ಸೀಸನ್ ಬೆಸ್ಟ್ ಎನ್ನುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಒಂದು ಓಟಿಗೆ ಎಷ್ಟು ಹಣವಿತ್ತು ಅನ್ನೋ ಬಗ್ಗೆ ಪ್ರಥಮ್ ಹಂಚಿಕೊಂಡಿದ್ದಾರೆ. ಹಾಗಾದರೆ ಪ್ರಥಮ್ ಹೇಳಿದ್ದೇನು?
ಬಿಗ್‌ಬಾಸ್ ಕನ್ನಡ ಸೀಸನ್ 4ರಲ್ಲಿ ಸ್ಪರ್ಧಿಯಾಗಿ ಆ ಮನೆಯಲ್ಲಿರುವಷ್ಟು ದಿನ ಸಖತ್ ಸದ್ದು ಮಾಡಿದ್ದರು ಪ್ರಥಮ್. ಕೊನೆಗೆ ಆ ಶೋನಲ್ಲಿ ಗೆಲುವನ್ನು ಸಾಧಿಸುವ ಮೂಲಕ ಮನೆ ಮಾತಾದರು. ಈಗಲೂ ಕೂಡ ಪ್ರಥಮ್ ಆಗಾಗ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ಕೆಲ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಪ್ರಥಮ್ ಅವರು ಬಿಗ್‌ಬಾಸ್ ಕನ್ನಡ ಸೀಸನ್ 11ರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಖಾಸಗಿ ವಾಹಿನಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಥಮ್ ಅವರು, 'ನಮ್ಮ ಸೀಸನ್‌ನಲ್ಲಿ ಜನ ಕೈಯಿಂದ ಓಟ್ ಆಕೋರು. ಒಂದು ಓಟು ಫೈನಲ್ಸ್‌ಗೆ ಆರು ರೂಪಾಯಿ ಇತ್ತು. ಬೇರೆ ಎಲ್ಲಾ ಓಟ್‌ಗೆ ಮೂರು ರೂಪಾಯಿ ಇತ್ತು. ಜನ ಕೈಯಿಂದ ಓಟ್ ಹಾಕ್ತಾಯಿದ್ದರು. ಜನ ಫೋನ್‌ನಲ್ಲಿ ಟೈಪ್ ಮಾಡಿ ಮಾಡಿ ಮೆಸೇಜ್ ಮಾಡೋರು. ನನಗೆ ಈಗಲೂ ಕೂಡ ಜನ ಸರ್.. ನನ್ನ ಹೆಂಡತಿ ನಿಮಗೆ ಓಟ್ ಮಾಡಿದರೆ ನೋಡಿ ಸರ್ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅದು ನಮಗೆ ಈಗಲೂ ಕೂಡ ಅನ್ನ ಕೊಡುತ್ತಿದೆ' ಎಂದು ಪ್ರಥಮ್ ಹೇಳಿದ್ದಾರೆ.
ನಾವು ಯಾವುದೋ ಊಟ್, ಜೀಯೋದಲ್ಲೋ ಒಂದು ಆಪ್ ಅನ್ನೋ ಡೌನ್‌ಲೋಡ್ ಮಾಡಿಕೊಂಡು ಒಂದು ಬಟನ್ ಪ್ರೆಸ್ ಮಾಡೋ ಮೂಲಕ ಗೆದ್ದಿಲ್ಲ. ಒಂದೊಂದು ಓಟ್‌ಗೆ ಮೂರು ಮೂರು ರೂಪಾಯಿ ಇತ್ತು. ಹೆಂಗಸರಿಗೆ ಫೋನ್ ಅಂದರೆ ಪ್ರೆಸ್ಟೀಜ್ ಅದು. 2016-17ರಲ್ಲಿ ಫೋನ್ ಯೂಸ್ ಮಾಡಿದರೆ ಗೌರವನೇ ಬೇರೆ. ಆಗ ಅವರು ಮಾಡಿದ ಆಶೀರ್ವಾದದಿಂದ ನಾವು ಇವತ್ತು ಕೂಡ ಅನ್ನ ತಿಂತಾಯಿದಿವಿ ಎಂದು ಪ್ರಥಮ್ ಖುಷಿಯಿಂದ ಹೇಳಿಕೊಂಡಿದ್ದಾರೆ.

ಬೇರೆ ಸೀಸನ್ ಚೆನ್ನಾಗಿ ಮಾಡ್ತಾಯಿದಾರೆ ಅದು ನನಗೆ ತುಂಬಾ ಖುಷಿ ಇದೆ. ಆದರೆ ನಮ್ಮ ಸೀಸನ್ ಹಾಗೂ ನಮ್ಮ ಸೀಸನ್‌ನಲ್ಲಿ ಇದ್ದ ಸ್ಪರ್ಧಿಗಳು ದಿ ಬೆಸ್ಟ್ ಎಂದು ಹೇಳಿದ್ದಾರೆ ಪ್ರಥಮ್. ಸೀಸನ್ ಮುಗಿದ ಬಳಿಕವೂ ನಾವು ಹೊರಗಡೆ ಒಬ್ಬರನೊಬ್ಬರು ಗೌರವದಿಂದ ನೋಡುತ್ತೇವೆ. ಹೊರಗಡೆ ಬಂದ ಮೇಲೆ ಒಬ್ಬರನ್ನೊಬ್ಬರು ದ್ವೇಷ ಮಾಡೋದಿಲ್ಲ. ಎಲ್ಲಾ ಸೀಸನ್ ಬೆಸ್ಟ್ ಆದರೆ ನಮ್ಮ ಸೀಸನ್ ನಮಗೆ ಬೆಸ್ಟ್ ಎಂದು ಪ್ರಥಮ್ ಹೇಳಿಕೊಂಡಿದ್ದಾರೆ.
ಇತ್ತೀಚಿಗೆ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿಗಳು ಒಳಗಡೆ ಇರುವ ಸ್ಪರ್ಧಿಗಳ ಬಗ್ಗೆ ಕೆಟ್ಟದಾಗಿ ಹೇಳಿಕೊಳ್ಳುವುದು ಕಂಡು ಬಂದಿದೆ. ಅವರ ಬಗ್ಗೆ ದ್ವೇಷ ಇಟ್ಟುಕೊಂಡು ಮಾತನಾಡುವುದು ಹೆಚ್ಚಾಗಿ ಕೇಳಿಬರುತ್ತದೆ. ಜೊತೆಗೆ ಕೆಲ ಸ್ಪರ್ಧಿಗಳು ನಾಲಿಗೆ ಹರಿಬಿಟ್ಟು ಮಾತನಾಡುವುದು ಇತ್ತೀಚಿನ ಶೋಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಆದರೆ ಇದರಿಂದ ಬಿಗ್‌ಬಾಸ್ ಕೂಡ ಕಡಿವಾಣ ಹಾಕಲು ಸೂಕ್ತ ಕ್ರಮಗಳನ್ನು ಕೈಗೊಂಡಿರುವುದು ಇದೆ.
ಒಂದು ವಿನ್ನರ್ ಓಟ್‌ಗೆ ಆರು ರೂಪಾಯಿ
ಬಿಗ್‌ಬಾಸ್ ಕನ್ನಡ ಸೀಸನ್ 4ರಲ್ಲಿ ಆಡುವಾಗ ವಿನ್ನರ್‌ಗೆ ಓಟ್ ಮಾಡಬೇಕು ಅಂದರೆ ಜನ ಮೆಸೇಜ್ ಟೈಪ್ ಮಾಡಿ ಕಳುಹಿಸಬೇಕಿತ್ತು. ಒಂದು ಓಟ್‌ಗೆ ಆರು ರೂಪಾಯಿ ಇತ್ತು. ಸಾಮಾನ್ಯ ಓಟ್‌ಗೆ ಮೂರು ರೂಪಾಯಿ ಇತ್ತು. ಜನರ ಆ ಆಶೀರ್ವಾದದಿಂದ ನಾವು ಇಂದಿಗೂ ಅನ್ನ ತಿನ್ನುತ್ತಿದ್ದೇವೆ. ಅವರು ಮನಸ್ಸಿನಿಂದ ಪ್ರತಿಯೊಂದು ಅಕ್ಷರ ಟೈಪ್ ಮಾಡಿ ಮತ ಚಲಾಯಿಸುತ್ತಿದ್ದರು. ಈಗಿನಂತೆ ಒಂದು ಬಟನ್ ಒತ್ತಿ ಓಟ್ ಹಾಕೋ ಕಾಲ ಅದಾಗಿರಲಿಲ್ಲ ಎಂದು ಪ್ರಥಮ್ ಹಿಂದಿನ ತಾವು ಆಡಿದ ಸೀಸನ್ ಹಾಗೂ ಇಂದಿನ ಸೀಸನ್ ನಡುವಿನ ವ್ಯತ್ಯಾಸವನ್ನು ಹೇಳಿದ್ದಾರೆ.












Click it and Unblock the Notifications