ಪೊಲೀಸರ ಮೊರೆ ಹೋದ ಬಿಗ್‌ಬಾಸ್‌ ಜಗದೀಶ್‌, ಕಾರಣ ಶಾಕಿಂಗ್!‌

ಬಿಗ್‌ಬಾಸ್‌ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ಜಗದೀಶ್‌ ಅವರು ಸದ್ಯ ಮನೆಯಿಂದ ಹೊರಬಂದಿದ್ದಾರೆ. ಇದರ ನಡುವೆ ಅವರು ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಕಚೇರಿಯ ಮೆಟ್ಟಿಲೇರಿದ್ದಾರೆ. ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ನನಗೆ ರಕ್ಷಣೆ ಬೇಕಾಗಿದೆ ಎಂದು ಜಗದೀಶ್‌ ಅವರು ಪೊಲೀಸರ ಮೊರೆ ಹೋಗಿದ್ದಾರೆ.

ಈ ಬಿಗ್‌ಬಾಸ್‌ ಸೀಸನ್‌ನಲ್ಲಿ ಮೊದಮೊದಲಿಗೆ ಜಗದೀಶ್‌ ಅವರು ಸಖತ್‌ ಕ್ರೇಜ್‌ ಹುಟ್ಟಿಸಿದ್ದರು. ಕೊನೆವರೆಗೂ ಇರುವ ಸ್ಪರ್ಧಿಗಳಲ್ಲಿ ಜಗದೀಶ್‌ ಅವರೂ ಒಬ್ಬರು ಎಂದು ಹೇಳಲಾಗಿತ್ತು. ಆದರೆ, ಬಿಗ್‌ಬಾಸ್‌ ಮನೇಲಿ ಮಾಡಿಕೊಂಡ ಕಿರಿಕ್‌ನಿಂದಾಗಿ ಜಗದೀಶ್‌ ಹಾಗೂ ರಂಜಿತ್‌ ಅವರನ್ನು ಹೊರಗೆ ಕಳಿಸಲಾಗಿತ್ತು.

Bigg Boss Contestant Jagadeesh Asked The Bengaluru Police Commissioner For Security

ಇನ್ನು ಜಗದೀಶ್‌ ಅವರು ಮನೆಯಿಂದ ಹೊರಬಂದ ನಂತರ ಅವರ ಫ್ಯಾನ್ಸ್‌ ಕೂಡ ಹೆಚ್ಚಾಗಿದ್ದಾರಂತೆ. ತಮ್ಮ ಮನೆಯ ಬಳಿ ಹೆಚ್ಚು ಜನ ಬರುತ್ತಿದ್ದಾರೆ. ಹೀಗಾಗಿ ನನಗೆ ಭದ್ರತೆ ಬೇಕು ಎಂದು ಜಗದೀಶ್ ಅವರು ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಕಮಿಷನರ್‌ ಬಿ.ದಯಾನಂದ್‌ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಜಗದೀಶ್‌ ಅವರು, ನನ್ನ ಮನೆಯ ಹತ್ತಿರ ನಿನ್ನೆ ಮೂರು ಮಂದಿ ಕುಡಿದು ಬಂದು ಗಲಾಟೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಕಮಿಷನರ್ ದಯಾನಂದ್ ಅವರಿಗೆ ಮನವಿ ಮಾಡಿರುವುದಾಗಿ​ ಜಗದೀಶ್​ ಹೇಳಿದ್ದಾರೆ.

ನಾನು ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ನನ್ನ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ನನ್ನ ಮನೆಯ ಹತ್ತಿರ ಪ್ರತಿದಿನವೂ ಸಾವಿರಾರು ಜನ ಬಂದು ಹೋಗುತ್ತಿದ್ದಾರೆ. ಅಭಿಮಾನಿಗಳು ನನ್ನ ಜೊತೆ ಮಾತನಾಡಲು ಮುಗಿಬೀಳುತ್ತಿದ್ದಾರೆ. ಅಲ್ಲಿ ಜನಸಂದಣಿ ಹೆಚ್ಚಾಗುತ್ತಿರುವುದರಿಂದ ದಯವಿಟ್ಟು ನನಗೆ ಭದ್ರತೆ ಒದಗಿಸನಬೇಕು ಎಂದು ಜಗದೀಶ್‌ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Bigg Boss Contestant Jagadeesh Asked The Bengaluru Police Commissioner For Security

ನನ್ನ ಮನೆಯ ಬಳಿ ಸಾರ್ವಜನಿಕರ ಸುರಕ್ಷತೆ ಹಾಗೂ ಜನಸಂದಣಿ ನಿಯಂತ್ರಿಸುವ ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಉದ್ದೇಶದಿಂದ ಸೂಕ್ತ ಭದ್ರತೆ ನೀಡಿ ಎಂದು ಬೆಂಗಳೂರು ಪೊಲೀಸ್‌ ಕಮೀಷನರ್‌ ಅವರಿಗೆ ಕೇಳಿಕೊಂಡಿದ್ದಾರೆ.

ಸುದೀಪ್‌ರ ವಿಚಾರದಲ್ಲಿ ಗಿಲ್ಟ್‌: ಬಿಗ್‌ಬಾಸ್‌ ರಿಯಾಲಿಟಿ ಶೋನ ಮಧ್ಯೆಯೇ ಅದರ ನಿರೂಪಕರಾದ ಕಿಚ್ಚ ಸುದೀಪ್‌ ಅವರ ತಾಯಿ ನಿಧನರಾಗಿದ್ದರು. ಈ ವಿಚಾರದ ಬಗ್ಗೆ ಜಗದೀಶ್‌ ನೋವು ಹೊರಹಾಕಿದ್ದಾರೆ. ಕಿಚ್ಚ ಸುದೀಪ್​ ಸರ್​ ಅವರ ತಾಯಿ ಇನ್ನಿಲ್ಲ ಅನ್ನೋ ವಿಚಾರದಲ್ಲಿ ನನಗೆ ಈಗಲೂ ಗಿಲ್ಟ್‌ ಇದೆ. ಕೊನೆಯ ಕ್ಷಣದಲ್ಲಿ ಸುದೀಪ್‌ ಅವರ ತಾಯಿಯ ಮುಖ ನೋಡದೆ ಇರುವುದಕ್ಕೆ ನಾನೇ ಕಾರಣ ಆದ್ನಾ? ಅನ್ನೋ ನೋವು ಬಹಳ ಕಾಡ್ತಿದೆ ಎಂದಿದ್ದಾರೆ.

ಅಲ್ಲದೆ, ಬಿಗ್​ಬಾಸ್ ಆತುರವಾಗಿ ಹೆಣ್ಣುಮಕ್ಕಳನ್ನು ಖುಷಿ ಪಡಿಸುವ ಸಲುವಾಗಿ ತಪ್ಪು ಮಾಡಿದ್ರು ಎಂದು ಅನಿಸಿದೆ. ಬಿಗ್​ಬಾಸ್​ ನನ್ನನ್ನು ಮನೆಯಿಂದ ಹೊರಗೆ ಕಳುಹಿಸುವಾಗ ಒಮ್ಮೆ ಯೋಚನೆ ಮಾಡಬೇಕಿತ್ತು ಎಂದಿದ್ದಾರೆ. ಇನ್ನು ಬಿಗ್​ಬಾಸ್​​ ಸ್ಪರ್ಧಿ ಚೈತ್ರಾ ಕುಂದಾಪುರ ವಿರುದ್ಧ​ ಜಗದೀಶ್​ ಸಿಡಿದಿದ್ದು, ಭ್ರಷ್ಟಾಚಾರ ಮಾತನಾಡುವ ಬಾಯಲ್ಲಿ ಸುದೀಪ್‌ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯಾ ಎಂದೂ ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೆ, ಬಿಗ್‌ಬಾಸ್‌ ನನ್ನ ಹೇಗೆ ಹೊರಗೆ ಕಳಿಸಿದ್ರೋ, ಅದೇ ರೀತಿ ಮತ್ತೆ ಒಳಗೆ ಕಳಿಸಿಕೊಳ್ಳಲೂಬಹುದು. ಯಾಕಂದ್ರೆ ಬಿಗ್‌ಬಾಸ್‌ ಅಂದ್ರೇನೆ ಒಂದು ಮಿರಾಕಲ್‌. ಜನ ಬಿಗ್‌ಬಾಸ್‌ ನೋಡೋದನ್ನ ತಪ್ಪಿಸಬೇಡಿ. ನಾನು ಮತ್ತೆ ಅಲ್ಲಿಗೆ ಹೋಗುವ ಸಾಧ್ಯತೆ ಇದೆ ಎಂದು ಸುಳಿವು ನೀಡಿದ್ದಾರೆ. ಇದು ಜಗದೀಶ್‌ ಫ್ಯಾನ್ಸ್‌ಗೆ ಖುಷಿಯ ವಿಚಾರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+