Gold Suresh: ಬಿಗ್‌ಬಾಸ್ ಮನೆಯಿಂದ ದಿಢೀರ್ ಆಸ್ಪತ್ರೆಗೆ ದಾಖಲಾದ ಗೋಲ್ಡ್ ಸುರೇಶ್
ಬಿಗ್ ಬಾಸ್ ಮನೆ ಅಂದರೆ ಹಾಗೆ ಅಲ್ಲಿ ದಿನಕ್ಕೊಂದು ಕಿರಿಕ್, ಜಗಳ ಇದ್ದೇ ಇರುತ್ತದೆ. ಒಬ್ಬರ ವಿರುದ್ಧ ಮತ್ತೊಬ್ಬರು ಮಾಡುವ ಸಂಚು, ಸಹಾಯ ಎಲ್ಲವನ್ನೂ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೋಡಬಹುದು. ಸ್ಪರ್ಧಿಗಳಿಗೆ ಆಗಾಗ್ಗೆ ಹಲವು ಆಟಗಳನ್ನು ಕೂಡ ಆಡಿಸಲಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಾಡುವ ಸಂದರ್ಭದಲ್ಲಿ ಸ್ಪರ್ಧಿ ಗೋಲ್ಡ್ ಸುರೇಶ್ ಪೆಟ್ಟು ಮಾಡಿಕೊಂಡಿದ್ದು ಇದೀಗ ಆಸ್ಪತ್ರೆ ಸೇರಿದ್ದಾರೆ.
ಬಿಗ್ ಬಾಸ್‌ನಲ್ಲಿ ಸ್ಪರ್ಧಿಗಳನ್ನು ನಾಲ್ಕು ತಂಡಗಳನ್ನಾಗಿ ಮಾಡಲಾಗಿತ್ತು. ಪ್ರತಿ ತಂಡಕ್ಕೆ ನೀರು ತುಂಬಿದ ಡ್ರಂ ನೀಡಲಾಗಿತ್ತು, ಡ್ರಂ ತುಂಬಾ ನೀರು ತುಂಬಿಸಿ ಅದನ್ನು ಹೊರಹೋಗದಂತೆ ನೋಡಿಕೊಳ್ಳುವುದು ಆಟದ ನಿಯಮವಾಗಿತ್ತು, ಆಟದ ಸಮಯದಲ್ಲಿ ಗೋಲ್ಡ್ ಸುರೇಶ್ ಮೇಲೆ ಆಕಸ್ಮಿಕವಾಗಿ ನೀರು ತುಂಬಿದ ಡ್ರಂ ಬಿದ್ದು ಅವಘಡ ಸಂಭವಿಸಿದೆ.

ಡ್ರಮ್ ತಮ್ಮ ಕಾಲಿನ ಮೇಲೆ ಬೀಳುತ್ತಿದ್ದಂತೆ ಗೋಲ್ಡ್ ಸುರೇಶ್ ನೋವಿನಿಂದ ಕೆಳಗೆ ಬಿದ್ದು ಒದ್ದಾಡಿದರು. ನನ್ನ ಕಾಲು ಮುರಿದು ಹೋಗಿದೆ ಎಂದು ಅವರು ಗೋಳಾಡಿದ್ದರು, ಸುರೇಶ್ ಅವರ ನೋವಿನ ಚೀರಾಟ ಕಂಡು ಒಂದು ಕ್ಷಣ ಬಿಗ್ ಬಾಸ್‌ನ ಉಳಿದ ಸ್ಪರ್ಧಿಗಳು ಗಾಬರಿಯಾಗಿದ್ದಾರೆ. ಕಾಳು ಮುರಿದುಕೊಂಡಿದ್ದರೆ ಬಿಗ್ ಬಾಸ್ ಮನೆಯಿಂದಲೇ ಹೊರ ಹೋಗಬೇಕಲ್ಲ ಎನ್ನುವ ಆತಂಕ ಕೂಡ ಶುರುವಾಗಿತ್ತು.
ಕೆಲವು ಸ್ಪರ್ಧಿಗಳು ಗೋಲ್ಡ್ ಸುರೇಶ್ ಕಾಲನ್ನು ಮುಟ್ಟಿ ನೇರವಾಗಿ ಮಾಡಲು ಪ್ರಯತ್ನಿಸಿದರು, ವಿಪರೀತ ನೋವಿನಿಂದ ಬಳಲುತ್ತಿದ್ದ ಸುರೇಶ್ ಅದಕ್ಕೆ ಅವಕಾಶ ಕೊಡಲೇ ಇಲ್ಲ. ಬಳಿಕ ಅವರನ್ ಕನ್‌ಫೆಷನ್ ಕೊಠಡಿಗೆ ಕರೆದುಕೊಂಡು ಹೋಗಲಾಯಿತು, ಅಲ್ಲಿಂದ ಅವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ವರದಿಯಾಗಿದೆ.
ಸುರೇಶ್ ಅವರ ಕಾಲು ಮುರಿದೇ ಹೋಯಿತಾ ಎಂದು ಉಳಿದ ಸ್ಪರ್ಧಿಗಳು ಆತಂಕಗೊಂಡಿದ್ದರು, ಆದರೆ ಬಿಗ್ ಬಾಸ್ ಸುರೇಶ್‌ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಗಂಭೀರವಾದ ಪೆಟ್ಟಾಗಿಲ್ಲ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದು, ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಮೈತುಂಬಾ ಚಿನ್ನ ಧರಿಸುವ ಮೂಲಕವೇ ಸುರೇಶ್ ಗೋಲ್ಡ್ ಸುರೇಶ್ ಎಂದು ಹೆಸರಾಗಿದ್ದಾರೆ. ಬಿಗ್ ಬಾಸ್ ವೇದಿಕೆಗೆ ಬಂದಾಗ ಅವರ ಬಗ್ಗೆ ಹೆಚ್ಚಿನ ಜನಕ್ಕೆ ಪರಿಚಯ ಇರಲಿಲ್ಲ. ತಾವು ಕಷ್ಟಪಟ್ಟು ದುಡಿದು ಈ ಹಂತಕ್ಕೆ ಬಂದಿರುವುದಾಗಿ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿದ್ದರು. ಅಲ್ಲದೆ ತಮ್ಮ ರಕ್ಷಣೆಗಾಗಿ ಅವರು ಆರು ಜನ ಬೌನ್ಸರ್ ಗಳನ್ನು ಇಟ್ಟುಕೊಂಡಿರುವುದನ್ನು ನೋಡಿ ಕಿಚ್ಚ ಸುದೀಪ್ ಕೂಡ ಅಚ್ಚರಿಗೊಂಡಿದ್ದರು.












Click it and Unblock the Notifications