Bigg Boss: ಬಿಗ್‌ಬಾಸ್ 3 ತಿಂಗಳಲ್ಲ ಐದೂವರೆ ತಿಂಗಳು.. ಇಲ್ಲಿದೆ ಬಿಗ್ ಅಪ್ಡೇಟ್ಸ್!
ಬಿಗ್‌ಬಾಸ್ ಕನ್ನಡ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಕೆಲವು ಸೀಸನ್‌ಗಳ ಮನರಂಜನೆಯನ್ನು ಜನ ಇನ್ನೂ ನೆನಪಿಸಿಕೊಳ್ಳುತ್ತಾರೆ. ಇನ್ನು ಮರಾಠಿ, ತಮಿಳು ಹಾಗೂ ಮಲಯಾಳಂನಲ್ಲೂ ಇತ್ತೀಚಿನ ವರ್ಷಗಳಲ್ಲಿ ಬಿಗ್‌ಬಾಸ್ ಫೇಮಸ್ ಆಗುತ್ತಿದೆ. ಇದೀಗ ಬಿಗ್‌ಬಾಸ್‌ಗೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್ಸ್ ಬರುತ್ತಿದೆ. ಅದೇನೆಂದರೆ ಬಿಗ್‌ಬಾಸ್ ಇನ್ಮುಂದೆ 3 ಅಲ್ಲ 5 ತಿಂಗಳು ಇರಲಿದೆ ಎನ್ನುವುದು.
ಬಿಗ್‌ಬಾಸ್ ಸೈಕಲಾಜಿಕಲ್ ಗೇಮ್ ಆಗಿದ್ದು ಇದೇ ಕಾರಣಕ್ಕೆ 100 ದಿನಗಳನ್ನು ನಿಗದಿ ಮಾಡಲಾಗಿದೆ ಎನ್ನುವ ಮಾತಿದೆ. ಮೂರು ತಿಂಗಳುಗಳ ಕಾಲ ಈ ಶೋ ನಡೆಯಲಿದೆ. ಈಗ ಪ್ರಯೋಗಿಕವಾಗಿ ಹಿಂದಿ ಸೀಸನ್‌ನಲ್ಲಿ ಐದೂವರೆ ತಿಂಗಳು ನಡೆಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಮುಂದುವರಿದರೆ ಮುಂದೆ ಕನ್ನಡದಲ್ಲೂ ಶೋ 3ರಿಂದ 5 ತಿಂಗಳು ಆಗುವ ಸಾಧ್ಯತೆ ಇದೆ.

ಹೌದು ನಟ ಸಲ್ಮಾನ್ ಖಾನ್ ಅವರು ಹಿಂದಿಯಲ್ಲಿ ಬಿಗ್‌ಬಾಸ್ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಬಿಗ್‌ಬಾಸ್ ಮೂರರಿಂದ ಐದು ತಿಂಗಳು ನಡೆಯಲಿದೆ. ಇದು ಮೊಟ್ಟ ಮೊದಲ ಬಾರಿ ಹಾಗೂ ವಿನೂತನ ಪ್ರಯತ್ನ ಅಂತಲೇ ಹೇಳಲಾಗುತ್ತಿದೆ. ಕನ್ನಡದಲ್ಲಿ ಬಿಗ್‌ಬಾಸ್ 11 ಸೀಸನ್‌ಗಳನ್ನು ಪೂರೈಸಿದೆ. ಕಳೆದ ಬಾರಿಯ ಬಿಗ್‌ಬಾಸ್ ಸೀಸನ್ ಸಾಕಷ್ಟು ಕಾಂಟ್ರವರ್ಸಿಗಳೇ ಸೃಷ್ಟಿಯಾಗಿತ್ತು. ಇನ್ನು ಇದೀಗ 3ರಿಂದ 5 ತಿಂಗಳು ಶೋ ಹಿಂದಿಯಲ್ಲಿ ನಡೆದರೆ ಏನೆಲ್ಲಾ ಆಗಲಿದೆ ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಅಲ್ಲಿ ಸಕ್ಸಸ್ ಕಂಡರೆ ಉಳಿದ ಭಾಷೆಗಳಲ್ಲೂ ಈ ಪ್ರಯೋಗ ಮಾಡುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ.












Click it and Unblock the Notifications