Bigg Boss: ರಜತ್‌ ವಿರುದ್ಧ ಭವ್ಯಾ ಮೋಕ್ಷಿತಾ ಸಂಚು- ಮೊಸದಾಟಕ್ಕೆ ಕೈ ಜೋಡಿಸಿದ ಭವ್ಯಾಗೆ ಪಾಠ ಕಲಿಸಿದ ಮೋಕ್ಷಿ

ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಗಿಯಲು ಇನ್ನು ಎರಡೇ ವಾರಗಳು ಬಾಕಿ ಇದೆ. ಪ್ರಸ್ತುತ ಬಿಗ್‌ಬಾಸ್‌ ಮನೆಯಲ್ಲಿ ಒಟ್ಟು ಎಂಟು ಜನ ಸ್ಫರ್ಧಿಗಳು ಉಳಿದುಕೊಂಡಿದ್ದಾರೆ. ಎಂಟು ಜನರಲ್ಲಿ ಇಬ್ಬರು ವಾರಾಂತ್ಯದಲ್ಲಿ ಎಲಿಮಿನೇಟ್ ಆದರೆ ಮತ್ತೊಬ್ಬರು ವಾರದ ಮಧ್ಯವೇ ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಾರೆ. ಇದಕ್ಕೆ ಬಿಗ್‌ಬಾಸ್‌ ಟಾಸ್ಕ್‌ ಅನ್ನು ನೀಡಿದ್ದು ಇದರಲ್ಲಿ ಭವ್ಯಾ ಹಾಗೂ ಮೋಕ್ಷಿತಾ ಬಿಗ್‌ ಪ್ಲ್ಯಾನ್ ಮಾಡಿದ್ದು ಕಂಡು ಬಂದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇಂದು ಕಲರ್ಸ್ ಕನ್ನಡ ವಾಹಿನಿ ವೀಡಿಯೋ ಕ್ಲಿಪ್‌ವೊಂದನ್ನು ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಮನೆಯಲ್ಲಿ ಮಿಡ್‌ ವೀಕ್ ಎಲಿಮಿನೇಷನ್ ಟಾಸ್ಕ್ ಶುರುವಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಬಿಗ್‌ಬಾಸ್‌ ಹೇಳುತ್ತಾರೆ. ಈ ಟಾಸ್ಕ್‌ನಲ್ಲಿ ವಿಜೇತರಾಗುವವರು ಮಿಡ್‌ ವೀಕ್ ಎಲಿಮಿನೇಷನ್‌ನಿಂದ ಪಾರಾಗುತ್ತಾರೆ. ಆದರೆ ಮನೆಯಲ್ಲಿ ಉಳಿಯಲು ಮೋಕ್ಷಿತಾ ಹಾಗೂ ಭವ್ಯಾ ನಡುವೆ ಬಿಗ್‌ ಡೀಲ್ ನಡೆದಿದ್ದು ವೀಡಿಯೋದಲ್ಲಿ ಕಂಡು ಬಂದಿದೆ. ಹಾಗಾದರೆ ಆಗಿದ್ದೇನು?

Bigg boss bhavya mokshitha plot against rajath - contestants shocked by mokshitha cheating

ಬಿಗ್‌ ಬಾಸ್‌ ಮುಗಿಯಲು ದಿನಗಳು ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳಿಗೆ ಆಟಗಳು ಕಠಿಣವಾಗುತ್ತಿವೆ. ಆದರೆ ಈ ಸಮಯದಲ್ಲಿ ಸ್ಪರ್ಧಿಗಳು ಎಷ್ಟು ನಿಯತ್ತಾಗಿ ಆಟ ಆಡುತ್ತಾರೆ? ಅವರಲ್ಲಿ ಇರುವ ಸಾಮಾರ್ಥ್ಯ ಎಷ್ಟು? ಇದೆಲ್ಲವೂ ಪರಿಗಣಿಸಲಾಗುತ್ತದೆ. ಆದರೆ ಇಲ್ಲಿ ಭವ್ಯಾ ಹಾಗೂ ಮೋಕ್ಷಿತಾ ಇಬ್ಬರೂ ಕೂಡ ರಜತ್‌ ವಿರುದ್ಧ ಸಂಚು ರೂಪಿಸಿರುವುದು ಕಂಡು ಬಂದಿದೆ.

ಮೋಕ್ಷಿತಾ ಭವ್ಯಾ ಬಿಗ್‌ ಡೀಲ್

ಬಿಗ್‌ಬಾಸ್‌ ಮಿಡ್‌ ವೀಕ್ ಎಲಿಮಿನೇಷನ್‌ನಿಂದ ಪಾರಾಗಲು ಇಂದು ಟಾಸ್ಕ್‌ವೊಂದನ್ನು ಸ್ಪರ್ಧಿಗಳಿಗೆ ನೀಡುತ್ತಾರೆ. ಈ ಟಾಸ್ಕ್‌ನಲ್ಲಿ ಗ್ರೀಸ್ ಹಾಗೂ ಎಣ್ಣೆ ಹಚ್ಚಿದ ಒಂದು ಬೋರ್ಡ್ ಮೇಲೆ ಹಗ್ಗ ಹಿಡಿದುಕೊಂಡು ಸ್ಪರ್ಧಿಗಳು ನಡೆದು ತುದಿಯಲ್ಲಿ ಸಿಕ್ಕಿಸಿದ ಮರದ ತುಂಡುಗಳನ್ನು ತಂದು ನೆಟ್‌ನಲ್ಲಿ ಹಾಕಬೇಕು. ಈ ನೆಟ್‌ಗಳಿಗೆ ಮನೆಯ ಸ್ಪರ್ಧಿಗಳ ಫೋಟೋಗಳನ್ನು ಅಂಟಿಸಲಾಗಿರುತ್ತದೆ. ಆಟದ ಕೊನೆಯಲ್ಲಿ ಯಾವ ಫೋಟೋ ಇರುವ ನೆಟ್‌ನಲ್ಲಿ ಮರದ ತುಂಡುಗಳು ಹೆಚ್ಚಾಗಿರುತ್ತೋ ಆ ಸದಸ್ಯರು ಮನೆಯಿಂದ ಎಲಿಮಿನೇಟ್ ಆಗುತ್ತಾರೆ.

Bigg boss bhavya mokshitha plot against rajath - contestants shocked by mokshitha cheating

ಇಲ್ಲಿ ಮೋಕ್ಷಿತಾ ತನ್ನ ಪಾಡಿಗೆ ಮರದ ತುಂಡುಗಳನ್ನು ತಂದು ನೆಟ್‌ನಲ್ಲಿ ಹಾಕಿದ್ದರೆ ತುಂಬಾ ಒಳ್ಳೆಯ ಸ್ಪರ್ಧಿ ಎನಿಸಿಕೊಂಡಿರುತ್ತಿದ್ದರು. ಆದರೆ ಮೋಕ್ಷಿತಾ ಮತ್ತದೇ ಹಳೆಯ ಬುದ್ಧಿ ತೋರಿಸಿದ್ದಾರೆ. ಭವ್ಯಾ ಗೌಡ ಅವರೊಂದಿಗೆ ಸೇರಿಕೊಂಡು ರಜತ್‌ ಫೋಟೋ ಇರುವ ನೆಟ್‌ನಲ್ಲೇ ಇಬ್ಬರೂ ಕೂಡ ಮರದ ತುಂಡುಗಳನ್ನು ಹಾಕಿದ್ದಾರೆ.

ಮೋಕ್ಷಿತಾ ಹಾಗೂ ಭವ್ಯ ನಡುವೆ ನಡೆದ ಈ ಡೀಲ್ ರಜತ್ ಅವರಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅಲ್ಲದೆ ರಜತ್‌ ಇದನ್ನು ಮೋಕ್ಷಿತಾ ಹಾಗೂ ಭವ್ಯಾ ಅವರಿಗೆ ಪ್ರಶ್ನೆ ಕೂಡ ಮಾಡುತ್ತಾರೆ. ಇನ್ನೂ ತ್ರಿವಿಕ್ರಮ್‌ ಅವರಿಗೂ ಈ ಒಳಸಂಚು ಅರ್ಥವಾಗುತ್ತದೆ. ಆಗ ಮೋಕ್ಷಿತಾ ನಾವು ನಿಯತ್ತಾಗಿ ಆಡಿದಿವಿ ಅಂತ ಸಮರ್ಥನೆ ಕೂಡ ಮಾಡಿಕೊಳ್ಳುತ್ತಾರೆ.

Bigg boss bhavya mokshitha plot against rajath - contestants shocked by mokshitha cheating

ಇನ್ನೂ ಇದರ ನಂತರ ಆಗಿದ್ದು ಸಿಕ್ಕಾಪಟ್ಟೆ ಮಜವಾಗಿದೆ. ಮೋಸದ ಆಟಕ್ಕೆ ಕೈ ಜೋಡಿಸಿದರೆ ಏನಾಗುತ್ತದೆ ಅನ್ನೋದನ್ನು ಮೋಕ್ಷಿತಾ ಭವ್ಯಾ ಅವರಿಗೆ ಆ ಕ್ಷಣವೇ ತಿಳಿಸಿಕೊಟ್ಟಿದ್ದಾರೆ.

ಡೀಲ್‌ ಬಳಿಕ ಭವ್ಯಾಳನ್ನ ನಾಮಿನೇಟ್ ಮಾಡಿದ ಮೋಕ್ಷಿತಾ

ಹೌದು... ರಜತ್‌ ಅವರನ್ನು ಟಾರ್ಗೇಟ್ ಮಾಡಿದ ಮೋಕ್ಷಿತಾ ಹಾಗೂ ಭವ್ಯಾ ನಡುವೆ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಜೊತೆಗೆ ಆಟ ಆಡಿದ ಮೋಕ್ಷಿತಾ ನಾಮಿನೇಟ್ ಮಾಡಲು ಭವ್ಯಾ ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಇದರಿಂದ ಮೋಸದ ಆಟಕ್ಕೆ ಕೈ ಜೋಡಿಸಿದರೆ ಜೊತೆಗೆ ಇರುವವರನ್ನೇ ತುಳಿಯಬಹುದು ಅನ್ನೋದಕ್ಕೆ ಇದೊಂದು ಉದಾಹರಣೆ. ರಜತ್‌ ಕೆಡವಲು ಭವ್ಯಾ ಜೊತೆಗೆ ಡೀಲ್ ಮಾಡಿಕೊಂಡ ಮೋಕ್ಷಿತಾ ನಂತರ ಭವ್ಯಾ ಅವರನ್ನೇ ನಾಮಿನೇಟ್ ಮಾಡಿದ್ದಾರೆ. ಈ ಕಳ್ಳಾಟ ಕಂಡು ಭವ್ಯಾ ಶಾಕ್ ಆಗಿದ್ದಾರೆ.

ಇಲ್ಲಿ ಟಿಕೆಟ್‌ ಟು ಫಿನಾಲೆಗೆ ಹೋಗಬಾರದು ಎಂದು ಭವ್ಯಾ ಅವರ ಹೆಸರನ್ನು ಮೋಕ್ಷಿತಾ ತೆಗೆದುಕೊಳ್ಳುತ್ತಾರೆ. ನಾವಿನೇಷನ್‌ನಿಂದ ಉಳಿಯಬೇಕು ಎಂದು ಭವ್ಯಾ ಜೊತೆ ಸೇರಿಕೊಂಡು ಆಡಿದ್ದಾರೆ ಮೋಕ್ಷಿತಾ. ಈ ನಾಟಕ ಕಂಡು ತ್ರಿವಿಕ್ರಮ್ ಕೂಡ ಅಚ್ಚರಿಗೊಂಡಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಅಸಲಿ ಯಾವುದು? ನಕಲಿ ಯಾವುದು? ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+