Akshata Kuki: ಕಾಣೆಯಾಗಿದ್ದ ಅಕ್ಷತಾ ಕುಕಿ ‘ಲ್ಯಾವೆಂಡರ್’ ಹೂಗಳ ಮಧ್ಯೆ ಪತ್ತೆ!
'ಬಿಗ್ ಬಾಸ್' ಕನ್ನಡ ಮೂಲಕ ಕರುನಾಡಲ್ಲಿ ಹೆಸರು ಮಾಡಿದ್ದ ಅಕ್ಷತಾ ಕುಕಿ ಬೆಳ್ಳಿತೆರೆ ಮೇಲೆ ಕೂಡ ಸದ್ದು ಮಾಡಿದ್ದರು. ಅದರಲ್ಲೂ ಕನ್ನಡ ಕಿರುತೆರೆ ಮೇಲೆ ಹೊಸ ಪ್ರಯತ್ನಕ್ಕೆ ಕೈಹಾಕಿ, 'ಬಿಗ್ ಬಾಸ್' ಓಟಿಟಿ ಕಾರ್ಯಕ್ರಮ ಬಂದಾಗ ಅಕ್ಷತಾ ಕುಕಿ ಗಮನ ಸೆಳೆದಿದ್ದರು. ಹಾಗೇ ಮುಂದೆ ಸಿನಿಮಾಗಳಲ್ಲೂ ಆಫರ್ ಪಡೆದು ಸದ್ದು ಮಾಡಿದ್ದರು. ಹೀಗಿದ್ದಾಗ ದಿಢೀರ್ ಕಣ್ಮರೆಯಾಗಿದ್ದ ಈ ನಟಿ ಇದೀಗ 'ಲ್ಯಾವೆಂಡರ್' ಹೂಗಳ ಮಧ್ಯೆ ಪತ್ತೆಯಾಗಿದ್ದಾರೆ!
ಅಂದಹಾಗೆ ಅಕ್ಷತಾ ಕುಕಿ ಮೂಲತಃ ದಾಂಡೇಲಿ ಭಾಗದವರು. ಪಟಪಟನೇ, ಹರಳು ಹುರಿದಂತೆ ಮಾತನಾಡುವ ಅಕ್ಷತಾ ಫ್ಯಾಷನ್ ಶೋ ಒಂದರ ಮೂಲಕ ಬಣ್ಣದ ಲೋಕದ ಸೆಳೆತಕ್ಕೆ ಒಳಗಾಗಿದ್ರು. ಕನ್ನಡ ಸಿನಿಮಾಗಳಲ್ಲಿ ಗಮನ ಸೆಳೆಯುವ ಪಾತ್ರಗಳಲ್ಲಿ ನಟಿಸಿದ್ದರು. ಕಿಚ್ಚ ಸುದೀಪ್ ನಿರೂಪಣೆಯ & ವೂಟ್‌ನಲ್ಲಿ ಪ್ರಸಾರವಾಗಿದ್ದ ಮೊದಲ ಬಿಗ್ ಬಾಸ್ ಓಟಿಟಿ ಸ್ಫರ್ಧಿಯಾಗಿ ಗಮನ ಸೆಳೆದಿದ್ದರು. ಈ ನಡುವೆ ಅಕ್ಷತಾ ಕುಕಿ ದಿಢೀರ್ ವಿದೇಶಕ್ಕೆ ಹಾರಿದ್ದರು.

ಅಕ್ಷತಾ ಕುಕಿ ಈಗ ಎಲ್ಲಿದ್ದಾರೆ?
ಬಿಗ್ ಬಾಸ್ ಓಟಿಟಿ ಸೀಸನ್ ಬಳಿಕ ಅಕ್ಷತಾ ಕುಕಿ ಅವರು ಮದುವೆ ಆಗಿದ್ದರು. ಮದುವೆ ನಂತರ, ಅಕ್ಷತಾ ಕುಕಿ & ಅವರ ಪತಿ ಇದೀಗ ವಿದೇಶದಲ್ಲಿ ವಾಸವಿದ್ದಾರೆ. ಹೀಗೆ ವಿದೇಶದಲ್ಲಿ ಅಕ್ಷತಾ ಅವರು ಪತಿಯ ಜೊತೆ ಲ್ಯಾವೆಂಡರ್ ಫಾರ್ಮ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಇದೀಗ ಅಕ್ಷತಾ ಅವರ ಫೋಟೋಶೂಟ್ ವೈರಲ್ ಆಗ್ತಿದ್ದು, ಇಂಟರ್‌ನೆಟ್‌ನಲ್ಲಿ ಫೋಟೋಸ್ ಗಮನ ಸೆಳೆಯುತ್ತಿವೆ. ಅಕ್ಷತಾ ಅವರು ಇತ್ತೀಚೆಗೆ ಹೊಸ ಯುಟ್ಯೂಬ್ ಚಾನಲ್ ಕೂಡ ಶುರು ಮಾಡಿದ್ದಾರೆ.
ಯುನೈಟೆಡ್ ಕಿಂಗ್ಡಮ್‌ನಲ್ಲಿ ವಾಸ!
ನಟಿ ಅಕ್ಷತಾ ಕುಕಿ ಅವರು ಮದುವೆ ನಂತರ ಪತಿ ಜೊತೆಗೆ ಇದೀಗ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್ ಪ್ರದೇಶದಲ್ಲಿ ವಾಸ ಇದ್ದಾರೆ. ಲ್ಯಾವೆಂಡರ್ ಫಾರ್ಮ್‌ನಲ್ಲಿ ಫೋಟೋಶೂಟ್ ಮಾಡಿ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಶೇರ್ ಮಾಡಿದ್ದು, ಗಮನ ಸೆಳೆಯುತ್ತಿದೆ.












Click it and Unblock the Notifications