ಬಿಗ್‌ಬಾಸ್ ಅಬ್ದು ಮದುವೆ: ಕೋಟ್ಯಧಿಪತಿಯ ಕೈ ಹಿಡಿಯುತ್ತಿರುವ ಹುಡುಗಿ ಯಾರು ಗೊತ್ತೇ?
ಬಿಗ್ ಬಾಸ್ ಸೀಸನ್ 16 ಖ್ಯಾತಿಯ ಅಬ್ದು ರೋಜಿಕ್ ಮದುವೆ ಆಗುತ್ತಿದ್ದಾರೆ. ಅಬ್ದು ರೋಜಿಕ್ ಅಂದರೆ ಯಾರು ಅಂತಾ ಯೋಜನೆ ಮಾಡುತ್ತಿದ್ದೀರಾ. ಇವರು ಅಬ್ದು ಅಂತಾನೇ ಫೇಮಸ್, ನೋಡಲು ಕುಳ್ಳಗಿರುವ ಇವರು ತೆರೆಯಲ್ಲಿ ಮುದ್ದಾಗಿ ಕಾಣುತ್ತಾರೆ. ಹೀಗಾಗಿ ಬಿಗ್‌ಬಾಸ್ ಸ್ಪರ್ಧಿಗಳು ಮಾತ್ರವಲ್ಲ ನೋಡುಗರಿಗೂ ಕೂಡ ಅಬ್ದು ರೋಜಿಕ್ ತುಂಬಾ ಇಷ್ಟವಾಗಿದ್ದರು.
ಸುಮಾರು 20 ವರ್ಷದ ಅಬ್ದು ರೋಜಿಕ್ ನೋಡಲು ಚಿಕ್ಕ ಹುಡುಗನಂತೆ ಕಾಣುತ್ತಾರೆ. ತಜಿಕಿಸ್ತಾನ್ ದೇಶದ ಈ ಗಾಯಕ ಈಗಾಗಲೇ ಕೋಟ್ಯಧಿಪತಿ ಆಗಿದ್ದು, ಸಖತ್ ಜನಪ್ರಿತೆ ಪಡೆದಿದ್ದಾರೆ. ಅಬ್ದು ಸೋಶಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ಕೂಡ ಹೌದು. ಹೀಗಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 8 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದೀಗ ಅಬ್ದು ರೋಜಿಕ್ ಮದುವೆ ಆಗುತ್ತಿರುವ ವಿಚಾರ ಹೊರ ಬಿದ್ದಿದ್ದು, ಅಬ್ದು ಕೈ ಹಿಡಿಯುವ ಲಕ್ಕಿ ಹುಡುಗಿ ಯಾರು ಎನ್ನುವ ಕುತೂಹಲ ಎಲ್ಲರಿಗಿದೆ.

ಇನ್ನು ಮದುವೆ ಬಗ್ಗೆ ಸ್ವತಃ ಅಬ್ದು ರೋಜಿಕ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.' ಗೆಳೆಯರೇ.. ನಿಮಗೆಲ್ಲ ಗೊತ್ತಿರುವಂತೆ ನನಗೆ 20 ವರ್ಷ. ಪ್ರೀತಿಯಲ್ಲಿ ಬೀಳಬೇಕು, ನಾನು ಪ್ರೀತಿಸುವ ಹುಡುಗಿ ನನ್ನನ್ನು ಗೌರವಿಸಬೇಕು, ಅತಿಯಾಗಿ ಪ್ರೀತಿ ಮಾಡಬೇಕು ಎನ್ನುವ ಆಸೆ ಇತ್ತು. ಆಗ ಈ ಹುಡುಗಿ ಸಿಕ್ಕಳು. ನಾನು ಇದನ್ನು ಊಹಿಸಿಯೂ ಇರಲಿಲ್ಲ. ಈ ಖುಷಿಯನ್ನು ಹೇಗೆ ಹೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ. ನಾನು ಸಖತ್ ಎಗ್ಸೈಟ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಒಂದು ಸರ್ಪ್ರೈಸ್ಇದೆ' ಎಂದಿರುವ ಅಬ್ದು ರಿಂಗ್ ಓಪನ್ ಮಾಡಿ ತೋರಿಸಿದ್ದಾರೆ.
ಜುಲೈ 7ರ ದಿನಾಂಕವನ್ನು ಸೇವ್ ಮಾಡಿಕೊಳ್ಳಿ ಎಂದಿರುವ ಅಬ್ದು ರೋಜಿಕ್ ನನ್ನ ಈ ಖುಷಿಯನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ತಮ್ಮ ಅಭಿಮಾನಿಗಳ ಜೊತೆ ಖುಷಿ ಹಂಚಿಕೊಂಡಿದ್ದಾರೆ. ಅಬ್ದು ವಿಡಿಯೋ ಶೇರ್ ಮಾಡಿದ್ದೇ ತಡ, ಸೆಲೆಬ್ರೆಟಿಗಳು, ಅಭಿಮಾನಿಗಳು ಸೇರಿದಂತೆ ಶುಭಾಶಯದ ಮಹಾಪೂರವೇ ಅಬ್ದುಗೆ ಹರಿದು ಬಂದಿದೆ. ಅಂದಹಾಗೆ ಅಬ್ದು ರೋಜಿಕ್ ಮದುವೆಯಾಗುತ್ತಿರುವ ಹುಡುಗಿ ಯಾರು ಅಂತಾ ಯೋಜನೆ ಮಾಡ್ತಿದ್ದೀರಾ..? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಅಬ್ದು ರೋಜಿಕ್, ಶಾರ್ಜಾದ ಅಮಿರಾ ಎಂಬ 19 ವರ್ಷದ ಯುವತಿಯನ್ನು ವಿವಾಹ ಆಗುತ್ತಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications