ಮಡೆನೂರು ಮನು ಮೇಲಿನ ಬ್ಯಾನ್ ತೆರವು ಬಗ್ಗೆ ಬಿಗ್ ಅಪ್ಡೇಟ್, ಕ್ಷಮಿಸಿದ್ರಾ ಶಿವಣ್ಣ?
ಸ್ಯಾಂಡಲ್‌ವುಡ್ ನಟರಾದ ಶಿವರಾಜ್‌ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಆಡಿಯೋ ವೈರಲ್ ಉದಯೋನ್ಮುಖ ನಟ ಮಡೆನೂರು ಮನು ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಜೈಲಿನಿಂದ ಹೊರಬಂದಿದ್ದ ಮಡೆನೂರು ಮನು ನಟ ಶಿವಣ್ಣನ ಬಳಿ ಕ್ಷಮೆ ಕೇಳಲು ಅವರ ಮನೆ ಮುಂದೆ ದಿನವಿಡೀ ಕಾದು ನಿಂತಿದ್ದರು. ಆದರೂ ಶಿವಣ್ಣ ಮನು ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮನು ಅವರ ಮೇಲಿನ ಬ್ಯಾನ್ ವಿಚಾರವಾಗಿ ಮಹತ್ವದ ಅಪ್ಡೇಟ್ ಸಿಕ್ಕಿದೆ.
ಶಿವಣ್ಣ ಹಾಗೂ ದರ್ಶನ್ ಇನ್ನೇನು ಕೆಲವೇ ವರ್ಷಗಳಲ್ಲಿ ಸಾಯ್ತಾರೆ ಎಂದು ಆ ವೈರಲ್ ಆಡಿಯೋದಲ್ಲಿತ್ತು. ಹೀಗಾಗಿ ನಟರ ಅಭಿಮಾನಿಗಳು ಮನು ವಿರುದ್ಧ ರೊಚ್ಚಿಗೆದ್ದು ಸಿನಿಮಾಗಳಿಂದ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಫಿಲ್ಮ್ ಚೇಂಬರ್ ಮಡೆನೂರು ಮನು ಅವರನ್ನು ಸಿನಿಮಾ ಚಟುವಟಿಕೆಗಳಿಂದ ಬ್ಯಾನ್ ಮಾಡುವುದಾಗಿ ಹೇಳಿತ್ತು. ಆದರೆ ಜೈಲಿನಿಂದ ಹೊರಬಂದ ನಂತರ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದ ಮನು, ಆ ಆಡಿಯೋ ನನ್ನದಲ್ಲ, ಇದು ಷಡ್ಯಂತ್ರ. ನಾನು ನಟರ ಬಳಿ ತೆರಳಿ ಕ್ಷಮೆ ಕೇಳುತ್ತೇನೆ ಎಂದಿದ್ದರು.

ಅದರಂತೆ ಮೊದಲಿಗೆ ಧ್ರುವ ಸರ್ಜಾ ಬಳಿ ಮನು ಕ್ಷಮೆ ಕೇಳಿದ್ದರು. ಬಳಿಕ ಶಿವರಾಜ್‌ಕುಮಾರ್ ಅವರ ಮನೆ ಬಳಿ ತೆರಳಿ ಕಾದರೂ ಗೇಟ್ ತೆರೆದಿರಲಿಲ್ಲ. ಹಾಗಾಗಿ ಅವರ ಕೋಪ ತಣ್ಣಗಾಗಿಲ್ಲ ಎನ್ನಲಾಗಿತ್ತು. ಇನ್ನು ದರ್ಶನ್ ಅವರಿಗೆ ಕ್ಷಮೆ ಕೇಳಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಮೂವರೂ ನಟರಿಗೆ ಕ್ಷಮೆ ಕೋರಿ ಮನು ಪತ್ರ ಬರೆದಿದ್ದಾರೆ. ಅಲ್ಲದೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರನ್ನೂ ಮನು ಭೇಟಿಯಾಗಿದ್ದು, ಮನು ಮೇಲಿನ ಬ್ಯಾನ್ ತೆರವು ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಮನು ಮನವಿಗೆ ಗ್ರೀನ್‌ಸಿಗ್ನಲ್
ಮಡೆನೂರು ಮನು ಕ್ಷಮೆ ಕೇಳಿ ಪತ್ರ ಬರೆದ ಹಿನ್ನೆಲೆ ಅವರಿಗೆ ಒಂದು ಅವಕಾಶ ನೀಡುತ್ತೇವೆ ಎಂದು ಉಮೇಶ್ ಬಣಕಾರ್ ಕೂಡ ಹೇಳಿದ್ದಾರೆ. ಮಡೆನೂರು ಮನು ವಿವಾದ ಕೋರ್ಟ್‌ವರೆಗೆ ಹೋಗಿತ್ತು. ಈಗ ಅವರಿಗೆ ಪಾಪಪ್ರಜ್ಞೆ ಹಾಗೂ ಪ್ರಾಯಶ್ವಿತ್ತ ಕಾಡುತ್ತಿದೆ. ಅಲ್ಲದೆ ಕ್ಷಮೆ ಕೋರಿ ಪತ್ರವೂ ಬರೆದಿದ್ದಾರೆ. ಬಹಿರಂಗವಾಗಿಯೂ ಕ್ಷಮೆ ಕೇಳಿದ್ದು, ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಅದನ್ನ ನಾವು ಪುರಸ್ಕರಿಸುತ್ತೇವೆ ಎಂದು ನಿರ್ಮಾಪಕರ ಸಂಘ ಹೇಳಿದೆ. ಇದರಿಂದ ಮನುಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಹಿರಿಯರು ಚಿತ್ರರಂಗವನ್ನು ಕಟ್ಟಿ ಬೆಳೆಸಲು ಸಾಕಷ್ಟು ಕೊಡುಗೆ ನೀಡಿದ್ದು, ಇನ್ನು ಮುಂದೆ ಇಂತಹ ವಿವಾದ ಆಗದಂತೆ ನೋಡಿಕೊಳ್ಳಿ. ನೀವಿನ್ನೂ ಉದಯೋನ್ಮುಖ ನಟ. ನಿಮಗೆ ಇನ್ನೂ ಭವಿಷ್ಯ ಇದೆ. ಮತ್ತೆ ಏನಾದರೂ ತಪ್ಪುಗಳಾದರೆ ಯಾರೂ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದೂ ಮಡೆನೂರು ಮನು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications