Bhavya Gowda: ತ್ರಿವಿಕ್ರಮ್‌ನಿಂದ ದೂರ ಇರು: ಪರೋಕ್ಷವಾಗಿ ಭವ್ಯ ಗೌಡಗೆ ಎಚ್ಚರಿಕೆ ಕೊಟ್ಟ ಅಕ್ಕ
ಬಿಗ್ ಬಾಸ್ ಕನ್ನಡ ಸೀಜನ್ 11 ಇನ್ನೇನು ಅಂತಿಮ ದಿನಗಳತ್ತ ಸಾಗುತ್ತಿದ್ದು, ಗ್ರ್ಯಾಂಡ್ ಫಿನಾಲೆ ಕೂಡ ಸಮೀಪಿಸುತ್ತಿದೆ. ಮೊದಲು ಹದಿನೇಳು ಬಳಿಕ ಮೂರು ಒಟ್ಟು ಇಪ್ಪತ್ತು ಜನರಿಂದ ತುಂಬಿದ್ದ ಬಿಗ್ ಬಾಸ್ ಮನೆ ಈಗ ಖಾಲಿ ಖಾಲಿಯಾಗಿದ್ದು, ಇದೀಗ ಒಂಬತ್ತು ಜನರಿಗೆ ಬಂದು ತಲುಪಿದೆ. ಇಂತಹ ಹೊತ್ತಲ್ಲಿ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್ ಮನೆಯೊಳಗೆ ಸಪ್ರೈಸ್ ಎಂಟ್ರಿ ಕೊಡುತ್ತಿದ್ದಾರೆ.
ನಿನ್ನೆಯ ಸಂಚಿಕೆಯಲ್ಲಿ ಭವ್ಯ ಗೌಡ, ತ್ರಿವಿಕ್ರಮ್ ಹಾಗೂ ರಜತ್ ಕುಟುಂಬಸ್ಥರು ಬಿಗ್ ಬಾಸ್ ಮನೆಯೊಳಗೆ ಬಂದು ಸ್ಪರ್ಧಿಗಳೊಂದಿಗೆ ಸಮಯ ಕಳೆದಿದ್ದು, ಇಂದು ಇತರ ಸ್ಪರ್ಧಿಗಳ ಕುಟುಂಬಸ್ಥರು ಬರಲಿದ್ದಾರೆ.

ನಿನ್ನೆಯ ಸಂಚಿಕೆಯಲ್ಲಿ ತಮ್ಮ ಕುಟುಂಬಸ್ಥರು ಬಂದ ವೇಳೆ, ಹೇಗಿದೆ ಎಲ್ಲಾ ನಾನೇನು ಸರಿ ಮಾಡಿಕೊಳ್ಳಬೇಕು ಎಂದು ಭವ್ಯ ಗೌಡ ತಮ್ಮ ಅಕ್ಕ ದಿವ್ಯಾ ಗೌಡ ಬಳಿ ಕೇಳಿದ್ದಾರೆ. ಇದಕ್ಕೆ ಖಡಕ್ ಆಗೇ ಉತ್ತರಿಸಿದ ದಿವ್ಯಾ ಗೌಡ ಎಲ್ಲರ ಜೊತೆಗೂ ಬೆರೆಯಬೇಕು. 'ಈಗ ಮನೆಯಲ್ಲಿ ಸ್ವಲ್ಪ ಜನರೇ ಇರುವುದು. ಜನ ಕಡಿಮೆಯಾಗುತ್ತಿರುವುದರಿಂದ ಎಲ್ಲರ ಜೊತೆಗೂ ಬೆರೆಯಬೇಕು' ಎಂದು ಸಲಹೆ ನೀಡಿದರು.
'ನೀನೀಗ ಒಂದು ಆರಾಮಾಗಿದ್ದೀಯಾ ಅದು ಓಕೆ. ಆದರೆ ಎಲ್ಲದಕ್ಕೂ ಒಂದು ಬೇಲಿ ಇರಬೇಕು. ನೀನು ಈಗ ಇರುವುದು ತಪ್ಪು ಅಂತಾ ನಾನು ಹೇಳುತ್ತಿಲ್ಲ. ಆಟದ ಕಡೆ ಗಮನ ಕೊಡು. ನೀನೊಬ್ಬಳೇ ಹೇಗೆ ಆಟ ಆಡಬೇಕು ಎನ್ನುವುದರ ಬಗ್ಗೆ ಯೋಚನೆ ಮಾಡು. ನೀನೊಬ್ಬಳೇ ಆಟ ಆಡಬೇಕು ಅಂದರೆ ಅದರ ಬಗ್ಗೆ ನೀನೊಬ್ಬಳೇ ಯೋಚನೆ ಮಾಡಬೇಕು. ಎಲ್ಲದಕ್ಕೂ ಸಲಹೆ ಕೇಳುವುದಾಗಲಿ, ಮತ್ತೊಂದಾಗಲಿ ಇರುತ್ತಲ್ಲ ಅದನ್ನು ಕಮ್ಮಿ ಮಾಡಿಕೊಳ್ಳಬೇಕು' ಎಂದರು.
ಅಕ್ಕನ ಸಲಹೆ ಉತ್ತರ ಕೊಟ್ಟ ಭವ್ಯ ಗೌಡ, 'ನಾನು ಅವರ ಹತ್ತಿರ ಯಾಕೆ ಸಲಹೆ ಕೇಳುತ್ತೇನೆ ಅಂದರೆ ನನ್ನಿಂದ ತಪ್ಪಾಗಬಾರದು ಎನ್ನುವ ಕಾರಣಕ್ಕೆ ಕೇಳುತ್ತೇನೆ. ನನ್ನ ಪ್ರಕಾರ ಅದು ತಪ್ಪಲ್ಲ, ಆದರೆ ಅದು ತಪ್ಪಾಗಿ ಕಾಣಿಸಿದರೆ ನಾನು ಸರಿ ಮಾಡಿಕೊಳ್ಳುತ್ತೇನೆ' ಎಂದರು. 'ಅದೆಲ್ಲಾ ಓಕೆ ಆದರೆ ಈ ಆಟದಲ್ಲಿ ನಿನ್ನ ನಿರ್ಧಾರಗಳನ್ನು ನೀನೇ ತೆಗೆದುಕೊಳ್ಳಬೇಕು' ಎಂದು ದಿವ್ಯಾ ಗೌಡ ಹೇಳಿದರು.

ನಿನ್ನೆಯ ಸಂಚಿಕೆಯಲ್ಲಿ ಅತಿಥಿಯಾಗಿ ಬಂದ ಭವ್ಯ ಗೌಡ ಅಕ್ಕ ದಿವ್ಯಾ ಗೌಡ ಬಿಗ್ ಬಾಸ್ ಮನೆಯಲ್ಲಿ ಎಷ್ಟು ಚೆನ್ನಾಗಿ ಎಲ್ಲರ ಜೊತೆ ನಡೆದುಕೊಂಡರು ಎಂದರೆ ಉಳಿದ ಸ್ಪರ್ಧಿಗಳು ಬಿಗ್ ಬಾಸ್ ಭವ್ಯ ಗೌಡ ಬದಲು, ದಿವ್ಯಾ ಗೌಡ ಅವರೇ ಈ ಮನೆಯಲ್ಲಿ ಇರಲಿ ಎಂದು ಮನವಿ ಮಾಡಿಕೊಂಡರು. ಇನ್ನು ನಿನ್ನೆಯ ಫ್ಯಾಮಿಲಿ ರೌಂಡ್‌ನಲ್ಲಿ ಭವ್ಯ ಗೌಡ ತಾಯಿ ಹಾಗೂ ಅವರ ಹಿರಿಯ ಅಕ್ಕನ ಮಗಳು ಸಹ ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು.












Click it and Unblock the Notifications