ಡಿವೋರ್ಸ್ ವಂದತಿ: ಕೊನೆಗೂ ಮೌನ ಮುರಿದ ಕನ್ನಡದ ನಟಿ ಭಾವನಾ

ಚಿತ್ರರಂಗದಲ್ಲಿ ನಟ-ನಟಿಯರ ಡಿವೋರ್ಸ್ ವಿಚಾರ ಇತ್ತೀಚಿಗೆ ಸಾಮಾನ್ಯವಾಗಿ ಬಿಟ್ಟಿದೆ. ಈ ಡಿವೋರ್ಸ್‌ ಎನ್ನುವ ವಿಚಾರದಲ್ಲಿ ಅನೇಕ ಜೋಡಿಗಳ ಹೆಸರು ಕೇಳಿ ಬರುತ್ತಲೇ ಇರುತ್ತದೆ. ಆ ಜೋಡಿಗಳ ನಡುವೆ ಅನ್ಯೋನ್ಯತೆ ಇದ್ದರೂ ಸಹ ಸಾಮಾಜಿಕ ಜಾಲತಾಣ ಬಳಕೆದಾರರು ಮಾತ್ರ ವಿಚ್ಛೇದನ ಸುದ್ದಿಯನ್ನು ಎಲ್ಲೆಡೆ ಹರಡಿಸುತ್ತಾರೆ. ಈ ಸಾಲಿಗೆ ಬಹುಭಾಷಾ ನಟಿ ಭಾವನಾ ಮೆನನ್‌ ಹಾಗೂ ಅವರ ಪತಿ ನವೀನ್‌ ಹೆಸರು ತುಳುಕು ಹಾಕಿಕೊಂಡಿದೆ.

ಕಿಚ್ಚ ಸುದೀಪ್‌ ಅಭಿನಯದ ಬಚ್ಚನ್‌, ಪುನೀತ್‌ ರಾಜ್‌ಕುಮಾರ್‌ ಅಭಿನಯದ ಜಾಕಿ ಹಾಗೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ರೋಮಿಯೋ ಹಾಗೂ 99, ಶಿವಣ್ಣ ಅಭಿನಯದ ಭಜರಂಗಿ ಸಿನಿಮಾ ಸೇರಿದಂತೆ ಭಾವನಾ ಮೆನನ್‌ ಕನ್ನಡದ ಅನೇಕ ಚಿತ್ರದಲ್ಲಿ ನಟಿಸಿದ್ದಾರೆ.

Bhavana Menon Addresses Divorce Rumours with Husband Naveen

ರೋಮಿಯೋ ಸಿನಿಮಾದ ಸಮಯದಲ್ಲಿ ಭಾವನ ಮೆನನ್‌ಗೆ ಕನ್ನಡ ನಿರ್ಮಾಪಕ ನವೀನ್ ಅವರ ಪರಿಚಯವಾಗಿದ್ದು, ಈ ಪರಿಚಯ ಪ್ರೀತಿಗೆ ತಿರುಗಿದ್ದು, ಕೆಲ ವರ್ಷಗಳು ಪ್ರೀತಿಸಿ ಇಬ್ಬರೂ ಪೋಷಕರನ್ನು ಒಪ್ಪಿಸಿ 7 ವರ್ಷಗಳ ಹಿಂದೆ ಕೊಚ್ಚಿಯ ತ್ರಿಶೂರ್‌ನಲ್ಲಿರುವ ಭಾವನಾ ಅವರ ಸ್ವಗೃಹದಲ್ಲಿ ಮದುವೆಯಾಗಿದ್ದರು.

ಸದ್ಯ ಬೆಂಗಳೂರಿನಲ್ಲೇ ನೆಲೆಸಿರುವ ಭಾವನಾ ಮೆನನ್‌ ಹಾಗೂ ನವೀನ್ ಜೋಡಿಯ ಮಧ್ಯೆ ಎಲ್ಲವೂ ಸರಿ ಇಲ್ಲ. ಈ ಜೋಡಿ ದೂರವಾಗಿದ್ದಾರೆ, ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎನ್ನುವ ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಇದೀಗ ಈ ಬಗ್ಗೆ ಸ್ವತಃ ನಟಿ ಭಾವನಾ ಸ್ಪಷ್ಟನೆ ನೀಡಿದ್ದಾರೆ.

Bhavana Menon Addresses Divorce Rumours with Husband Naveen

ತಮಿಳಿನ ಗಲಾಟ ತಮಿಳ್ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಭಾವನಾ, 'ನಾನು, ನವೀನ್ ಚೆನ್ನಾಗಿದ್ದೇವೆ. ಸದ್ಯಕ್ಕೆ ಎಲ್ಲವೂ ಚೆನ್ನಾಗಿದೆ. ನಾವಿಬ್ಬರು ಜೊತೆಯಾಗಿ ಚೆನ್ನಾಗಿದ್ದೀವಿ. ಅದನ್ನು ಸಾಬೀತುಪಡಿಸಲು ಫೋಟೊ ಹಾಕುತ್ತಾ ಕೂರಲು ಆಗಲ್ಲ. ದಿನಾ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕುವಂತಹ ಜೋಡಿ ನಾವಲ್ಲ. ಫೋಟೋ ಹಾಕಿದರೂ ನೀನು ನನ್ನ ಪ್ರೀತಿ, ಮುದ್ದು ಅಂತೆಲ್ಲಾ ಕ್ಯಾಪ್ಷನ್ ಕೂಡ ಕೊಡಲ್ಲ' ಎಂದಿದ್ದಾರೆ.

'ಎಲ್ಲವನ್ನೂ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುವಂತಹ ವ್ಯಕ್ತಿ ನಾನಲ್ಲ. ಒಂದು ವೇಳೆ ನಾನು ನವೀನ್‌ ಜೊತೆ ಫೋಟೋ ಹಾಕಿದರೆ ಇದು ಹಳೆಯ ಫೋಟೋ, ಈಗಿನ ಫೋಟೋ ಇಲ್ವಾ?, ಈಗ ಇಬ್ಬರ ಮಧ್ಯೆ ಸರಿ ಇಲ್ವಾ ಅಂತಾ ಕಮೆಂಟ್‌ ಮಾಡುತ್ತಾರೆ. ಆ ರೀತಿ ಕಾಮೆಂಟ್ ಮಾಡುವುದು ಅವರ ಸ್ವಾತಂತ್ರ್ಯ, ಏನು ಮಾಡಲು ಆಗುವುದಿಲ್ಲ. ಆದರೆ ನಾನು ನವೀನ್‌ ಚೆನ್ನಾಗಿದ್ದೇವೆ' ಎಂದು ಸ್ಪಷ್ಟನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+