Bhairathi Ranagal: ‘ಮಫ್ತಿ’ ಅಖಾಡದಲ್ಲಿ ದುನಿಯಾ ವಿಜಯ್ & ಶಿವಣ್ಣ ಫೈಟಿಂಗ್ ಫಿಕ್ಸ್?
ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಯಶಸ್ಸು ಕಂಡಿರುವ ಶಿವರಾಜ್‌ಕುಮಾರ್ ಅಭಿನಯದ 'ಭೈರತಿ ರಣಗಲ್' ಸಿನಿಮಾ ಕನ್ನಡಿಗರು ಮಾತ್ರವಲ್ಲ, ತಮಿಳು & ತೆಲುಗು ಸೇರಿದಂತೆ ಇಡೀ ಭಾರತೀಯ ಸಿನಿಮಾ ರಂಗದ ಮನಸ್ಸನ್ನೇ ಗೆದ್ದು ಬೀಗಿದೆ. ಪರಿಸ್ಥಿತಿ ಹೀಗಿದ್ದಾಗಲೇ, ಹೊಸ ಸುದ್ದಿಯೊಂದು ಇದೀಗ ಸಂಚಲನ ಸೃಷ್ಟಿ ಮಾಡುತ್ತಿದೆ. ದುನಿಯಾ ವಿಜಯ್ ಮತ್ತು ಶಿವಣ್ಣ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆ ಸುದ್ದಿಗೆ ಈಗ ಮತ್ತಷ್ಟು ಮೆರಗು ಸಿಕ್ಕಿದ್ದು, ಅಭಿಮಾನಿಗಳು ಥ್ರಿಲ್ ಆಗುವ ಸುದ್ದಿ ಹೊರ ಬಿದ್ದಿದೆ!
ಶಿವರಾಜ್‌ಕುಮಾರ್ ಅವರ ಸಿನಿಮಾಗಳು ಅಂದ್ರೆ ಕೋಟ್ಯಂತರ ಅಭಿಮಾನಿಗಳಿಗೆ ಕುತೂಹಲ & ಆಸಕ್ತಿ. ಯಾಕಂದ್ರೆ ಶಿವಣ್ಣ ಸಿನಿಮಾಗಳು ನೆಕ್ಸ್ಟ್ ಲೆವೆಲ್ ಅಂತಾ ಅಭಿಮಾನಿಗಳು ಈಗ ಕೂಡ ಹೊಗಳುತ್ತಾರೆ. ಸುಮಾರು ಅರ್ಧ ಶತಮಾನ ಕನ್ನಡಿಗರ ಮನಸ್ಸು ರಂಜಿಸುತ್ತಿರುವ ನಟ ಶಿವಣ್ಣ ಅವರ ಹೊಸ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ಇಂತಹ ಸಮಯದಲ್ಲೇ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಜೋಡಿಯೊಂದು ಎದುರು ಬದುರು ಬಡಿದಾಟ ನಡೆಸುವ ಸುದ್ದಿ ಹಬ್ಬಿದೆ!

ದುನಿಯಾ ವಿಜಯ್ & ಶಿವಣ್ಣ ಫೈಟಿಂಗ್ ಫಿಕ್ಸ್?
ಹೌದು, ಇಂತಹ ಸುದ್ದಿ ಹಬ್ಬಲು ಕಾರಣವಾಗಿದ್ದು 'ಭೈರತಿ ರಣಗಲ್' ಸಿನಿಮಾದ ಮುಂದಿನ ಕಥೆ. ಈ ಕಥೆಯನ್ನ ಮುಂದುವರಿಸಿ, ಮಫ್ತಿ ಎರಡನೇ ಭಾಗ ಮಾಡಲು ಈಗಾಗಲೇ ನಿರ್ಧಾರ ಮಾಡಲಾಗಿದೆ. ಇದೇ ಕಾರಣಕ್ಕೆ ಮುಂದಿನ ಭಾಗದಲ್ಲಿ ದುನಿಯಾ ವಿಜಯ್ ಕೂಡ ಶಿವಣ್ಣ ಎದುರು ವಿಲನ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿದ ಅಭಿಮಾನಿ ಬಳಗ ಕೂಡ ಥ್ರಿಲ್ ಆಗಿದೆ.












Click it and Unblock the Notifications