Bigg Boss: ಇಲ್ಲಿ ದೊಡ್ಡವ್ರು-ಚಿಕ್ಕವರು ಅಂತೇನಿಲ್ಲ, ಎಲ್ಲರನ್ನ ಹೊರಗೆ ಕಳಿಸ್ತೇನೆ: ಗುಡುಗಿದ ರಕ್ಷಿತಾ
ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ಆವೃತ್ತಿಯ ಮೊದಲ ದಿನವೇ ಎಲಿಮಿನೇಟ್ ಆಗಿದ್ದ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಮತ್ತೆ ವಾಪಸ್ ಆಗಿದ್ದಾರೆ. ಈ ನಡುವೆ ರಕ್ಷಿತಾ ರೀ-ಎಂಟ್ರಿಗೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಸೂಪರ್ ಸಂಡೇ ವಿತ್ ಬಾದ್‌ಷಾ ಕಾರ್ಯಕ್ರಮದಲ್ಲಿ ಒಬ್ಬರನ್ನು ಹೊರಗೆ ಕಳಿಸಬೇಕು ಆದ್ರೆ ಯಾರನ್ನು ಕಳುಹಿಸುತ್ತೀರಾ? ಎಂಬ ಕಿಚ್ಚನ ಪ್ರಶ್ನೆಗೆ ರಕ್ಷಿತಾ ಉತ್ತರಿಸಿದ್ದು, ಎಲ್ಲರನ್ನೂ ಹೊರಗೆ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ. ರಕ್ಷಿತಾ ಮಾತು ಕೇಳಿ ಮನೆ ಮಂದಿ ಎಲ್ಲಾ ಸೈಲೆಂಟ್ ಆಗಿದ್ದಾರೆ.
ಸೋಶಿಯಲ್ ಮೀಡಿಯಾ ಇನ್ಲ್ಫುಯೆನ್ಸರ್ ರಕ್ಷಿತಾ ಶೆಟ್ಟಿ ಕಳೆದ ವಾರ ಭಾನುವಾರ ಆರಂಭವಾದ ಬಿಗ್‌ಬಾಸ್ 12ರಲ್ಲಿ ವೇದಿಕೆ ಮೂಲಕ ಎಂಟ್ರಿ ಕೊಟ್ಟ ಸೋಶಿಯಲ್ ಮೀಡಿಯಾ ಇನ್ಲ್ಫುಯೆನ್ಸರ್ ರಕ್ಷಿತಾ ಶೆಟ್ಟಿ ಮೊದಲ ದಿನವೇ ಮನೆಯಿಂದ ಹೊರ ನಡೆದಿದ್ದರು. ಇದೇ ಮೊದಲ ಬಾರಿಗೆ ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನವೇ ಸ್ಪರ್ಧಿಯೊಬ್ಬರು ಮನೆಯಿಂದ ಹೊರ ಬಂದಿದ್ದರು. ರಕ್ಷಿತಾ ಅವರನ್ನು ಮತ್ತೆ ಬಿಗ್‌ಬಾಸ್ ಮನೆಗೆ ಕಳುಹಿಸಬೇಕೆಂಬ ಒತ್ತಾಯ ಹೆಚ್ಚಾಗಿತ್ತು. ಒತ್ತಡಕ್ಕೆ ಮಣಿದ ಬಿಗ್‌ಬಾಸ್, ರಕ್ಷಿತಾ ಅವರನ್ನು ಮತ್ತೆ ಮನೆಗೆ ವಾಪಸ್ ಕಳುಹಿಸಿದ್ದಾರೆ.

ನನ್ನ ಸಾಮರ್ಥ್ಯ ಹೇಗೆ ನಿರ್ಧರಿಸಿದ್ರಿ?
ಪ್ರತಿ ಶನಿವಾರ ನಡೆಯುವ ʻವಾರದ ಕತೆ ಕಿಚ್ಚನ ಜೊತೆʼ ಸಂಚಿಕೆಯಲ್ಲಿ ರಕ್ಷಿತಾ ಅವರು ವೇದಿಕೆಯಲ್ಲಿ ಸುದೀಪ್ ಅವರೊಂದಿಗೆ ಮಾತನಾಡಿದರು. ತಮ್ಮ ಎಲಿಮಿನೇಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದೇ ದಿನದಲ್ಲಿ ನನ್ನ ಸಾಮರ್ಥ್ಯದ ಬಗ್ಗೆ ಮನೆಯವರಿಗೆ ಹೇಗೆ ತಿಳಿಯುತ್ತದೆ. ನಾನು ಚಿಕ್ಕವಳು ಎಂಬ ಕಾರಣಕ್ಕೆ ಹಾಗೂ ಬೇರೆಯವರಿಗೆ ಹೋಲಿಸಿದರೆ ನಾನು ದೊಡ್ಡ ಸೆಲೆಬ್ರೆಟಿ ಅಲ್ಲ ಎಂದು ನನ್ನನ್ನು ಎಲಿಮಿನೇಷನ್ ಮಾಡಿದ್ರು. ಇದು ಸರಿಯಾದ ಕ್ರಮವಲ್ಲ ಎಂದು ಸುದೀಪ್ ಎದುರು ರಕ್ಷಿತಾ ಬೇಸರ ವ್ಯಕ್ತಪಡಿಸಿದ್ದರು. ಪ್ರೇಕ್ಷಕರ ಒತ್ತಡದ ಮೇಲೆ ರಕ್ಷಿತಾ ಮತ್ತೆ ದೊಡ್ಮನೆಗೆ ವಾಪಸ್ ಆಗಿದ್ದಾರೆ.
ಬಿಗ್‌ಬಾಸ್ ಹಂಚಿಕೊಂಡ ಪ್ರೋಮೋದಲ್ಲಿ ರಕ್ಷಿತಾ ಅಬ್ಬರಿಸಿದ್ದು, ಯಾಕೆ ಮಾಳು ನಿಪನಾಳ ಮತ್ತು ಸ್ಪಂದನಾ ಸೇವ್ ಆಗಬೇಕು. ನಾನು ಯಾಕೆ ಆಗಬಾರದಾಗಿತ್ತು? ಇಲ್ಲಿ ಯಾರೂ ಕೂಡ ಚಿಕ್ಕವರು ಅಥವಾ ದೊಡ್ಡವರು ಅಲ್ಲ, ಸೆಲೆಬ್ರಿಟಿ ಅಲ್ಲ, ನಾನ್-ಸೆಲೆಬ್ರಿಟಿ ಅಲ್ಲ. ದೊಡ್ಡ ದೊಡ್ಡದಾಗಿ ಮಾತಾಡೋಕೆ ಎಲ್ಲರಿಗೂ ಬರುತ್ತದೆ ಎಂದು ಖಡಕ್ ಆಗಿ ಹೇಳಿದ್ದಾರೆ. ರಕ್ಷಿತಾ ಮಾತಿಗೆ ಉಳಿದ ಸ್ಪರ್ಧಿಗಳು ತಬ್ಬಿಬ್ಬಾಗಿದ್ದಾರೆ.
ನಿಮಗೆ ವೋಟ್ ಮಾಡಿ ಬಿಗ್‌ಬಾಸ್ ಮನೆಯಿಂದ ಹೊರಗಡೆ ಹಾಕಿದ ಸ್ಪರ್ಧಿಗಳಲ್ಲಿ ಪೈಕಿ ಯಾರನ್ನಾದರೂ ಒಬ್ಬರನ್ನು ಹೊರಗೆ ಕಳಿಸಬೇಕು ಅಂದರೆ ಯಾರನ್ನು ಕಳುಹಿಸುತ್ತೀರಾ? ಎಂದು ಸುದೀಪ್ ಕೇಳಿದ್ದಕ್ಕೆ "ಎಲ್ಲರನ್ನೂ ಹೊರಗೆ ಹಾಕ್ತೇನೆ" ಎಂದು ರಕ್ಷಿತಾ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ರಕ್ಷಿತಾ ಶೆಟ್ಟಿ ಎಂಟ್ರಿಯಿಂದ ಈಗಾಗಲೇ ಶಾಕ್‌ಗೆ ಒಳಗಾಗಿರುವ ಸ್ಪರ್ಧಿಗಳು ರಕ್ಷಿತಾ ಅವರ ಮಾತಿಗೆ ಗಪ್‌ಚುಪ್ ಆಗಿದ್ದಾರೆ. ಒಂದು ವಾರದಿಂದ ಸೀಕ್ರೆಟ್ ರೂಮ್‌ನಲ್ಲಿದ್ದ ರಕ್ಷಿತಾ ಖಡಕ್ ಆಗಿ ಕಮ್‌ಬ್ಯಾಕ್ ಮಾಡಿದ್ದಾರೆ. ರಕ್ಷಿತಾ ರೀ-ಎಂಟ್ರಿಯಿಂದ ಖುಷಿಯಾಯ್ತ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅಸಲಿ ಆಟ ಈಗ ಶುರು ಎಂದಿದ್ದಾರೆ.












Click it and Unblock the Notifications