BBK 12 Finale: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಕ್ಯಾಪ್ಟನ್ ಮ್ಯೂಟೆಂಟ್ ರಘು
Bigg Boss Kannada 12 Finale: ಬಿಗ್‌ಬಾಸ್ ಕನ್ನಡ 12 ಸೆಪ್ಟೆಂಬರ್ 28, 2025ರಂದು ಆರಂಭವಾಗಿದ್ದು, ಇದೀಗ ಇಂದು (ಜನವರಿ 18, 2026) ಫಿನಾಲೆ ಹಂತ ತಲುಪಿದೆ. ಈ ವೇಳೆ ಕ್ಯಾಪ್ಟನ್ ಮ್ಯೂಟೆಂಟ್ ರಘು ದೊಡ್ಮನೆಯಿಂದ ಹೊರಬಿದ್ದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಔಟ್ ಆಗುವ ಸ್ಪರ್ಧಿ ಯಾರು ಎಂಬುದನ್ನು ಬಹಿರಂಗಪಡಿಸುವುದಕ್ಕೆ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 3 ವಿಜೇತೆ ನಟ ಶ್ರುತಿ ಅವರನ್ನು ವೇದಿಕೆಗೆ ಆಹ್ವಾನಿಸಿದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಜೊತೆಗೆ ರಘು ಕೂಡ ತಲಾ ಒಂದೊಂದು ಬಾಟಲಿಯಲ್ಲಿ ನೀರು ಹಾಕಲು ಹೇಳಿದರು. ಈ ವೇಳೆ ರಘು ಅವರ ಬಾಟಲಿಯಲ್ಲಿ ನೀರು ಕೆಂಪು ಬಣ್ಣಕ್ಕೆ ತಿರುಗಿದ ಹಿನ್ನೆಲೆ ಅವರನ್ನು ಮನೆಯಿಂದ ಹೊರಗಡೆ ಕರೆದೊಯ್ಯಲಾಯಿತು.

ಬಿಗ್‌ಬಾಸ್ ಕನ್ನಡ ಸೀಸನ್ 12 ಮನೆಯಿಂದ ಮ್ಯೂಟೆಂಟ್ ರಘು ಎಲಿಮಿನೇಟ್ ಆಗಿದ್ದಾರೆ. ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ಕಾವ್ಯ ಟಾಪ್ 4 ಸ್ಪರ್ಧಿಗಳಾಗಿ ಉಳಿದುಕೊಂಡಿದ್ದಾರೆ. ಇದರಲ್ಲಿ ಬಳಿಕ ಯಾರೂ ಹೊರಗಡೆ ಹೋಗಲಿದ್ದಾರೆ ಎಂದು ಕಾದುನೋಡಬೇಕಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಆರಂಭ ಆಗಿದೆ. ಸೀಸನ್ 12 ಇಂದಿಗೆ 112 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಸದ್ಯ ಫಿನಾಲೆಗೆ ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯಾ, ರಕ್ಷಿತಾ ಶೆಟ್ಟಿ ಟಾಪ್ ನಾಲ್ಕರಲ್ಲಿ ಉಳಿದುಕೊಂಡಿದ್ದಾರೆ. ಈ ನಾಲ್ವರಲ್ಲಿ ಒಬ್ಬರು ವಿನ್ನರ್ ಆಗಲಿದ್ದು, ಅವರಿಗೆ 37 ಕೋಟಿಗೂ ಅಧಿಕ ವೋಟ್ ಬಂದಿವೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಶನಿವಾರವೇ ಬಹಿರಂಗಪಡಿಸಿದ್ದರು.
ಫಿನಾಲೆ ತಲುಪಿದ 6 ಮಂದಿಯಲ್ಲಿ ಈಗಾಗಲೇ ಧನುಶ್ ಮನೆಯಿಂದ ಹೊರ ನಡೆದಿದ್ದಾರೆ. ಧನುಶ್ ಅದ್ಭುತವಾಗಿ ಆಟ ಆಡುವ ಮೂಲಕ ಟಾಸ್ಕ್ ಮಾಸ್ಟರ್ ಅಂತಲೇ ಕರೆಸಿಕೊಂಡಿದ್ದರು. ಉತ್ತಮ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು. ಅನವಶ್ಯಕ ವಿವಾದ, ಜಗಳಗಳನ್ನು ಮಾಡಿರಲಿಲ್ಲ. ಹಾಗಯೇ ರಘು ಕೂಡ ಕ್ಯಾಪ್ಟನ್ ರಘು ಅಂತಲೇ ಕರೆದಿಕೊಂಡಿದ್ದರು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರೂ ಸಹ ತಮ್ಮ ಆಟ, ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು.ಇದೀಗ ಅವರು 5ನೇ ಸ್ಪರ್ಧಿಯಾಗಿ ಮನೆಯಿಂದ ಹೊರಗಡೆ ಬಂದಿದ್ದಾರೆ.
ವೈಲ್ಡ್ ಕಾರ್ಡ್ ಎಂಟ್ರಿ: ರಘು ಅವರು ಬಿಗ್‌ಬಾಸ್ ಪ್ರಾರಂಭವಾಗಿ 22 ದಿನಗಳ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಬಂದ ಮೊದಲ ದಿನವೇ ಮನೆಯಲ್ಲಿ ವೇಕಪ್ ಎಂದು ಹೇಳುತ್ತಾ ನಿದ್ರೆಗೆ ಜಾರಿದ್ದ ಉಳಿದ ಸ್ಪರ್ಧಿಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದರು.
ಆರಂಭದಲ್ಲೇ ಅಶ್ವಿನಿ ಜೊತೆಗೆ ಜೋರು ಜಗಳ ಕೂಡ ಮಾಡಿಕೊಂಡಿದ್ದರು. ಅವರ ಫಿಟ್ ಬಾಡಿ ಮತ್ತು ದೊಡ್ಡ ಧ್ವನಿಯಿಂದ ಮನೆಯವರ ಮೇಲೆ ಹಿಡಿತ ಸಾಧಿಸಿದ್ದರು. ಆದರೆ, ದಿನ ಕಳೆದಂತೆ ಅವರು ದೇಹ ದೃಢವಾಗಿದ್ದರೂ, ಬೆಣ್ಣೆಯಂತಹ ಮನಸನ್ನು ಹೊಂದಿದ್ದರು. ಈ ಕುರಿತು ಮನೆಯಲ್ಲಿನ ಇತರ ಸ್ಪರ್ಧಿಗಳೇ ಹೇಳಿದ್ದಾರೆ.
ಇನ್ನೂ ಗಿಲ್ಲಿ ನಟ, ರಕ್ಷಿತಾ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು. ಅವರು ಉತ್ತಮ ಸ್ನೇಹಿತರು ಕೂಡ ಆದರು. ಆದರೆ ತಪ್ಪು ಅಂತಾ ಬಂದಾಗ ರಘು ಅವರು ಯಾವ ಸ್ನೇಹಿತ ಅಂತಾ ನೋಡುತ್ತಿರಲಿಲ್ಲ. ಮುಖದ ಮೇಲೆ ಹೊಡೆದಂತೆ ಎಚ್ಚರಿಸುತ್ತಿದ್ದರು. ಇನ್ನೂ ಗಿಲ್ಲಿ ಮೇಲೆ ದಿನ ಕಳೆದಂತೆ ಕೋಪವನ್ನು ಸಹ ಮಾಡಿಕೊಂಡರು. ಬಳಿಕ ಅವರೇ ಎಚ್ಚೆತ್ತುಕೊಂಡು ಗಿಲ್ಲಿ ಇರುವುದೇ ಹಾಗೆ, ಅವನು ತುಂಬಾ ಒಳ್ಳೆ ಮನಸಿನವನು ಅಂತೆಲ್ಲಾ ಹೇಳಿ ಕೊನೆಗೆ ಕೋಪ ತಣ್ಣಗಾಗಿಸಿಕೊಂಡಿದ್ದರು.
ರಘು ಆಟ ಮೆಚ್ಚಿದ ಪ್ರೇಕ್ಷಕರು: ಇನ್ನೂ ಮನೆಯಲ್ಲಿ ತಾನೊಬ್ಬ ಸೋಮಾರಿ, ಮನೆಯವರ ಜೊತೆ ಸಮಯ ಕಳೆಯುತ್ತಿರಲಿಲ್ಲ, ಮನೆಯವರ ಪ್ರೀತಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಬಿಗ್‌ಬಾಸ್ ಮನೆಗೆ ಬಂದ ಮೇಲೆ ನಾನು ಮಾಡುತ್ತಿದ್ದ ತಪ್ಪಿನ ಅರಿವಾಗಿದೆ ಎಂದು ರಘು ಹೇಳಿಕೊಂಡಿದ್ದರು. ಇದೀಗ ರಘು ಅವರು 5ನೇ ಸ್ಪರ್ಧಿಯಾಗಿ ಹೊರಗೆ ಹೋಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದರೂ ಅವರು ಆಡಿದ ಆಟವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.












Click it and Unblock the Notifications