ಬಾಸ್ ಬಾಸ್ ಮನೆಯಿಂದ ಅಶ್ವಿನಿ ಗೌಡ ಔಟ್
Bigg Boss 12 Finale: ಬಿಗ್‌ಬಾಸ್ ಕನ್ನಡ 12 ಸೀಸನ್ ಟ್ರೋಫಿಯನ್ನು ಅಶ್ವಿನಿ ಗೌಡ ಅವರು ಗೆಲ್ಲುತ್ತಾರೆ ಎಂದು ಬಹುತೇಕ ಮಂದಿ ಹೇಳಿದ್ದರು. ಆದರೆ, ಕೊನೇ ಗಳಿಗೆಯಲ್ಲಿ ಅಶ್ವಿನಿ ಗೌಡ ಅವರು ದೊಡ್ಮನೆಯಿಂದ ಹೊರಬಿದ್ದಿದ್ದು, ಪ್ಲ್ಯಾನ್ ಉಲ್ಟಾ ಹೊಡೆದಿದೆ.
ಬಿಗ್‌ಬಾಸ್ ಕನ್ನಡ 12 ಫಿನಾಲೆ ವೇಳೆ ಟಾಪ್ 3 ಸ್ಪರ್ಧಿ 'ರಾಜಮಾತೆ' ಅಶ್ವಿನಿ ಗೌಡ ದೊಡ್ಮನೆಯಿಂದ ಹೊರಗಡೆ ಬಂದಿದ್ದಾರೆ. ಪ್ರೇಕ್ಷಕಕ ಪ್ರಭುಗಳು ನೀಡಿದ ಮತಗಳ ನಿರ್ಣಯದ ಮೇರೆಗೆ ಅವರು ಹೊರಬಿದ್ದಿದ್ದು, ಅಭಿಮಾನಿಗಳಿಗೆ ಭಾರಿ ಬೇಸರ ತಂದಿದೆ. ಬಿಗ್ ಬಾಸ್ ಕನ್ನಡ 12 ಫಿನಾಲೆಯಿಂದ 2nd ರನ್ನರ್ ಅಪ್ ಆಗಿ ಅಶ್ವಿನಿ ಗೌಡ ಎಲಿಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ. ಎರಡನೇ ರನ್ನರ್ ಅಪ್ ಅಶ್ವಿನಿ ಗೌಡ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ವಿನ್ನರ್ ವೋಟ್‌ಗಳನ್ನು ಘೋಷಣೆ ಮಾಡಿದ್ದರು. ಈ ವೇಳೆ ಬಹುತೇಕ ಮಂದಿ ಅಶ್ವಿನಿ ಗೌಡ ಅವರೇ ವಿನ್ನರ್ ಆಗಲಿದ್ದಾರೆ ಅಂದುಕೊಂಡಿದ್ದರು. ಆದರೆ, ಇದೀಗ ಅದು ಉಲ್ಟಾ ಹೊಡೆದಿದೆ.
ಎರಡನೇ ರನ್ನರ್ ಅಪ್ ಆದ ಅಶ್ವಿನಿ: ವಿನ್ನರ್ ವೋಟ್‌ಗಳನ್ನು ಘೋಷಣೆ ಮಾಡಿದ ಬಳಿಕ, ರನ್ನರ್ ಅಪ್ ಕೂಡ ಸ್ಪಲ್ಪ ಅಂತದರಲ್ಲಿ ಇದ್ದಾರೆ ಎಂದು ಹೇಳಿದ್ದರು. ಅದರಂತೆಯೇ ಅಶ್ವಿನಿ ಗೌಡ ಎಂದು ಹಲವರು ಭಾವಿಸಿದ್ದರು. ಆದರೆ ಇದೀಗ ಅವರು ಎರಡನೇ ರನ್ನರ್ ಅಪ್ ಆಗಿದ್ದು, ಮೊದಲ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಆಗಿದ್ದಾರೆ. ಇನ್ನೂ ಎರಡನೇ ರನ್ನರ್ ಅಪ್ ಆದ ಅಶ್ವಿನಿ ಗೌಡ ಅವರು 14,00,000 ರೂಪಾಯಿ ಕ್ಯಾಶ್ ಪ್ರೈಸ್ ಪಡೆದುಕೊಂಡಿದ್ದಾರೆ.
ರಾಜಮಾತೆ ಆಗಿದ್ದ ಅಶ್ವಿನಿ: ಗಿಲ್ಲಿ ನಟ ಅವರೇ ಗೆಲ್ಲುತ್ತಾರೆ ಎಂಬುದು ಬಹುತೇಕ ವೀಕ್ಷಕರ ಅಭಿಪ್ರಾಯವಾಗಿತ್ತು. ಅವರಿಗೆ ಅಶ್ವಿನಿ ಗೌಡ ಅವರು ಭಾರೀ ಪೈಪೋಟಿ ಕೊಟ್ಟಿದ್ದರು. ಅಶ್ವಿನಿ ಗೌಡ ಅವರು ಕನ್ನಡಪರ ಹೋರಾಟಗಾರ್ತಿ ಆಗಿದ್ದಾರೆ. ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಬಳಿಕ ಅವರು ಮತ್ತಷ್ಟು ಗುರುತಿಸಿಕೊಂಡಿದ್ದಾರೆ. ಅವರು ಬಿಗ್‌ಬಾಸ್ ಮನೆಯಲ್ಲಿ 'ರಾಜಮಾತೆ' ಎಂದು ಗುರುತಿಸಿಕೊಂಡವರಾಗಿದ್ದಾರೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೊದಲ ವಾರದಲ್ಲೇ ಅಶ್ವಿನಿ ಗೌಡ ಅವರು ಖಡಕ್ ಆಗಿ ಮಾತನಾಡಲು ಶುರು ಮಾಡಿದರು. ಅದರಲ್ಲೂ 'ರಾಜಮಾತೆ' ಪಟ್ಟ ಸಿಕ್ಕ ಮೇಲಂತೂ ಮತ್ತಷ್ಟು ಗುರುತಿಸಿಕೊಂಡರು. ಇವರ ಜೊತೆ ಜಾಹ್ನವಿ ಕೂಡ ಸೇರಿಕೊಂಡು ಬೇರೆ ಸ್ಪರ್ಧಿಗಳ ಜೊತೆ ಮಾತಿನ ಯುದ್ಧ ಮುಂದುವರೆಸಿದ್ದರು.
ಮಾತಿನ ಚಕಮಕಿ: ಗಿಲ್ಲಿ ಅವರು ಅಶ್ವಿನಿ ಹಾಗೂ ಜಾಹ್ನವಿಗೆ ಗಿಲ್ಲಿ ಕಾಡಿಸುತ್ತಿದ್ದರು. ಅಶ್ವಿನಿ ಅವರಿಗೆ ಅತ್ತೆ ಮಗಳು ಅಂತಾನೇ ಕರೆಯುತ್ತಾ ಗಲಾಟೆ ತೆಗೆಯುತ್ತಿದ್ದರು. ಮತ್ತೊಂದಡೆ ಜಾಹ್ನವಿಗೆ ಕಿತಾಪತಿ ಹೆಂಗಸರೇ ಎಂದು ಕರೆದು ಕಾಡಿಸುತ್ತಿದ್ದರು ಗಿಲ್ಲಿ. ಇನ್ನೂ ಗಿಲ್ಲಿಯನ್ನು ಕಂಡರೆ ಸಾಕು ಅಶ್ವಿನಿ ಗೌಡ ಅವರು ತುಂಬಾ ಕೋಪ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಗಿಲ್ಲಿ ಹಾಗೂ ಅಶ್ವಿನಿ ಗೌಡ ಅವರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಅದು ಏಕವಚನ ಬೈಗಳವರೆಗೂ ಹೋಗುತ್ತಿತ್ತು.
ಜಾಹ್ನವಿ ಅವರು ಬಿಗ್‌ಬಾಸ್ ಮನೆಯಿಂದ ಹೊರಗಡೆ ಬಂದ ಬಳಿಕ ಅಶ್ವಿನಿ ಗೌಡ ಅವರು ಫುಲ್ ಸೈಲೆಂಟ್ ಆಗಿಬಿಡುತ್ತಾರೆ. ಇದೇ ವಿಚಾರವನ್ನೇ ಇಟ್ಟುಕೊಂಡು ಗಿಲ್ಲಿ ಮತ್ತೆ ನಾಮಿನೇಟ್ ಮಾಡಲು ಶುರು ಮಾಡುತ್ರೆತಾ. ಅಶ್ವಿನಿ ಮೇಡಂ 2.0 ಶುರು ಆಗಬೇಕು ಅಂತಾ ಹೇಳುತ್ತಾರೆ. ಅದನ್ನು ಅವರು ಹೇಗೆ ತೆಗೆದುಕೊಂಡಿದ್ದಾರೆ ಅಂದರೆ, ಸೈಲೆಂಟ್ ಆಗಿ ಮನೆಯಲ್ಲಿ ಕೆಲಸ ಮಾಡಿಕೊಂಡು ಇರಬೇಕು ಅನ್ನುವಷ್ಟರ ಮಟ್ಟಿಗೆ.
ಪ್ರೇಕ್ಷಕರ ಮನ ಗೆದ್ದ ಅಶ್ವಿನಿ ಗೌಡ: ಇನ್ನೂ ಟಾಸ್ಕ್ ವೇಳೆಯೂ ಅಶ್ವಿನಿ ಅವರು ಸೂಪರ್ ಡೂಪರ್ ಆಗಿ ಪೈಪೋಟಿ ನೀಡಿದ ಸ್ಪರ್ಧಿ ಆಗಿದ್ದರು. ಸೀಸನ್ ಕೊನೆಯಲ್ಲಿ ನಡೆದಂತಹ ಎಲ್ಲಾ ಗೇಮ್‌ಗಳಲ್ಲಿ ಉತ್ತಮವಾಗಿ ಆಟ ಆಡಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಈ ಮೂಲಕ ಅವರು ಟಾಪ್ 3 ಸ್ಪರ್ಧಿಯಾಗಿ ಬಂದು ಕಾಣಿಸಿಕೊಂಡರು. ಸೀಸನ್ ಆರಂಭದಿಂದಲೇ ಅವರು ಈ ಆಟ ಆಡಿದ್ದರೆ, ವಿನ್ನರ್ ಆಗುವ ಸಾಧ್ಯತೆ ಇತ್ತು ಎಂದು ಹೇಳಲಾಗುತ್ತದೆ.












Click it and Unblock the Notifications