ನಾನು ಶಿವಣ್ಣನ ಆ ಸಿನಿಮಾದ ಗೆಟಪ್‌ ಕಾಪಿ ಹೊಡೆದೆ: ನಟ ಬಾಲಕೃಷ್ಣ

ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ಅವರು ಇತ್ತೀಚೆಗೆ ತಮ್ಮ ಅಖಂಡ-2 ಸಿನಿಮಾದ ಟ್ರೇಲರ್‌ ಲಾಂಚ್‌ ಕಾರ್ಯಕ್ರಮವನ್ನು ಕರ್ನಾಟಕದ ಚಿಂತಾಮಣಿಯಲ್ಲಿ ಆಯೋಜಿಸಿದ್ದರು. ಇದಕ್ಕೆ ಮುಖ್ಯ ಅತಿಥಿಯಾಗಿ ನಟ ಶಿವರಾಜ್‌ ಕುಮಾರ್‌ ಅವರು ಕೂಡ ಭಾಗಿಯಾಗಿದ್ದರು. ಈ ವೇಳೆ ವೇದಿಕೆ ಮೇಲೆ ಶಿವಣ್ಣ ಅವರನ್ನು ಹೊಗಳಿದ ಬಾಲಕೃಷ್ಣ, ನಾನು ಶಿವಣ್ಣ ಸಿನಿಮಾವೊಂದರಿಂದ ಅವರ ಗೆಟಪ್‌ ಕಾಪಿ ಮಾಡಿದ್ದೀನಿ ಎಂದಿದ್ದಾರೆ.

ಇಲ್ಲಿ ಎಲ್ಲವೂ ತಗೊಳ್ಳೋದು ಕೊಡೋದು ಇದ್ದಿದ್ದೇ. ಕೆಲವು ಕಲಾವಿದರನ್ನು ನೋಡಿದಾಗ ನಾನು ಸ್ಫೂರ್ತಿ ಪಡೆಯುತ್ತೇನೆ. ನಾವು ಏನನ್ನು ಮಿಸ್‌ ಮಾಡಿಕೊಳ್ತೇವೆ ಅನ್ನೋದನ್ನು ಅಲ್ಲಿಂದ ಪಡೆಯಬೇಕಾಗುತ್ತೆ. ನನ್ನ ವೀರಸಿಂಹರೆಡ್ಡಿ ಸಿನಿಮಾದ ಗೆಟಪ್‌ ಅನ್ನು ಶಿವಣ್ಣನ ಮಫ್ತಿ ಸಿನಿಮಾದಿಂದ ಕಾಪಿ ಹೊಡೆದೆ. ಇದು ಎಲ್ಲರಿಂದಲೂ ಸಾಧ್ಯವಾಗಲ್ಲ. ನಮ್ಮಿಬ್ಬರಿಗೆ ಇದು ಚೆನ್ನಾಗಿ ಕುದುರಿದೆ.

Balakrishna Reveals I Copied Shiva Rajkumar Getup In Mufti Movie

ಇನ್ನು ಖ್ಯಾತ ನಿರ್ದೇಶಕ ಬೊಯಪಾಟಿ ಶ್ರೀನು ಅವರ ನಿರ್ದೇಶನದಲ್ಲಿ ಶಿವಣ್ಣ ಹಾಗೂ ಬಾಲಕೃಷ್ಣ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುವ ಬಗ್ಗೆಯೂ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ನಾವಿಬ್ಬರೂ ಈ ಸಿನಿಮಾ ಮಾಡೋಕೆ ರೆಡಿ ಇದ್ದೀವಿ ಎಂದು ಘೋಷಿಸಿದ್ದಾರೆ.

ಕಾರ್ಯಕ್ರಮದ ವೇಳೆ ಅಭಿಮಾನಿಗಳು ತಂದಿದ್ದ ನಟ ಪುನೀತ್‌ ರಾಜ್‌ಕುಮಾರ್‌ ಅವರ ಫೋಟೋ ಪಡೆದು, ವಿ ಲವ್‌ ಯೂ ಅಪ್ಪು, ವಿ ಮಿಸ್‌ ಯು ಎಂದಿದ್ದಾರೆ. ನಾನು ಇಲ್ಲೇ ಪಕ್ಕದ ಹಿಂದೂಪುರ ಶಾಸಕನಾಗಿ ಮೂರನೇ ಬಾರಿ ಗೆದ್ದಿದ್ದೇನೆ. ಅವರಿಗೆ ನಾನು ಸದಾ ಚಿರಋಣಿ. ನನ್ನ ಅಖಂಡ ಸಿನಿಮಾ ತೆಲುಗು, ಕನ್ನಡ ಸಿನಿಮಾ ಅಲ್ಲ, ಪ್ಯಾನ್‌ ಇಂಡಿಯಾ ಸಿನಿಮಾ ಎಂದಿದ್ದಾರೆ. ಇನ್ನು ಶಿವಣ್ಣ ಓಂ ಸಿನಿಮಾದ ಮೆಹಬೂಬ ಹಾಡನ್ನು ಹಾಡಿದ್ದಾರೆ. ಟಗರು ಸಿನಿಮಾದ ಡೈಲಾಗ್‌ ಹೊಡೆದಿದ್ದಾರೆ.

ಬಹುನಿರೀಕ್ಷಿತ ಅಖಂಡ-2 ಬಾಲಕೃಷ್ಣ ಮತ್ತು ಬೋಯಪಾಟಿ ಶ್ರೀನು ಅವರ ಪಾಲಿಗೆ ಇದುವರೆಗೆ ಕಂಡರಿಯದ ವ್ಯವಹಾರವನ್ನು ದಾಖಲಿಸಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವು 200 ಕೋಟಿ ಗಳಿಸುವ ಗುರಿ ಹೊಂದಿದೆ. ತೆಲುಗು ಆವೃತ್ತಿಯ ಥಿಯೇಟ್ರಿಕಲ್ ಹಕ್ಕುಗಳ ಮೌಲ್ಯ 123 ಕೋಟಿ ಎನ್ನಲಾಗಿದೆ. ಬಾಲಕೃಷ್ಣ ಅವರ ಅಖಂಡ-2 ವಿಶ್ವದಾದ್ಯಂತ 200 ಕೋಟಿ ಗಳಿಸುವ ನಿರೀಕ್ಷೆಯಲ್ಲಿದೆ. ಇಲ್ಲಿಯವರೆಗೆ, ಬಾಲಕೃಷ್ಣ 150 ಕೋಟಿ ಗಳಿಸಿರಲಿಲ್ಲ. ಆದರೆ ಈ ಕ್ರೇಜಿ ಸೀಕ್ವೆಲ್ ಹಿಟ್ ಆಗಲು 200 ಕೋಟಿ ಕ್ಲಬ್‌ ಸೇರಬೇಕಾಗಿದೆ.

ಅಖಂಡ ಸೀಕ್ವೆಲ್‌ನ ಕರ್ನಾಟಕದ ಎಲ್ಲ ಭಾಷೆ ಹಕ್ಕುಗಳು ₹7.5 ಕೋಟಿಗೆ ಮತ್ತು ತಮಿಳುನಾಡಿನಲ್ಲಿ ಎಲ್ಲ ಭಾಷಾ ಹಕ್ಕುಗಳು ₹2.75 ಕೋಟಿಗೆ ಮಾರಾಟವಾಗಿವೆ. ಈ ಚಿತ್ರವು ಇತರ ಭಾಷೆಗಳಿಂದ ನಿರೀಕ್ಷಿತ ಯಶಸ್ಸು ಪಡೆಯದಿದ್ದರೆ ತೆಲುಗು ಆವೃತ್ತಿ ಮಾತ್ರವೇ ಈ ಎರಡು ರಾಜ್ಯಗಳಲ್ಲಿ ₹10 ಕೋಟಿ ಪಾಲನ್ನು ಗಳಿಸುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+