Amruthadhare: "ಅಮೃತಧಾರೆ ಮಾದರಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲೂ ಮಾಡ್ಬೋದಿತ್ತು"!
Amruthadhare: ಕನ್ನಡದ ಪ್ರಸಿದ್ಧ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಗಳು ಬದಲಾವಣೆ ಆಗಿವೆ. ಈ ಸೀರಿಯಲ್‌ನ ಮಲ್ಲಿ ಪಾತ್ರಧಾರಿ ಬದಲಾವಣೆ ಆಗಿದೆ. ಮಲ್ಲಿ ಪಾತ್ರ ಅಕ್ಕೋರೆ... ಅಕ್ಕೋರೆ. ಎನ್ನುವ ಸಂಭಾಷಣೆಯಿಂದಲೇ ಹೆಚ್ಚು ಗಮನ ಸೆಳೆದಿತ್ತು. ರಾಧಾ ಭಗವತಿ ಅವರು ಹೊಸ ಸೀರಿಯಲ್‌ನಲ್ಲಿ ನಾಯಕಿಯಾಗಿದ್ದಾರೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿ ಪಾತ್ರ ಕಾಣಿಸಿಕೊಂಡಿಲ್ಲ. ಇನ್ನು ಈ ಸೀರಿಯಲ್‌ನಲ್ಲಿ ಕಳೆದ ಕೆಲವು ದಿನಗಳಿಂದ ಪ್ರಮುಖ ಪಾತ್ರಗಳನ್ನೇ ಬದಲಾವಣೆ ಮಾಡಲಾಗಿದೆ. ಆದರೆ, ಈ ನಾಜೂಕು ಬದಲಾವಣೆಯನ್ನು ಜನ ಮೆಚ್ಚಿಕೊಂಡಿದ್ದಾರೆ.
ಅಮೃತಧಾರೆ ಸೀರಿಯಲ್ ಮಾದರಿಯನ್ನೇ ಜೊತೆಜೊತೆಯಲಿ, ಪುಟ್ಟಕ್ಕನ ಮಕ್ಕಳು ಹಾಗೂ ಸೀತಾರಾಮ ಸೀರಿಯಲ್‌ನಲ್ಲೂ ಅನುಸರಿಸಬೇಕಿತ್ತು ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಮೃತಧಾರೆಯ ಪಾತ್ರಗಳ ಬದಲಾವಣೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಎಷ್ಟು ಆರಾಮಾಗಿ ಪಾತ್ರಧಾರಿಗಳ ಬದಲಾವಣೆ ಆಯ್ತು. ಈ ಧಾರಾವಾಹಿಯಲ್ಲಿ... ಇದೇ ಸರಿ.. ಸ್ವಲ್ಪ ದಿನಕ್ಕೆ ಅಡ್ಜಸ್ಟ್ ಆಗ್ತದೆ ವೀಕ್ಷಕರಿಗೂ.... ಅದು ಬಿಟ್ಟು ಜೊತೆಜೊತೆಯಲಿ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಥೆನೇ ಬೇರೆ ಮಾಡಿದ್ರು. ಸರಿ ಕಥೆ ಏನೋ ಚೇಂಜ್ ಮಾಡಿದ್ರು ಬಟ್ ಅದೂ ಹಳ್ಳ ಹಿಡೀತು ಆಮೇಲೆ. ಕುತೂಹಲಕರ ಬದಲಾವಣೆ ಇದ್ದಿದ್ರೆ ಚೆನ್ನಾಗಿರೋದು ಅಂತ ಸೌಜನ್ಯ ನಾಯಕ್ ಎನ್ನುವವರು ಹೇಳಿದ್ದಾರೆ.

Zee Kannada ವಾಹಿನಿಯಲ್ಲಿ ಅಮೃತಧಾರೆ ಸೀರಿಯಲ್ ಪ್ರಸಾರವಾಗುತ್ತಿದ್ದು. ಕುತೂಹಲಕಾರಿ ಬದಲಾವಣೆಗಳು ಜನರಿಗೆ ಇಷ್ಟವಾಗಿದೆ. ಈ ಸೀರಿಯಲ್‌ನಲ್ಲಿ ಅತ್ಯಂತ ನಾಜೂಕಿನಿಂದ ಪಾತ್ರಧಾರಿಗಳನ್ನು ಬದಲಾವಣೆ ಮಾಡುತ್ತಿದ್ದಾರೆ ಅಂತ ಪ್ರೇಕ್ಷಕರು ಹೇಳುತ್ತಿದ್ದಾರೆ. ಮಲ್ಲಿ ಪಾತ್ರವನ್ನು ಬದಲಾವಣೆ ಮಾಡಲಾಗಿದೆ. ಇದೇ ರೀತಿಯ ಬದಲಾವಣೆಯನ್ನು ಬೇರೆಯ ಸೀರಿಯಲ್‌ಗಳಲ್ಲೂ ಮಾಡುವ ಅವಕಾಶವಿತ್ತು. ಆದರೆ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಮುಖ್ಯಪಾತ್ರಧಾರಿಯನ್ನೇ ಮುಕ್ತಾಯ ಮಾಡಿದ ರೀತಿ ಸರಿಯಲ್ಲ ಎನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಪುಟ್ಟಕ್ಕನ ಮಕ್ಕಳು ನೋಡೋಕೆ ಆಗ್ತಿಲ್ಲ: ಅಮೃತಧಾರೆ ಸೀರಿಯಲ್‌ನ ಪಾತ್ರಧಾರಿಗಳ ಬದಲಾವಣೆಯ ಸಂದರ್ಭದಲ್ಲಿಯೇ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಬಗ್ಗೆಯೂ ಜನ ಚರ್ಚೆ ಮಾಡುತ್ತಿದ್ದಾರೆ. ಈ ಸೀರಿಯಲ್ ತುಂಬಾ ಚೆನ್ನಾಗಿತ್ತು. ಆದರೆ, ಮುಖ್ಯಪಾತ್ರವನ್ನು ಬದಲಾವಣೆ ಮಾಡಿದ ಮೇಲೆ ಒಳ್ಳೆಯ ಟ್ವಿಸ್ಟ್ ಕೊಡಲಿಲ್ಲ. ಈಗೀಗ ಪುಟ್ಟಕ್ಕನ ಮಕ್ಕಳು ನೋಡೋಕೆ ಆಗ್ತಿಲ್ಲ ಅಂತ ಪುಷ್ಪಲತಾ ಎನ್ನುವವರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಮಲ್ಲಿ ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ: ಮಲ್ಲಿ ಪಾತ್ರಕ್ಕೆ ಈ ಹಿಂದೆ ಇದ್ದವರು ತುಂಬಾ ಚೆನ್ನಾಗಿ ಸೂಟ್ ಆಗುತ್ತಿದ್ದರು. ಇವರಿಗಿಂತ ಹೊಸ ಮುಖವನ್ನು ಪರಿಚಯಿಸಬಹುದಿತ್ತು ಅಂತಲೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಹಳೇ ಮಲ್ಲಿ ಅವರು ಹಳ್ಳಿ ಸೊಗಡಿನ ಭಾಷೆ ಹಾಗು ಮುಗ್ಧತೆ ತುಂಬಾ ಚೆನ್ನಾಗಿ ಇತ್ತು. ಅಕ್ಕೋರ ಮುಂದೆ ಮಿಕ್ಕೋರೆಲ್ಲ ಚಿಕ್ಕೋರೆ ಅಂತಲೂ ಜನ ಕಮೆಂಟ್ ಮಾಡಿದ್ದಾರೆ. ಹೊಸ ಮಲ್ಲಿ ಪಾತ್ರಧಾರಿಯೂ ಒಳ್ಳೆಯ ನಟಿ ಅವರು ಆ ಪಾತ್ರಕ್ಕೆ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಟೈಮ್ ಆಗುತ್ತೆ. ಮುಂದಿನ ದಿನಗಳಲ್ಲಿ ಎಲ್ಲಾ ಸರಿ ಹೋಗುತ್ತೆ ಅಂತಲೂ ಜನ ಕಮೆಂಟ್ ಮಾಡಿದ್ದಾರೆ.












Click it and Unblock the Notifications