ಅರ್ಜುನ್ ಸರ್ಜಾ ಎರಡನೇ ಪುತ್ರಿ ಎಂಗೇಜ್: ಅಂಜನಾ ಹೃದಯ ಗೆದ್ದ ಹುಡುಗ ಯಾರು ಗೊತ್ತಾ?
ಹೆಮ್ಮೆಯ ಕನ್ನಡಿಗ ಅರ್ಜುನ್ ಸರ್ಜಾ ಕಳೆದ ಐದು ದಶಕಗಳಿಂದ ಭಾಷೆಯ ಭೇದ ಭಾವ ಇಲ್ಲದೇ ಕನ್ನಡ, ತೆಲುಗು, ತಮಿಳು ಹೀಗೆ ಹಲವು ಭಾಷೆಯಲ್ಲಿ ನಟಿಸಿದ್ದಾರೆ. ಅರ್ಜುನ್ ಜರ್ನಿ ಅವರ ದೊಡ್ಡ ಮಗಳು ಐಶ್ವರ್ಯ ಅವರು ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡದಲ್ಲಿ ಪ್ರೇಮ ಬರಹ ಎಂಬ ಚಿತ್ರವನ್ನು ಕೂಡ ಮಾಡಿದ್ದಾರೆ. ಕನ್ನಡದಲ್ಲಿ ಪ್ರೇಮ ಬರಹ ಎಂಬ ಚಿತ್ರವನ್ನು ಕೂಡ ಮಾಡಿದ್ದಾರೆ. ಆದರೆ ಅರ್ಜುನ್ ಸರ್ಜಾ ಅವರನ್ನು ಹರಸಿ ಹಾರೈಸಿದಂತೆ ಕನ್ನಡಿಗರು ಐಶ್ವರ್ಯ ಕೈ ಹಿಡಿಯಲಿಲ್ಲ.
ಅರ್ಜುನ್ ಸರ್ಜಾ ಅವರ ಮೊದಲ ಮಗಳ ಚಿತ್ರರಂಗಕ್ಕೆ ಐಶ್ವರ್ಯ ಬಂದರೂ ಕೂಡ ಅಂಜನಾ ಯಾಕೆ ಬರಲಿಲ್ಲ ಎನ್ನುವ ಪ್ರಶ್ನೆ ಇದೆ. ಅರ್ಜುನ್ ಸರ್ಜಾ ಅವರ ಮೊದಲ ಮಗಳ ಕಳೆದ ವರ್ಷ ಮದುವೆಯಾಗಿದ್ದು, ಇದೀಗ ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಸದ್ದು ಇಲ್ಲದೇ ಇಟಲಿಯಲ್ಲಿ ತಮ್ಮ ಬಹುಕಾಲದ ಗೆಳೆಯನ ಪ್ರೀತಿಗೆ ಸಮ್ಮತಿಯನ್ನು ಸೂಚಿಸಿದ್ದಾರೆ. ಚಿತ್ರರಂಗ, ಕ್ಯಾಮರಾ ಮತ್ತು ಇಲ್ಲಿನ ಪಾರ್ಟಿಗಳಿಂದ ತುಂಬಾನೇ ಅಂತರವನ್ನು ಕಾಪಾಡಿಕೊಂಡಿರುವ ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಫಾರಿನ್ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

ತಮ್ಮ ಪ್ರಿಯಕರನ ಒಲವೆ ಜೀವನ ಲೆಕ್ಕಾಚಾರ, ಒಲವೆ ಮರೆಯದ ಗುಣಾಕಾರ ಎಂದು ತನ್ನ ಪ್ರಿಯಕರನ ಜೊತೆ ಫೋಟೊಗಳನ್ನು ಕ್ಲಿಕಿಸಿಕೊಂಡಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ಅಂಜನಾ 13 ವರ್ಷಗಳ ನಂತರ ನಾನು ಹೌದು ಎನ್ನದೇ ಹೇಗೆ ಇರಲಿ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೀವನದೂದ್ದಕ್ಕೂ ಜೊತೆಯಾಗಿ ಬಾಳಿ ಬದುಕುವ ಭರವಸೆಯನ್ನು ಕೂಡ ನೀಡಿದ್ದಾರೆ. ವಿಶೇಷ ಅಂದರೆ ಇವರ ಈ ಸಂಭ್ರಮದಲ್ಲಿ ಅರ್ಜುನ್ ಸರ್ಜಾ ಮತ್ತು ಅವರ ಪತ್ನಿ ನಿವೇದಿತಾ ಕೂಡ ಭಾಗಿಯಾಗಿದ್ದಾರೆ. ಐಶ್ವರ್ಯ ಕೂಡ ತಮ್ಮ ಪತಿ ಉಮಾಪತಿ ಅವರ ಜೊತೆ ತನ್ನ ತಂಗಿಯ ಬದುಕಿನ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದ್ದಾರೆ. ಅರ್ಜುನ್ ಸರ್ಜಾ ಅವರ ಪುತ್ರಿ ಅಂಜನಾ ಅವರ ಈ ಸಂಭ್ರಮದ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಂಜನಾ ಹೇಳಿರುವಂತೆ ಅವರು ಎಂಗೇಜ್ ಆಗಿರುವ ಯುವಕನೊಟ್ಟಿಗೆ 13 ವರ್ಷದ ಪರಿಚಯ ಅವರಿಗೆ ಇದೆಯಂತೆ. 13 ವರ್ಷ ಆದ ಬಳಿಕ ಮದುವೆಗೆ ಎಸ್ ಹೇಳದೆ ಹೇಗಿರಲಿ ಎಂದಿದ್ದಾರೆ ಅಂಜನಾ. ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿ ಅಂಜನಾ ಅರ್ಜುನ್ ಅವರು ವಿದೇಶಿ ಯುವಕನೊಡನೆ ವಿದೇಶದಲ್ಲಿ ಎಂಗೇಜ್ ಆಗಿದ್ದರೆ. ಅಂಜನಾ ಅರ್ಜುನ್ ಈ ಹಿಂದೆ ಅವರ ಅಕ್ಕನ ಮದುವೆಗೂ ತಮ್ಮ ಬಾಯ್ಫ್ರೆಂಡ್ ಅನ್ನು ಕರೆದುಕೊಂಡು ಬಂದಿದ್ದರು. ಅವರೊಟ್ಟಿಗೆ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಈಗ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಇನ್ನೂ, ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ ನಟಿ ಐಶ್ವರ್ಯಾ ಅವರು ಕಳೆದ ವರ್ಷ ತಮಿಳು ನಟ ಉಮಾಪತಿ ಜೊತೆ ಹಸೆಮಣೆ ಏರಿದ್ದರು. ಕಳೆದ ಜೂನ್ 10 ರಂದು ಚನ್ನೈನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಉಮಾಪತಿ ಅವರನ್ನು ನಟಿ ಪ್ರೀತಿಸಿ ಮದುವೆಯಾದರು. ಇದೀಗ ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಇಟಲಿಯಲ್ಲಿ ಗೆಳೆಯನ ಜೊತೆ ಅಂಜನಾ ರೊಮ್ಯಾಂಟಿಕ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.












Click it and Unblock the Notifications