ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ ಎಂಬ ಕಿಚ್ಚ ಸುದೀಪ್ ಹೇಳಿಕೆಗೆ ಅರ್ಜುನ್ ಜನ್ಯ ಫಸ್ಟ್ ರಿಯಾಕ್ಷನ್
ರಾಜ್ಯಾದ್ಯಂತ ಇಂದು (ಡಿಸೆಂಬರ್ 25) ಸ್ಯಾಂಡಲ್ವುಡ್ನ ಬಿಗ್ ಸ್ಟಾರ್ಗಳು ನಟಿಸಿರುವ ಎರಡು ಸಿನಿಮಾಗಳು ಅದ್ಧೂರಿಯಾಗಿ ತೆರೆ ಕಂಡಿವೆ. ಕಿಚ್ಚ ಸುದೀಪ್ ಅಭಿಯನಯ ಮಾರ್ಕ್ ಮತ್ತು ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ 45 ಚಿತ್ರಗಳು ಬಿಡುಗಡೆಯಾಗಿವೆ. ಇನ್ನೂ ಈ ಬಗ್ಗೆ ಅರ್ಜುನ್ ಜನ್ಯ ಅವರು ಮಾತನಾಡಿದ್ದಾರೆ. ಇದೇ ವೇಳೆ ಹುಬ್ಬಳ್ಳಿಯಲ್ಲಿನ ಸುದೀಪ್ ಅವರ "ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ" ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ನಟ ಕಿಚ್ಚ ಸುದೀಪ್ ಅವರು ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ "ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ," ಎಂದು ಹೇಳಿದ್ದರು. ಇಗಾಗಲೇ ಕಿಚ್ಚ ಸುದೀಪ್ ಅವರೇ ಇದಕ್ಕೆ ಸ್ಪಷ್ಟನೆ ನೀಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇನ್ನೂ ಈ ಬಗ್ಗೆ ಅರ್ಜುನ್ ಜನ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ ಅವರು ಏನು ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಇಂದು ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ 45 ಜತೆಗೆ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ತೆರೆ ಕಂಡಿದೆ. ಇನ್ನೂ "ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ" ಎಂಬ ಸುದೀಪ್ ಅವರ ಹೇಳಿಕೆಗೆ ಟಿವಿ9ಗೆ ಅರ್ಜುನ್ ಜನ್ಯ ಪ್ರತಿಕ್ರಿಯಿಸಿದ್ದು, "ಪೈರಸಿ ತಡೆಯುವ ದೃಷ್ಟಿಯಿಂದ ತಾವು ಆ ರೀತಿ ಹೇಳಿಕೆ ನೀಡಿರುವುದು ಎಂದು ಸುದೀಪ್ ಸರ್ ಈಗಾಗಲೇ ಹೇಳಿದ್ದಾರೆ," ಎಂದು ಹೇಳಿದರು.
"ಶಿವಣ್ಣ, ಉಪೇಂದ್ರ, ರಾಜ್ ಬಿ.ಶೆಟ್ಟಿ ಅವರಿಗೂ ಸುದೀಪ್ ಸರ್ ಅಂದರೆ ತುಂಬಾ ಪ್ರೀತಿಯಿದೆ. ಇವರೆಲ್ಲರ ಮೇಲೆ ಸುದೀಪ್ ಅವರಿಗೂ ಅಷ್ಟೇ ಅಭಿಮಾನ ಇದೆ. ಜನರು ಬೇರೆ ರೀತಿ ಅರ್ಥ ಮಾಡಿಕೊಂಡಿರಬಹುದು. ಆದರೆ, ಈಗ ಇದಕ್ಕೆಲ್ಲ ಸ್ಪಷ್ಟನೆ ಕೂಡ ಸಿಕ್ಕಿದೆ," ಎಂದು ಹೇಳಿದರು.
ಮಾರ್ಕ್ ಸಿನಿಮಾ: ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. ಈಗಾಗಲೇ ಫ್ಯಾನ್ಸ್ ವಾರ್‌ಗೆ ತೆರೆ ಬಿದ್ದಿದೆ. ಇದೀಗ ಮಾರ್ಕ್ ತೆರೆಗೆ ಅಪ್ಪಳಿಸಿದ್ದು, ಯಶಸ್ಸಿನ ಓಟ ಮುಂದುವರೆಸಿದೆ. ಇನ್ನೂ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ. ವೀಕ್ಷಕರು ಯಾವ ರೀತಿ ಪ್ರತಿಫಲ ಕೊಡುತ್ತಾರೆ ಎಂದು ಕಾದುನೋಡಬೇಕಿದೆ.
ಸಿನಿಮಾವು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಆ್ಯಕ್ಷನ್, ಡ್ರಾಮಾ, ಕ್ರೈಮ್ ಥ್ರಿಲ್ಲರ್ ಚಿತ್ರ ಇದಾಗಿದೆ. ಚಿತ್ರಕ್ಕೆ ಸತ್ಯ ಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ ಹೂಡಿಕೆ ಮಾಡಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಸಂಗೀತ ಮಾಂತ್ರಿಕ ಎನಿಸಿಕೊಂಡಿರುವ ಅರ್ಜುನ್ ಜನ್ಯ ಅವರು ಮೊದಲ ಬಾರಿಗೆ ನಿರ್ದೇಶ ಮಾಡಿರುವ ಸಿನಿಮಾ ಇದಾಗಿದೆ. ಇದರಲ್ಲಿ ಸ್ಯಾಂಡಲ್ವುಡ್ನ ದೊಡ್ಡ ಸ್ಟಾರ್ಗಳಾದ ಶಿವರಾಜ್‌ಕುಮಾರ್, ಉಪೇಂದ್ರ, ಪ್ರಮೋದ್ ಶೆಟ್ಟಿ, ರಾಜ್ ಬಿ ಶೆಟ್ಟಿ ಹಾಗೂ ಸುಧಾರಾಣಿ ನಟಿಸಿದ್ದಾರೆ. ರಾಜ್ಯಾದ್ಯಂತ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಉತ್ತರ ಪ್ರತಿಕ್ರಿಯೆಗಳು ಬರುತ್ತಿವೆ. ಚಿತ್ರಕ್ಕೆ ರಮೇಶ್ ರೆಡ್ಡಿ ಹೂಡಿಕೆ ಹಾಕಿದ್ದಾರೆ.
ಫ್ಯಾನ್ಸ್ ಟಾಕ್ ವಾರ್‌ಗೆ ತೆರೆ: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಸುದೀಪ್ ಅವರು ಹುಬ್ಬಳ್ಳಿಯಲ್ಲಿ ನೀಡಿದ ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ ಎಂಬ ಹೇಳಿಕೆ ಸಾಕಷ್ಟು ಗೊಂದಲ ಸೃಷ್ಟಿಸಿ ಬೇರೆ ಬೇರೆ ತಿರುವುಗಳನ್ನೂ ಸಹ ಪಡೆದುಕೊಂಡಿತ್ತು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್‌ಗಳ ನಡುವೆ ದೊಡ್ಡ ಮಟ್ಟದಲ್ಲಿ ಟಾಕ್ ಮುಂದುವರೆದಿತ್ತು. ನಂತರ ಸ್ವತಃ ಸುದೀಪ್ ಅವರೇ ಈ ಟಾಕ್ ವಾರ್‌ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಅಭಿಮಾನಿಯೊಬ್ಬರು ಹಂಚಿಕೊಂಡ ಹಂಚಿಕೊಂಡಿದ್ದ ದರ್ಶನ್ ಜೊತೆಗಿ ಅವರ ಫೋಟೋವನ್ನು ರಿಟ್ವೀಟ್ ಮಾಡಿಕೊಂಡು ಟಾಕ್ ವಾರ್‌ಗೆ ಅಂತ್ಯವಾಡಿದ್ದಾರೆ.












Click it and Unblock the Notifications