Varthur Santhosh: ಬಿಗ್‌ಬಾಸ್ ಖ್ಯಾತಿಯ ವರ್ತೂರು ಸಂತೋಷ್‌ಗೆ ಮತ್ತೊಂದು ಸಂಕಷ್ಟ
ಬೆಂಗಳೂರು, ಜೂನ್ 25: ಬಿಗ್‌ಬಾಸ್ ಕನ್ನಡ ಸೀಜನ್ 10ರ ಫೈನಲಿಸ್ಟ್ ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್‌ಗೆ ಹೊಸ ಸಂಕಷ್ಟ ಎದುರಾಗಿದೆ. ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುವ ಹಳ್ಳಿಕಾರ್ ವರ್ತೂರು ಸಂತೋಷ್‌ಗೆ ಪ್ರಾಣಿಗಳ ವಿಚಾರವಾಗಿ ಒಂದೊಂದೇ ಕಷ್ಟ ಎದುರಾಗುತ್ತಿದೆ.
ಹುಲಿ ಉಗುರು ಧರಿಸಿರುವ ಕಾರಣಕ್ಕೆ ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿರುವಾಗಲೇ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿತ್ತು. ಒಂದು ವಾರದ ವಿಚಾರಣೆ ಬಳಿಕ ಜಾಮೀನಿನ ಮೇರೆಗೆ ವರ್ತೂರು ಸಂತೋಷ್ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ವರ್ತೂರು ಸಂತೋಷ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.

ವರ್ತೂರ್ ಸಂತೋಷ್ ಪ್ರಾಣಿಗಳ ಸಾಗಾಣಿಕೆ ಮಾಡುವಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. SPCA ಪ್ರಾಣಿ ಕಲ್ಯಾಣ ಅಧಿಕಾರಿ (SPCA animal welfare officer) ಹರೀಶ್ ಎನ್ನುವವರು ಈ ಸಂಬಂಧ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ವರ್ತೂರು ಸಂತೋಷ್ ನೇತೃತ್ವದಲ್ಲಿ ವರ್ತೂರಿನಲ್ಲಿ ಹಳ್ಳಿಕಾರ್ ರೇಸ್ ಆಯೋಜನೆ ಮಾಡಲಾಗುತ್ತಿದ್ದು, ಸಿದ್ಧತೆ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಬಿಗ್‌ಬಾಸ್‌ನಲ್ಲಿರುವಾಗಲೇ ವರ್ತೂರು ಸಂತೋಷ್ ಈ ಬಗ್ಗೆ ಹೇಳುತ್ತಿದ್ದರು. ಅದೇ ರೀತಿ ಈ ಬಾರಿ ಹಳ್ಳಿಕಾರ್ ರೇಸ್ ಅದ್ಧೂರಿಯಾಗಿ ನಡೆಸಲು ಸಕಲ ಸಿದ್ಧತೆ ನಡೆಸುತ್ತಿದ್ದರು. ಈ ಕಾರ್ಯಕ್ರಮ ಈಗ ವರ್ತೂರು ಸಂತೋಷ್‌ಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ.

ಹಳ್ಳಿಕಾರ್ ಹಸುಗಳನ್ನು ವಾಹನದಲ್ಲಿ ಸಾಗಾಣಿಕೆ ಮಾಡುವಾಗ ವರ್ತೂರು ಸಂತೋಷ್ ಹಾಗೂ ತಂಡ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ. ಒಂದೇ ಒಂದು ಟ್ರಕ್ನಲ್ಲಿ ಬರೋಬ್ಬರಿ 9 ಹೋರಿಗಳನ್ನು ಹಾಗೂ ಇತರೆ ಸಂಬಂಧಿಸಿದ ವಸ್ತುಗಳ ಇಟ್ಟು ಫಾರ್ಮ್ ಹೌಸ್ನಿಂದ ಸಾಗಾಟ ಮಾಡಿದ್ದು ಇದು ಪ್ರಾಣಿ ಹಿಂಸೆ, ಪ್ರಾಣಿಗಳ ಸಾಗಾಟ ನಿಯಮವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ವಿರುದ್ಧ ದೂರು ದಾಖಲಾಗಿದೆ.
ಈ ಪ್ರಕರಣ ಸಂಬಂಧ ವರ್ತೂರು ಸಂತೋಷ್ ಈಗಾಗಲೇ ಒಂದು ಸುತ್ತಿನ ವಿಚಾರಣೆ ಮುಗಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ದೂರುದಾರ ಹರೀಶ್, ಪೊಲೀಸರಿಗೆ ತಿಳಿಸಿದ್ದು, ಕೇವಲ ಎನ್ಸಿಆರ್ ಮಾಡಿ ಕೇಸ್ ಮುಚ್ಚಿ ಹಾಕುವುದ ಬೇಡ. ಎಫ್ಐಆರ್ ದಾಖಲು ಮಾಡಿ ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ದೂರುದಾರರ ಒತ್ತಾಯದ ಮೇರೆಗೆ ಒಂದು ವೇಳೆ ಎಫ್ಐಆರ್ ದಾಖಲಾದರೆ ವರ್ತೂರು ಸಂತೋಷ್‌ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಅಸಲಿ ವಿಚಾರಗಳು ಇನ್ನಷ್ಟೇ ಹೊರಬರಬೇಕಿದೆ.












Click it and Unblock the Notifications