ಅಮ್ಮ ನಿನ್ನ ಸೊಸೆ ಸಿಕ್ಕಾಯ್ತು: ನಟಿ ಅಂಕಿತಾರನ್ನೇ ಮದುವೆ ಆಗ್ತಾರಾ ಶೈನ್ ಶೆಟ್ಟಿ?
ಕನ್ನಡ ಕಿರುತೆರೆಯಿಂದ ಬೆಳ್ಳಿತೆರೆಗೆ ಹಾರಿರುವ ನಟಿ, ನಿರೂಪಕಿ ಅಂಕಿತಾ ಅಮರ್, ಈಗ ಬಿಗ್‌ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಜೊತೆ ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ವಿಭಿನ್ನ ಅಭಿನಯದ ಮೂಲಕ ಹೆಸರು ಮಾಡಿರುವ ಅಂಕಿತಾ ಈಗ ಸ್ಯಾಂಡಲ್‌ವುಡ್ ನಟಿಯಾಗಿ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಶೈನ್ ಶೆಟ್ಟಿ ಹಾಗೂ ಅಂಕಿತಾ ನಿಜವಾಗಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನು ಶೈನ್ ಶೆಟ್ಟಿ ಅವರೇ ಹೇಳಿದ್ದಾರೆ. ಅಮ್ಮ ಬೇರೆ ಸಂಬಂಧಗಳನ್ನ ಹುಡುಕಬೇಡಿ, ಸೊಸೆ ಬೇಕು ಅಂದ್ರಲ್ಲ, ಸಿಕ್ಕಿದ್ದಾರೆʼ ಎನ್ನುವ ಮೂಲಕ ಶಾಕ್ ಕೊಟ್ಟಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಅಂಕಿತಾ ಹಾಗೂ ಶೈನ್ ಶೆಟ್ಟಿ ಮಾತನಾಡುವಾಗ ಮದುವೆ ವಿಚಾರ ಪ್ರಸ್ತಾಪವಾಗಿದೆ. ಶೈನ್ ಶೆಟ್ಟಿ ಅವರ ಬಗ್ಗೆ ಗುಣಗಾನ ಮಾಡಿರುವ ಅಂಕಿತಾ, 'ಶೈನ್ ಎಲ್ಲ ವಿಷಯಗಳನ್ನ ಲೈಟಾಗಿ ತಗೋತಾರೆ, ಎಲ್ಲರನ್ನೂ ಚೆನ್ನಾಗಿ ಮಾತನಾಡಿಸುತ್ತಾರೆ. ಯಾವ ಯಾವ ವಿಷಯದಲ್ಲಿ ಎಷ್ಟು ಬೇಕೋ ಅಷ್ಟು ಅಚ್ಚುಕಟ್ಟುತನ ಅವರಲ್ಲಿದೆ. ಅದನ್ನೆಲ್ಲ ಕಲಿಯೋದಕ್ಕೆ ಪರದೆ ಮೇಲೆ ಮಾತ್ರವಲ್ಲ, ಆಫ್‌ಸ್ಕ್ರೀನ್‌ನಲ್ಲೂ ನಾನು ಲಕ್ಕಿ' ಎಂದು ಅಂಕಿತಾ ಹಾಡಿ ಹೊಗಳಿದ್ದಾರೆ.

'ನನ್ನ ಭಾಗ್ಯ, ನನ್ನ ಪುಣ್ಯ ಇರಬೇಕು. ನನಗೆ ಎಲ್ಲ ಒಳ್ಳೆಯ ಕಲಾವಿದರೇ ಸಿಗುತ್ತಿದ್ದಾರೆ. ಶೈನ್ ಶೆಟ್ಟಿ ಅವರ ಜೊತೆ ಕೆಲಸ ಮಾಡಿದ್ದು ನಿಜಕ್ಕೂ ಖುಷಿ ನೀಡಿದೆ. ನಾವಿಬ್ಬರೂ ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕು ಎನ್ನುವುದಕ್ಕೆ ಒಂದು ಒಳ್ಳೆ ರೀಸನ್ ಇತ್ತು ಅನಿಸುತ್ತೆ. ಶೈನ್ ಅವರಿಂದ ನಾನು ತುಂಬಾ ಕಲಿಯುವುದಿತ್ತು' ಎಂದಿದ್ದಾರೆ.
́'ಪ್ಲೀಸ್ ವೈರಲ್ ಮಾಡ್ಬೇಡಿ'
ಅಂಕಿತಾ ಮಾತು ಕೇಳಿದ ಕೂಡಲೇ ಶೈನ್ ಸಂದರ್ಶನದಲ್ಲೇ ಫೋನ್ ತೆಗೆದುಕೊಂಡು, "ಅಮ್ಮಾ, ಬೇರೆ ಸಂಬಂಧಗಳನ್ನು ಕ್ಯಾನ್ಸಲ್ ಮಾಡಿ, ಸೊಸೆ ಬೇಕು ಅಂತಿದ್ರಲ್ಲ? ನಿಮ್ಮ ಸೊಸೆ ಇಲ್ಲೇ ಇದ್ದಾಳೆ" ಎಂದಿದ್ದಾರೆ. ಇದನ್ನು ಕೇಳಿ ಅಂಕಿತಾ ಕೂಡ ಶಾಕ್ ಆಗಿದ್ದು, ಕೊನೆಗೆ ಶೈನ್ ಹೀಗೆನೇ ರೇಗಿಸುತ್ತಿರುತ್ತಾರೆ. ಇದನ್ನ ಮಾಡಿದ್ದು ತಮಾಷೆಗೆ ಅಷ್ಟೇ, ದಯವಿಟ್ಟು ಇಂತದ್ದನ್ನೆಲ್ಲ ವೈರಲ್ ಮಾಡಬೇಡಿ, ನಿಮಗೆ ಕಂಟೆಂಟು, ನಮಗೆ ಜೀವನ ಇದು' ಎಂದು ಅಂಕಿತಾ ಕೇಳಿಕೊಂಡಿದ್ದಾರೆ.
'ನನ್ನ ಪ್ರಕಾರ ಹುಡುಗ ಹುಡುಗಿ ಇಬ್ಬರೂ ಹೊಂದಿಕೊಳ್ತಾರೆ' ಎಂದು ಅಂಕಿತಾ ಹೇಳಿದ್ದಕ್ಕೆ, 'ಆ ತರ ಆಗಿದ್ರೆ ಎಷ್ಟೋ ಜನಕ್ಕೆ ಮದುವೆ ಆಗುತ್ತೆ, ಅದು ಆಗದೇ ಇದ್ದಾಗ ನಮ್ಮ ತರ ಸಿಂಗಲ್ ಆಗಿ ಇರ್ತಾರೆ' ಎಂದು ಶೈನ್ ಕಾಲೆಳೆದಿದ್ದಾರೆ. 'ಕಲಾವಿದರಿಗೆ, ಪ್ರೇಕ್ಷಕರು ಚಪ್ಪಾಳೆ ಹೊಡೆದಾಗ ನಮ್ಮ ಕಲಾಸೇವೆಗೆ ಸಾರ್ಥಕತೆ ಸಿಗುತ್ತೆ, ಅತ್ತಾಗ ನಕ್ಕಾಗ, ನಮ್ಮ ನಟನೆಗೆ ಸ್ಪಂದಿಸಿದಾಗ ನನಗೆ ಸಿಕ್ಕಾಪಟ್ಟೆ ಖುಷಿಯಾಗುತ್ತೆ. ಅದು ನನಗೆ ಮೊದಲ ಸಿನಿಮಾದಲ್ಲೇ ಸಿಕ್ಕಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications