Anchor Anushree: ಆಂಕರ್ ಅನುಶ್ರೀ ಮದುವೆ ಗುಟ್ಟಾಗಿ ನಡೆದೇ ಹೋಗಿ...
ಆಂಕರ್ ಅನುಶ್ರೀ ಅವರಿಗೆ ಯಾಕೆ ಮದುವೆ ಆಗಿಲ್ಲ? 36 ವರ್ಷ ವಯಸ್ಸು ಕಳೆದರೂ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗದೇ ಇರಲು ಕಾರಣ ಏನು? ಹೀಗೆ ಕನ್ನಡ ನಾಡಿನ ಜನರು, ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಮಾಡ್ತಾರೆ. ಆಂಕರ್ ಅನುಶ್ರೀ ಅವರ ಬಗ್ಗೆ ಯಾಕೆ ಇಷ್ಟು ಚರ್ಚೆ ಅಂದ್ರೆ, ಕನ್ನಡ ನಾಡಿನಲ್ಲೇ ನಂಬರ್ 1 ಆಂಕರ್ ಅಂದ್ರೆ ಅದು ಅನುಶ್ರೀ ಅವರು ಅಂತಾ ಹೇಳಬಹುದು. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಗುಟ್ಟಾಗಿ ನಡೆದೇ ಹೋಗಿ...
ಆಂಕರ್ ಅನುಶ್ರೀ ಅವರ ಜನಪ್ರಿಯತೆ & ಜನರ ಪ್ರೀತಿ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ ಬಿಡಿ. ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿವಾರ ಟಿವಿ ಮುಂದೆ ಬಂದು & ಇಡೀ ಕನ್ನಡ ನಾಡಿನ ಜನರನ್ನ ರಂಜಿಸುವ ಆಂಕರ್ ಅನುಶ್ರೀ ಯಾವ ಸಿನಿಮಾ ಸ್ಟಾರ್‌ಗೆ ಕೂಡ ಕಮ್ಮಿ ಇಲ್ಲ. 1988ರ ಜನವರಿ 25 ರಂದು ಜನಿಸಿದ್ದ ಆಂಕರ್ ಅನುಶ್ರೀ ಅವರಿಗೆ ಈಗ 36 ವರ್ಷ. ಹೀಗೆ 36 ವರ್ಷ ಕಳೆದರೂ ಆಂಕರ್ ಅನುಶ್ರೀ ಅವರಿಗೆ ಮದುವೆ ಯಾಕೆ ಆಗಿಲ್ಲ? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವಾಗಲೇ, ಆಂಕರ್ ಅನುಶ್ರೀ ಮದುವೆ ಗುಟ್ಟಾಗಿ ನಡೆದೇ ಹೋಗಿ...

ಸಮಾಜದಲ್ಲಿ ಆಂಕರ್ ಅನುಶ್ರೀ ಮಾದರಿ!
ಹೌದು, ಆಂಕರ್ ಅನುಶ್ರೀ ಜೀವನದಲ್ಲಿ ನೂರಾರು ಸಮಸ್ಯೆ ಎದುರಿಸಿ ಎಲ್ಲವನ್ನ ಮೆಟ್ಟಿ ನಿಂತು ಇಂದು ಇಡೀ ದೇಶದಲ್ಲೇ ಹೆಸರು ಮಾಡಿದ್ದಾರೆ. ಹೀಗೆ ಒಂದು ಕಾಲದಲ್ಲಿ ಬಾಡಿಕೆ ಹಣಕ್ಕೆ & ಪಿಜಿಗೆ ಕಟ್ಟಲು ದುಡ್ಡು ಇಲ್ಲದೆ ಪರದಾಡಿದ್ದವರ ಬಾಳಲ್ಲಿ ದೊಡ್ಡ ಯಶಸ್ಸು ಸಿಕ್ಕಿದೆ. ಹೀಗೆ ಆಂಕರ್ ಅನುಶ್ರೀ ಅವರ ಸಾಧನೆ ಸಮಾಜದಲ್ಲಿ ಏನಾದರೂ ಸಾಧಿಸಲು ಬೇರೆಯವರಿಗೆ ಕೂಡ ಮಾದರಿ ಎನ್ನಬಹುದು. ಹೀಗಿದ್ದಾಗಲೇ ಆಂಕರ್ ಅನುಶ್ರೀ ಅವರ ಮದುವೆ ಫೋಟೋ ಅಂತ ಒಂದು ಫೋಟೋ ವೈರಲ್ ಆಗುತ್ತಿದೆ!
ಆಂಕರ್ ಅನುಶ್ರೀ ಅವರ ಮಾತಿಗೆ ದೊಡ್ಡ ಮಟ್ಟದ ಫ್ಯಾನ್ಸ್ ಇದ್ದು ಹರಳು ಹುರಿದಂತೆ ಅನುಶ್ರೀ ಅವರು ಮಾತು ಆಡುತ್ತಿದ್ದರೆ ಜನ ಟಿವಿ ಸ್ಕ್ರೀನ್ ಬಿಟ್ಟು ಆಚೆ & ಈಚೆ ತಿರುಗಲ್ಲ. ಆದರೆ ಇಂತಿಪ್ಪ ಆಂಕರ್ ಅನುಶ್ರೀಗೆ ಮದುವೆ ಆಗಿಲ್ಲ ಅನ್ನೋ ಕೊರಗು ಅವರ ಅಭಿಮಾನಿಗಳಿಗೆ ಕಾಡುತ್ತಿತ್ತು.
ನಿಜವಾಗೂ ಆಂಕರ್ ಅನುಶ್ರೀ ಮದುವೆ?
ಇಂತಹ ಸಮಯದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಒಂದು ಫೋಟೋ ವೈರಲ್ ಮಾಡುತ್ತಿರುವ ಕೆಲವು ಕಿಡಿಗೇಡಿಗಳು, ಆಂಕರ್ ಅನುಶ್ರೀ ಮದುವೆ ಗುಟ್ಟಾಗಿ ನಡೆದೇ ಹೋಗಿದೆ ಅಂತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ! ಆದರೆ ಈ ಬಗ್ಗೆ ಇನ್ನೂ ಆಂಕರ್ ಅನುಶ್ರೀ ಅವರೇ ಆಗಲಿ ಅಥವಾ ಸಂಬಂಧಪಟ್ಟ ಯಾರೇ ಆಗಲಿ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಇದು ಸುಳ್ಳು ಫೋಟೋ & ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಹಬ್ಬಿರುವ ಸುದ್ದಿ ಸುಳ್ಳೆಂದು ಹೇಳಲಾಗುತ್ತಿದೆ.












Click it and Unblock the Notifications