Anchor Anushree: ಆಗಸ್ಟ್‌ನಲ್ಲಿ ಹಸೆಮಣೆ ಏರಲಿದ್ದಾರೆ 'ಆಂಕರ್ ಅನುಶ್ರೀ: ವರ ಯಾರು? ಲವ್ ಮ್ಯಾರೇಜಾ?
Anchor Anushree: ಕನ್ನಡದ ಅನೇಕ ವೇದಿಕೆ ಕಾರ್ಯಕ್ರಮಗಳಲ್ಲಿ, ಹಲವು ರಿಯಾಲಿಟಿ ಶೋಗಳ ನಿರೂಪಣೆ ಮಾಡಿದ ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಶ್ರೀ ಅವರಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆ. ಈವರೆಗೆ ಓಡಾಡುತ್ತಿದ್ದ ಊಹಾಪೋಹಗಳು, ವದಂತಿಗಳು ಸುಳ್ಳಾಗಿವೆ. ಇದೀಗ ಅವರ ಮದುವೆ ವಿಚಾರದ ಬಗ್ಗೆ ಮಹತ್ವದ ಸುದ್ದಿ ಹೊರ ಬಿದ್ದಿದೆ. ಆಗಸ್ಟ್ ತಿಂಗಳಲ್ಲಿ ಕೊನೆಯಲ್ಲಿ ಆಂಕರ್ ಅನುಶ್ರೀ ಮದುವೆ ನಡೆಯಲಿದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಗಾದ್ರೆ ಯಾರು ಹುಡುಗ?, ಏನು ಮಾಡುತ್ತಿದ್ದಾರೆ? ಮದುವೆ ದಿನಾಂಕ, ಇದು ಲವ್ ಮ್ಯಾರೇಜಾ? ಎಂಬ ಎಲ್ಲ ವಿವರ ಇಲ್ಲಿದೆ.
ಅನೇಕ ವೇದಿಕೆಗಳಲ್ಲಿ ನಿರೂಪಕಿ ಅನುಶ್ರೀ ಅವರಿಗೆ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆಗಳೇ ಎದುರಾಗುತ್ತಿದ್ದವು. ಈ ಬಗ್ಗೆ ಅವರು ಸ್ಪಷ್ಟವಾಗಿ ಏನನ್ನು ಹೇಳಿರಲಿಲ್ಲ. ಹೀಗಾಗಿಯೇ ಅನೇಕ ವದಂತಿಗಳು, ಸುಳ್ಳು ಮಾಹಿತಿಗಳು ಹರಿದಾಡಿದ್ದವು. ಆದರೆ ಈಗ ಅನುಶ್ರೀ ಮದುವೆ ಸಿದ್ಧತೆ ನಡೆಯುತ್ತಿರುವುದು ನಿಜವಾಗಿದೆ. 2025 ಆಗಸ್ಟ್ 28ರಂದು ಉದ್ಯಮಿಯೊಬ್ಬರ ಜೊತೆಗೆ ಆಂಕರ್ ಅನುಶ್ರೀ ಹಸೆಮಣೆ ಏರಲಿದ್ದಾರೆ ಎಂದು ಟಿವಿ ನೈನ್ ಕನ್ನಡ ವರದಿ ಮಾಡಿದೆ.

ನಿರೂಪಣೆಯಲ್ಲಿ ಮಾತ್ರವಲ್ಲದೇ ನಟನೆಯಲ್ಲೂ ಛಾಪು ಮೂಡಿಸಿದ್ದರು. ರಿಯಾಲಿಟಿ ಶೋ, ಯಾವುದೇ ವೇದಿಕೆಗಳೇ ಇರಲಿ ಅಂಜಿಕೆ, ಅಳುಕಿಲ್ಲದೇ, ಸ್ಕ್ರಿಪ್ಟ್ ಸಹ ಇಲ್ಲದೇ ನಿರರ್ಗಳವಾಗಿ ಮಾತನಾಡಬಲ್ಲ, ನಿರೂಪಣೆ ಮಾಡಿ ಸೈ ಅನ್ನಿಸಿಕೊಳ್ಳಬಲ್ಲ ಮಾತಿನ ಮಲ್ಲಿ ಅನುಶ್ರೀ ಅವರ ಮದುಗೆ ನಿಶ್ಚಿಯವಾಗಿದೆ. ಅವರ ಅಭಿಮಾನಿಗಳು ಯಾವಾಗ ಮದುವೆ ಎಂದು ಕೇಳುತ್ತಲೇ ಇದ್ದರು. ಇದೀಗ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಅನುಶ್ರೀ ಅವರಿಗೆ ಪ್ರೇಮ ವಿವಾಹ ಅಲ್ಲ, ಇದು ಮನೆಯಲ್ಲಿ ಎಲ್ಲರು ನೋಡಿ ನಿಶ್ಚಯಿಸಿದ ಅರೇಂಜ್ಡ್ ಮ್ಯಾರೇಜ್ ಎನ್ನಲಾಗಿದೆ.
ಅನುಶ್ರೀ ವರಿಸುವ ಹುಡುಗ ಯಾರು?
ಬೆಂಗಳೂರಿನಲ್ಲಿ ವಾಸವಿರುವ ಮಂಗಳೂರು ಮೂಲದ ಉದ್ಯಮಿಯನ್ನು ಆಂಕರ್ ಅನುಶ್ರೀ ವರಿಸಲಿದ್ದಾರೆ ಎನ್ನಲಾಗಿದೆ. ಉದ್ಯಮಿ ಹೆಸರು ರೋಷನ್ ಎನ್ನಲಾಗಿದೆ. ರೋಷನ್ ಅನ್ನು ಒಪ್ಪಿದ್ದಾರೆ ಎಂದು ಸ್ವತಃ ಅನಿಶ್ರೀ ಅವರು ತಾಯಿ ಹೇಳಿದ್ದಾರಂತೆ. ಇನ್ನು ಮದುವೆ ಆಗುವ ಹುಡುಗನಿಗೆ 'ಜೀವನ ಜವಾಬ್ದಾರಿ ಹೆಚ್ಚಿರಬೇಕು. ಅವನು ಅವನ ಜೀವನ ಪರವಾಗಿ ಹೆಚ್ಚು ಜವಾಬ್ದಾರಿಯಿಂದ ಇರಬೇಕು. ಅವನು ಬದುಕುವ ಜೊತೆಗೆ ನನ್ನನ್ನು ಬದುಕಲು ಬಿಡಬೇಕು'' ಎಂದು ಅವರು ಇತ್ತೀಚೆಗೆ ಮದುವೆ ಯಾವಾಗ, ಹುಡುಗ ಹೇಗಿರಬೇಕು? ಎಂಬ ಪ್ರಶ್ನೆ ಎದುರಾದಾಗ ಆಂಕರ್ ಅನುಶ್ರೀ ಈ ರೀತಿ ಉತ್ತರಿಸಿದ್ದರು.
ಬರೀ ಆಂಕರ್ ಅನುಶ್ರೀ ಅವರ ಮನೆಯಲ್ಲಿ ಮಾತ್ರವಲ್ಲದೇ, ವರ ಉದ್ಯಮಿ ರೋಷನ್ ಅವರ ಮನೆಯಲ್ಲೂ ಮದುವೆ ತಯಾರಿ ಜೋರಾಗಿದೆ. ಈ ಬಗ್ಗೆ ನಟಿ ಅನುಶ್ರೀ ಅವರು ಅಧಿಕೃತ ಮಾಹಿತಿ ನೀಡುವುದು ಬಾಕಿ ಇದೆ. ಈ ಮಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಆಂಕರ್ ಅನುಶ್ರೀ ಅವರು ಪೋಸ್ಟ್ ಹಾಕಿದ್ದಾರೆ. ಇದು ವೈರಲ್ ಆಗುತ್ತಿದೆ.
ಡಾ.ರಾಜಕುಮಾರ್ ಅವರ ವಿಡಿಯೋದ ಹಾಡು ಇದಾಗಿದ್ದು, ಜನರು ಹೇಗಿದ್ದರು ಮಾತನಾಡಿಕೊಳ್ಳುತ್ತಾರೆ. ಆಡಿಕೊಳ್ಳುವವರ ಬಾಯಿ ಮುಚ್ಚಿಸಲು ನಮ್ಮಿಂದ ಸಾಧ್ಯವಿಲ್ಲ. ಅವರು ಹೇಗಿದ್ದರು ಮಾತನಾಡಿಕೊಳ್ಳುತ್ತಾರೆ ಎಂದು ಮದುವೆ ವಿಚಾರವಾಗಿ ಕಾಲೆಳೆಯುವವರಿಗೆ ನಟಿ ಅನುಶ್ರೀ ನಯವಾಗಿ ತಿರುಗೇಟು ನೀಡಿದ್ದಾರೆ.












Click it and Unblock the Notifications