ನಿರೂಪಕಿ ಅನುಪಮಾ ಥ್ರಿಲ್ ನೀಡುವ ₹17,00,000 "ಮಹೀಂದ್ರಾ ಥಾರ್"ಗೆ ಕೈಕೊಟ್ಟು "ಬೆಂಜ್" ಕೈಹಿಡಿದಿದ್ದೇಕೆ?-ಕಾರಣ ಇಲ್ಲಿದೆ
ದ್ವಿಚಕ್ರ ವಾಹನದಲ್ಲಿ RX 100ನಂತೆ ಇದೀಗ 4 ವೀಲರ್‌ನಲ್ಲಿ ಮಹೀಂದ್ರ ಥಾರ್ ದಿನದಿಂದ ದಿನಕ್ಕೆ ಗ್ರಾಹಕರನ್ನು ಸೆಳೆಯುವ ಮೂಲಕ ಸಖತ್ ಹಿಟ್ ಆಗುತ್ತಿದೆ. ಈ ಹೆಸರು ಕೇಳಿದರೆ ಸಾಕು ಎಂಥವರ ಬಾಯಲ್ಲಿ ಮೊದಲು ಬರುವುದೇ ಅಬ್ಬಬ್ಬಾ ಅದರ ರೇಂಜ್ ಹೇ.. ಬೇರೆ ಎನ್ನುವ ಮಾತುಗಳು ಕೇಳಿಬರುತ್ತವೆ. ಅಷ್ಟರ ಮಟ್ಟಿದೆ ಥಾರ್ ಪ್ರಸಿದ್ಧಿ ಪಡೆದಿದೆ. ಇದೀಗ ಬರೀ ಉದ್ಯಮಿಗಳು, ಶ್ರೀಮಂತರಷ್ಟೇ ಅಲ್ಲದೆ ಸಿನಿ ಸ್ಟಾರ್‌ಗಳು ಕೂಡ ಇದರತ್ತ ಮುಖ ಮಾಡುತ್ತಿದ್ದಾರೆ.
ಆದರೆ ಕನ್ನಡದಲ್ಲಿ ಖ್ಯಾತ ನಿರೂಪಕಿಯಾಗಿ ಸದ್ದು ಮಾಡುತ್ತಿರುವ ಅನುಪಮಾ ಅವರು, ಇದೀಗ ಇಂತಹ ಹವಾ ಸೃಷ್ಟಿಸಿರುವ ಕಾರನ್ನೇ ಮಾರಿ ಬೆಂಜ್ ಕಾರು ಖರೀದಿಸಿದ್ದಾರೆ. ಹಾಗಾದರೆ ಅವರು ಈ ನಿರ್ಧಾರ ಮಾಡಿದ್ದೇಕೆ ಹಾಗೂ ಈ ಬಗ್ಗೆ ಅವರು ಕೊಟ್ಟ ಸ್ಪಷ್ಟನೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ಅವರು, ಇದೀಹ ಸುಮಾರು 17,00,000 ರೂಪಾಯಿ ಬೆಲೆಯ ತಮ್ಮ ಕೆಂಪು ಬಣ್ಣದ ಥಾರ್ ಜೀಪ್ ಮಾರಾಟ ಮಾಡಿ, ಐಷಾರಾಮಿ ಬೆಂಜ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಐಷಾರಾಮಿ ಬೆಂಜ್ ಖರೀದಿಸಲು ಕಾರಣವನ್ನು ಕೂಡ ಅವರು ಬಿಚ್ಚಿಟ್ಟಿದ್ದಾರೆ. ಆದರೆ ಎಲ್ಲೂ ಈ ಕಾರಿ ಫೋಟೋವನ್ನು ಪೋಸ್ಟ್ ಮಾಡುವುದಿಲ್ಲ ಅಂತಾ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
"ನಾನು ಥಾರ್ ಜೀಪ್ ಮಾರಾಟ ಮಾಡಿ, ನಂತರ ಬೆಂಜ್ ಖರೀದಿ ಮಾಡಿದ್ದೇನೆ. ಇಲ್ಲಿ ಬೆಂಜ್ ಅಥವಾ ಆಡಿ ಐಷಾರಾಮಿ ಕಾರುಗಳು ಅನ್ನುವ ಪ್ರಶ್ನೆಗಳು ಬರುವುದಿಲ್ಲ. ಏಕೆಂದರೆ ನಾನು ಖರೀದಿಸಿದ ಥಾರ್ ಸುಮಾರು 6 ಕಿಲೋ ಮೀಟರ್ ಮೈಲೇಜ್ ಕೊಡುತ್ತಿತ್ತು. ಸುಮ್ಮನೆ ಇಷ್ಟೊಂದು ಹಣ ಪೆಟ್ರೋಲ್‌ಗೆ ವೇಸ್ಟ್ ಆಗುತ್ತಿದೆ ಎಂದು ಥಾರ್ ಓಡಿಸಲು ಬೇಸರ ಆಗುತ್ತಿತ್ತು," ಎಂದರು.
"ಬಳಿಕ ದ್ವಿಚಕ್ರವಾಹನ ಖರೀದಿ ಮಾಡಿದೆ. ಸುಮಾರು ಕಡೆ ದ್ವಿಚಕ್ರ ವಾಹನ ಬಳಸುತ್ತಿದ್ದೆ. ಆಗ ನನ್ನ ಅಮ್ಮ, ನೀನು ಆರ್ಟಿಸ್ಟ್ ಕಾರಿನಲ್ಲಿ ಓಡಾಡಬೇಕು ಎಂದು ಹೇಳುತ್ತಿದ್ದರು," ಅಂದರು. ಇನ್ನು "ನಾನು ಎಂದೂ ಆ ಥಾರ್‌ನಿಂದ ಖುಷಿಯಾಗಿ ಇರಲಿಲ್ಲ. ಆದ್ದರಿಂದ ಅದನ್ನು ಬದಲಾಯಿಸಬೇಕು ಅನ್ನುವ ಯೋಚನೆ ಬಂದಿತ್ತು," ಎಂದರು.
"ಕಾರುಗಳು ನಮ್ಮನ್ನು ಕಾಪಾಡುತ್ತವೆ. ಇದುವರೆಗೂ ಯಾವ ಕಾರು ಓಡಿಸಿದರೂ ಒಂದು ಗಾಯ ಕೂಡ ಆಗಿಲ್ಲ. ನಾನು ಥಾರ್ ಖರೀದಿ ಮಾಡಿದ್ದು ಶೋಕಿಗಾಗಿ. ಆದರೆ ಒಂದು ತಿಂಗಳಿನಲ್ಲಿ ಅದರ ಬಂಡವಾಳ ಏನು ಅಂತಾ ಗೊತ್ತಾಗಿತ್ತು," ಎಂದು ಹೇಳಿದ್ದಾರೆ.
ನನಗೆ "ಆಡಿ ಕಾರು ಖರೀದಿಸಬೇಕಿ ಅನ್ನುವ ಆಸೆ ತುಂಬಾ ಇತ್ತು. ಆದರೆ ಸದ್ಯ ಬೆಂಜ್ ಖುಷಿ ನೀಡುತ್ತಿದೆ. ಬಜೆಟ್ ಜಾಸ್ತಿಯಾದರೂ ಇದನ್ನು ಸುಮಾರು 5-6 ವರ್ಷಗಳ ಕಾಲ ಬದಲಾಯಿಸುವುದಿಲ್ಲ. ನಾನು ಕಾರು ಖರೀದಿ ಮಾಡಿರುವ ಪೋಸ್ಟರ್‌ಗಳನ್ನು ಎಲ್ಲೂ ಹಾಕಿಲ್ಲ, ಹಾಕಬೇಕು ಅನಿಸಿಲ್ಲ. ಮನೆ ಮುಂದೆ ಕಾರು ತೊಳೆಯುತ್ತಿದ್ದರೂ ಆಶ್ಚರ್ಯದಲ್ಲಿ ನನ್ನನ್ನು ನೋಡುತ್ತಾರೆ" ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಥಾರ್ ಜೀಪ್ ಮಾರಾಟ ಮಾಡಿ ಬೆಂಜ್ ಕಾರು ಖರೀದಿಸಲು ಪ್ರಮುಖ ಕಾರಣ ಏನು ಎನ್ನುವ ಸ್ಪಷ್ಟನೆಯನ್ನು ಖ್ಯಾತ ನಿರೂಪಕಿ ಅನುಪಮಾ ಗೌಡ ನೀಡಿದ್ದಾರೆ. ಥಾರ್ ಎಂದರೆ ಸಾಕು ಎಂಥವರು ಕೂಡ ಅದು, ಮೈಲೇಜ್ ಕಡಿಮೆ ಕೊಟ್ಟರೂ ಪರವಾಗಿಲ್ಲ. ಅದರ ಮೇಲಿರುವ ಹೆಚ್ಚಿನ ವ್ಯಾಮೋಹದಿಂದ ಹೊರಬರುವುದಿಲ್ಲ. ಆದರೆ ಅನುಪಮಾ ಗೌಡ ಮಾತ್ರ ಈ ಕಾರನ್ನು ಮಾರಿರುವುದು ಆಶ್ಚರ್ಯಕ್ಕೀಡು ಮಾಡಿದಂತಿದೆ.












Click it and Unblock the Notifications