Amruthadhare Serial: ಗೌತಮ್ ದಿವಾನ್ ಪಾತ್ರಕ್ಕೆ ರಾಜೇಶ್ ನಟರಂಗ ಗುಡ್‌ಬೈ: ಹೊಸ ಪ್ರೋಮೋ ಸುಳಿವು!

Amruthadhare Serial: ಕನ್ನಡ ಪ್ರಖ್ಯಾತ ನಟ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ರಾಜೇಶ್ ನಟರಂಗ ಅವರು ರಂಗಭೂಮಿಗೆ ಮರಳಿದ್ದಾರೆ. ಈ ನಡುವೆ ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾರೆ ಸೀರಿಯಲ್‌ನಿಂದ ರಾಜೇಶ್ ನಟರಂಗ ಅವರು ಹೊರ ಬರುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್‌ನಲ್ಲಿ ರಾಜೇಶ್ ನಟರಂಗ ಅವರು ಗೌತಮ್ ದಿವಾನ್ ಪಾತ್ರವನ್ನು ಮಾಡುತ್ತಿದ್ದಾರೆ. ಗೌತಮ್ ದಿವಾನ್ ಪಾತ್ರದ ಮೂಲಕ ರಾಜೇಶ್ ಅವರು ಕರ್ನಾಟಕದ, ಕನ್ನಡಿಗರ ಮನೆ ಮಾತಾಗಿದ್ದಾರೆ. ಆದರೆ ಇದೀಗ ಅಮೃತಧಾರೆ ಸೀರಿಯಲ್‌ನ ಬಗ್ಗೆ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ರಾಜೇಶ್ ಅವರು ಸೀರಿಯಲ್‌ನಿಂದ ಹೊರ ಬರಲಿದ್ದಾರೆ ಎನ್ನುವ ಸುಳಿವು ಸಿಕ್ಕಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಕನ್ನಡ ರಂಗಭೂಮಿಗೆ ಮತ್ತೆ ಮೆರುಗು ಮೂಡಿದೆ. ಕಲಾದ್ಯುತಿ ಪ್ರೊಡಕ್ಷನ್ಸ್‌ ಹೊಸ ಪ್ರಾಜೆಕ್ಟ್‌ಗಳೊಂದಿಗೆ ರಂಗಭೂಮಿ ಆಸಕ್ತಿಕರನ್ನು ಸೆಳೆಯಲು ಮುಂದಾಗಿದೆ. ಹಿರಿಯ ನಟ ರಾಜೇಶ್ ನಟರಂಗ ಅವರು ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ರಂಗಭೂಮಿಗೆ ಮರಳುತ್ತಿದ್ದಾರೆ. ಇದೇ ತಿಂಗಳು 17ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿರುವ "ಮಳೆ ನಿಲ್ಲುವವರೆಗೆ' ನಾಟಕದ ಮೂಲಕ ಕಂಬ್ಯಾಕ್‌ಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಸಣ್ಣದೊಂದು ಶಾಕ್ ಸಹ ಎದುರಾಗಿದೆ.

Amruthadhare Serial Rajesh Nataranga Bidding Goodbye to Gautham Diwan New Promo Sparks Suspense

ಅಮೃತಧಾರೆ ಸೀರಿಯಲ್‌ನಿಂದ ರಾಜೇಶ್ ಅವರು ಹೊರ ಬರುತ್ತಿದ್ದಾರೆ ಎನ್ನಲಾಗಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾಳಷ್ಟೇ ಗೌತಮ್ ದಿವಾನ್ ಅವರ ಪಾತ್ರವು ಗಟ್ಟಿಯಾಗಿತ್ತು. ಅಮೃತಧಾರೆ ಸೀರಿಯಲ್‌ನ ಕಣ್ಣಿನಂತೆ ಭೂಮಿಕಾ ಹಾಗೂ ಗೌತಮ್ ಅವರ ಪಾತ್ರಗಳಿವೆ. ಆದರೆ ಹೊಸ ಪ್ರೋಮೋ ಹಲವರಿಗೆ ಶಾಕ್ ಕೊಟ್ಟಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

Amruthadhare Serial: ಅಮೃತಧಾರೆ ಸೀರಿಯಲ್ ಹೊಸ ಪ್ರೋಮೋದಲ್ಲಿ ಏನಿದೆ ?

"ನೀವು ಪ್ರೀತಿ ಕೊಟ್ಟು ಬೆಳಸಿರೋ ಗೌತಮ್ - ಭೂಮಿಕಾ ಬದುಕಿನ ಹಾದಿ ಸುಲಭದಲ್ಲ. ಊಹಿಸೋಕಾಗ್ದಿರೋ ಅಮೃತಧಾರೆಯ ಹೊಸ ಅಧ್ಯಾಯ ಕಾಯ್ತಾ ಇರಿ' ಎನ್ನುವ ಸಾಲುಗಳೊಂದಿಗೆ ಜೀ ಕನ್ನಡ ವಾಹಿನಿಯು ಅಮೃತಧಾರೆಯ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನೀವು ಪ್ರೀತಿ ಕೊಟ್ಟು ಬೆಳಸಿರೋ ಗೌತಮ್ - ಭೂಮಿಕಾ ಬದುಕಿನ ಹಾದಿ ಸುಲಭದಲ್ಲ ಎಂದು ಭೂಮಿಕಾ ಹೇಳಿದ್ದಾರೆ. ಕಲ್ಲು, ಮುಳ್ಳು, ಬೆಂಕಿ, ಬಿರುಗಾಳಿ ಎಲ್ಲದಕ್ಕೂ ಎದೆಯೊಡ್ಡಿ ನಿಂತಿದ್ದೇನೆ. ಅವಳಿ - ಜವಳಿ ಮಕ್ಕಳನ್ನು ಹೆತ್ತವಳು ನಾನು. ಆದರೆ ನಂಗೆ ಪ್ರತಿರೂಪ ನನ್ನ ಕಣ್ಣಿಗೆ ಬೀಳದಂಗೆ ಆಯ್ತು.

ಸಾಮಾನ್ಯಕ್ಕೂ - ಅಸಾಧಾರಣಕ್ಕೂ ಇರುವ ವ್ಯತ್ಯಾಸವೇ ಅದು. ಹುಡುಕುವುದಕ್ಕೆ ಆಗದೆ ಇರುವುದು - ಕಲ್ಪನೆಗೂ ಮೀರಿದ್ದು.. ಅಮೃತಧಾರೆಯ ಹೊಸ ಅಧ್ಯಾಯ ಅಂತ ಹೇಳಲಾಗಿದೆ. ಈ ಹೊಸ ಪ್ರೋಮೋದಲ್ಲಿ ಗೌತಮ್ ದಿವಾನ್ ಅವರು ಮಾತನಾಡಿಲ್ಲ. ಭೂಮಿಕಾ ಮಾತ್ರ ಮಾತನಾಡಿದ್ದು, ಭೂಮಿಕಾ ಫೋಟೋದ ಮುಂದೆ ಪ್ರಶ್ನಾರ್ಥಕ ಚಿಹ್ನೆ ಬಳಸಿ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಅಮೃತಧಾರೆ ಸೀರಿಯಲ್‌ನ ಹೊಸ ಅಧ್ಯಾಯ ಅಥವಾ ತಿರುವು ಶುರುವಾಗಲಿದೆ. ಅದರಲ್ಲಿ ಗೌತಮ್ ದಿವಾನ್ ಅವರ ಪಾತ್ರ ಇರುವುದಿಲ್ಲವೇ ಎನ್ನುವ ಅನುಮಾನ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+