Amruthadhare Serial: ಕೊನೆಗೂ ಕೂಡಿ ಬಂತು ಅಮೃತ ಘಳಿಗೆ, ಗೌತಮ್‌ಗೆ ಸಿಕ್ಕೇ ಬಿಟ್ಳು ಭೂಮಿಕಾ: ಇದು ಕನಸೋ, ನಿಜಾನೋ?
ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಐದು ವರ್ಷಗಳ ಗೌತಮ್ ವನವಾಸ ಮುಂದುವರೆದಿದೆ. ಹೆಂಡತಿ, ಮಗುಗಾಗಿ ಆಸ್ತಿ-ಹಣ- ಅಂತಸ್ತುನ್ನ ಶಕುಂತಲಾ ಮಡಿಲಿಗೆ ಹಾಕಿ ಗೌತಮ್ ಸದ್ಯ ತನ್ನ ನೆಮ್ಮದಿ ಹುಡುಕಿಕೊಂಡು ಅಲೆಯುತ್ತಿದ್ದಾನೆ. ಕೋಟ್ಯಾಧಿಪತಿಯಾಗಿದ್ದ ಗೌತಮ್ ದಿವಾನ್ ಸದ್ಯ ಕ್ಯಾಬ್ ಡ್ರೈವರ್ ಆಗಿ ಕಳೆದ ಐದು ವರ್ಷಗಳಿಂದ ಮನದರಸಿ ಭೂಮಿಕಾ ಹಾಗೂ ಮಗುವನ್ನ ಹುಡುಕುತ್ತಿದ್ದಾನೆ. ಇತ್ತ ಕೇಡಿ ಶಕುಂತಲಾ ಹಾಗೂ ಜೈದೇವ್ ವಿರುದ್ಧ ಹೋರಾಡಲು ಸಾಧ್ಯವಾಗದೇ ಶಸ್ತ್ರ ತ್ಯಾಗ ಮಾಡಿರುವ ಭೂಮಿಕಾ ತನ್ನ ಮಗು ಹಾಗೂ ಮಲ್ಲಿ ಜೊತೆ ಕುಶಾಲ ನಗರದಲ್ಲಿ ಬಿಡಾರ ಹೂಡಿದ್ದಾಳೆ.
ಅಮೃತಧಾರೆ' ಧಾರಾವಾಹಿಯಲ್ಲಿ ಇತ್ತೀಚೆಗೆ ಹಲವು ಬೆಳವಣಿಗೆಗಳು ನಡೆದವು. ಈ ಬೆಳವಣಿಗೆಗಳಲ್ಲಿ ಗೌತಮ್ ಹಾಗೂ ಭೂಮಿಕಾ ಬೇರೆ ಆಗಿದ್ದು ಕೂಡ ಒಂದು. ಭೂಮಿಕಾಳಿಗೆ ಶಕುಂತಲ ಬೆದರಿಕೆ ಹಾಕಿದ್ದಾಳೆ. ಈ ಬೆದರಿಕೆಯಿಂದ ಬೇಸತ್ತು ಭೂಮಿಕಾ ಮಗನ ಕರೆದುಕೊಂಡು ಮನೆ ಬಿಟ್ಟು ಹೋಗುತ್ತಾಳೆ. ಶಿಕ್ಷಕಿಗಾಗಿ ಭೂಮಿಕಾ ತನ್ನ ಜೀವನವನ್ನ ಕಟ್ಟಿಕೊಂಡಿದ್ದಾಳೆ. ಸದ್ಯ ಐದು ವರ್ಷಗಳ ಕಾಲ ಮಡದಿಗಾಗಿ ಹುಡುಕಾಟ ನಡೆಸುತ್ತಿದ್ದ ಗೌತಮ್ ಅನಿರೀಕ್ಷಿತವಾಗಿ ಮಗನನ್ನ ಪದೇ ಪದೇ ಭೇಟಿ ಮಾಡುತ್ತಿದ್ದಾನೆ. ಆದರೆ, ಗೌತಮ್ ಗೆ ಇದುವರೆಗೂ ಅಪ್ಪು ನನ್ನ ಮಗ ಎಂದು ತಿಳಿದಿಲ್ಲ.

ಸದ್ಯ ಅಮೃತಧಾರೆ ಧಾರಾವಾಹಿಯು ರೋಚಕ ಘಟ್ಟವನ್ನು ತಲುಪಿದೆ. ಈ ಧಾರಾವಾಹಿಯಲ್ಲಿ ಐದು ವರ್ಷದಿಂದ ಭೂಮಿಕಾ ಹಾಗೂ ಗೌತಮ್ ಬೇರೆ ಆಗಿರೋದು ಗೊತ್ತೇ ಇದೆ. ಈಗ ಇವರು ಒಂದಾಗುವ ಸಮಯ ಹತ್ತಿರವಾಗಿದೆ. ಭೂಮಿಕಾಳನ್ನು ಹುಡುಕಿಕೊಂಡು ನಾನಾ ಊರಿಗೆ ತೆರಳುತ್ತಿರುವ ಗೌತಮ್‌ಗೆ ಕೊನೆಗೂ ಕುಶಾಲನಗರದಲ್ಲಿ ಭೂಮಿಕಾ ಸಿಕ್ಕಿದ್ದಾಳೆ. ಸದ್ಯ ಗೌತಮ್ ಹಾಗೂ ಭೂಮಿಕಾ ಭೇಟಿಯಾದ ಗಳಿಗೆಯ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ.
ಅಮೃತಧಾರೆ ಧಾರಾವಾಹಿಯಲ್ಲಿ ಶಾಲೆಯ ಮಕ್ಕಳ ಮೂಲಕ ಗೌತಮ್ ಭೂಮಿಕಾಗೆ ಗುಲಾಬಿ ಹೂವನ್ನು ಕಳುಹಿಸುತ್ತಾನೆ. ಒಂದಾಗಿ ಜೀವನ ಮಾಡೋಕೆ ಸಾವಿರ ಕಾರಣಗಳು ಇದ್ದವಲ್ಲ ಎಂದು ಭೂಮಿಕಾಗೆ ಗೌತಮ್ ಹೇಳುತ್ತಾನೆ. ಇದಕ್ಕೆ ಭೂಮಿಕಾ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ. ಭೂಮಿಕಾ ಹಾಗೂ ಗೌತಮ್ ಹಾಯಾಗಿ ಜೀವನ ನಡೆಸಿಕೊಂಡಿದ್ದವರು ಈಗ ಬೇರೆ ಆಗಿದ್ದಾರೆ. ಮುಂದೆ ಇವರು ಮತ್ತೆ ಒಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ತೀವ್ರ ಕುತೂಹಲ ಮೂಡಿಸಿರುವುದು ಇದು ಕನಸೋ? ಅಥವಾ ನಿಜಾನೋ ಎಂಬುದನ್ನ ಮುಂದಿನ ಸಂಚಿಕೆಯಲ್ಲಿ ಕಾದುನೋಡಬೇಕಾಗಿದೆ.












Click it and Unblock the Notifications