Rajini: ಮದುವೆ ಬಗ್ಗೆ ಮೌನ ಮುರಿದ ಅಮೃತ ವರ್ಷಿಣಿ ನಟಿ ರಜಿನಿ: ಹುಡುಗ ಬಾಡಿ ಬಿಲ್ಡರ್?
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಮೃತ ವರ್ಷಿಣಿ ಮೂಲಕ ನಟನೆಗೆ ಕಾಲಿಟ್ಟ ನಟಿ ರಜಿನಿ, ಅಮೃತ ಪಾತ್ರದ ಮೂಲಕ ಬಹು ಜನಪ್ರಿಯತೆ ಪಡೆದರು. ಇಂದಿಗೂ ಅಮೃತ ಎಂದೇ ಗುರುತಿಸಿಕೊಂಡಿರುವ ರಜಿನಿ ಇತ್ತೀಚಿಗೆ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ರಜಿನಿಗೆ ಅಭಿಮಾನಿಗಳು ಸದಾ ಒಂದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳುತ್ತಿದ್ದು, ಇದೀಗ ಆ ಪ್ರಶ್ನೆಗೆ ರಜಿನಿ ಉತ್ತರಿಸಿದ್ದಾರೆ. ಹೌದು, ನಿಮ್ಮ ಮದುವೆ ಯಾವಾಗ..? ಹುಡುಗ ಯಾರು..? ಎನ್ನುವ ಪ್ರಶ್ನೆಗೆ ನಟಿ ರಜಿನಿ ಉತ್ತರಿಸಿದ್ದಾರೆ.

'ಸದ್ಯಕ್ಕೆ ಮದುವೆ ಬಗ್ಗೆ ಯಾವುದೇ ಯೋಚನೆ ಇಲ್ಲ. ಆ ರೀತಿ ಸಂದರ್ಭ ಹಾಗೂ ದಿನಗಳು ಬಂದರೆ ಖಂಡಿತವಾಗಿ ಜನರಿಗೆ ತಿಳಿಸಿನೇ ನಾನು ಮದುವೆ ಆಗುವುದು. ಅವರಿಗೆ ತಿಳಿಸಿನೇ ನಾನು ಮುಂದುವರಿಯುತ್ತೇನೆ. ಇಲ್ಲಿವೆರೆಗೆ ನನ್ನ ಯಶಸ್ಸಿನ ಜೊತೆ ಇದ್ದಾರೆ. ಹೀಗಾಗಿ ನನ್ನ ಜೀವನದಲ್ಲಿ ಏನಾದರೂ ತಿರುವು ಇದ್ದರೆ ಖಂಡಿತಾ ಜನರಿಗೆ ತಿಳಿಸಿನೇ ನಾನು ಮುಂದುವರಿಯಲು ಇಷ್ಟಪಡುತ್ತೇನೆ' ಎಂದರು.
ಅರುಣ್ ಗೌಡ ಜೊತೆಗೆ ರೀಲ್ಸ್ ಬಗ್ಗೆ ಮಾತನಾಡಿದ ರಜನಿ, 'ನನ್ನ ಮತ್ತೆ ಅರುಣ್ ಬಗ್ಗೆ ತುಂಬಾ ಜನ ಹುಳ ಬಿಟ್ಟುಕೊಂಡಿದ್ದಾರೆ. ಕಮೆಂಟ್ಸ್‌ಅಲ್ಲೂ ಕೂಡ ತುಂಬಾ ಜನ ಕೇಳುತ್ತಿರುತ್ತಾರೆ. ನಾನು ಕೆಲವೊಂದು ಕಮೆಂಟ್‌ಗೆ ಉತ್ತರ ಕೊಡುತ್ತೇನೆ. ಇನ್ನೂ ಉಳಿದವನ್ನು ಬಿಟ್ಟಾಕಿ ಬಿಡುತ್ತೇನೆ. ಯಾಕೆಂದರೆ ನೀವು ಗಂಡ-ಹೆಂಡತಿನಾ, ಪ್ರೇಮಿಗಳಾ ಅಂತಾ ತೀರಾ ಕಮೆಂಟ್ ಹಾಕುತ್ತಾರೆ. ಆದರೆ ಸದ್ಯಕ್ಕೆ ಆ ರೀತಿ ಏನೂ ಇಲ್ಲ. ನಾವಿಬ್ಬರು ಒಳ್ಳೆಯ ಸ್ನೇಹಿತರು' ಎಂದು ರಜನಿ ಸ್ಪಷ್ಟನೆ ಕೊಟ್ಟಿದ್ದಾರೆ.

'ಮುಂದಿನ ದಿನಗಳಲ್ಲಿ ಅಂತಹ ಬದಲಾವಣೆ ಆದರೆ ಖಂಡಿತ ಹೇಳುತ್ತೇನೆ. ಜನರಿಗೆ ಅನುಮಾನ ಬರಲು ಒಂದು ಕಾರಣ ಇದೆ. ನಾವು ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಕಟೆಂಟ್‌ಗಳು ಸಹ ಅದೇ ರೀತಿ ಇದೆ. ಮೊದಲು ನಾವು ಜಿಮ್ ವಿಡಿಯೋಗಳನ್ನು ಮಾಡುತ್ತಿದ್ದೆವು. ಈಗ ನಾವು ತಮಾಷೆ ವಿಡಿಯೋಗಳನ್ನು ಮಾಡುತ್ತಿದ್ದೇವೆ ಹೀಗಾಗಿ ಅಂತಹ ಅನುಮಾನ ಬರುವುದು ಸಹಜ. ನಾನಾಗಿದ್ದರೂ ಅದೇ ರೀತಿ ಯೋಚನೆ ಮಾಡುತ್ತಿದೆ. ಆದರೆ ಸದ್ಯ ನಾವು ಸೋಶಿಯಲ್ ಮೀಡಿಯಾದ ಕಟೆಂಟ್‌ಗೋಸ್ಕರ ಮಾಡುತ್ತಿದ್ದೇವೆ. ಜನರನ್ನು ನಗಿಸಲು ಮಾಡುತ್ತಿದ್ದೇವೆ' ಎಂದು ನ್ಯಾಷನಲ್ ಟಿವಿ ಸಂದರ್ಶನದಲ್ಲಿ ನಟಿ ರಜಿನಿ ಹೇಳಿದ್ದಾರೆ.












Click it and Unblock the Notifications