2024ರಲ್ಲಿ ಕೋಟಿ ಕೋಟಿ ಸಂಭಾವನೆ ಪಡೆದ ಸಿನಿಮಾ ಹೀರೋಗಳು ಇವರು!

ಕನ್ನಡ ಸಿನಿಮಾ ರಂಗಕ್ಕೆ ಈಗ ಹೊಸ ರಂಗು ಬಂದಿದೆ. ಆದರೆ ಅದೊಂದು ಕಾಲದಲ್ಲಿ ಇದೇ ಕನ್ನಡ ಸಿನಿಮಾ ರಂಗದ ಬಗ್ಗೆ ಕೆಲವು ಪರಭಾಷಿಕರು ಬಾಯಿಗೆ ಬಂದಂತೆ ಮಾತನಾಡಿದ್ದರು. ಈಗ ಅದೆಲ್ಲಾ ಬದಲಾಗಿ ಹೋಗಿದೆ, ಕನ್ನಡ ಸಿನಿಮಾ ರಂಗ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ ಹಾಗೇ ನೂರಾರು ಕೋಟಿ ದುಡ್ಡು ಬಾಚುತ್ತಿವೆ ಕನ್ನಡ ಸಿನಿಮಾಗಳು. ಹಾಗೇ ದಕ್ಷಿಣ ಭಾರತ ಸಿನಿಮಾಗಳು ಬಾಲಿವುಡ್‌ನ ಕೂಡ ಆಳುತ್ತಿವೆ. ಹಾಗಾದರೆ ಅತಿಹೆಚ್ಚು ಸಂಭಾವನೆ ಪಡೆಯುವ ಹೀರೋಗಳು ಯಾರು?

ದಕ್ಷಿಣ ಭಾರತದ ಸಿನಿಮಾಗಳ ಕೀರ್ತಿ ಬೆಳಗಿಸಿದ್ದು ಕನ್ನಡ ಹಾಗೂ ತೆಲುಗು ಇಂಡಸ್ಟ್ರಿಯ ಸಿನಿಮಾಗಳು. ಹಾಗೇ ತಮಿಳು ಮತ್ತು ಮಲಯಾಳಂ ಚಿತ್ರರಂಗ ಕೂಡ ಅತ್ಯುತ್ತಮ ಸಿನಿಮಾ ನೀಡುತ್ತಿವೆ. ಹೀಗಿದ್ದಾಗ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ ಇಲ್ಲಿದೆ. ಹಾಗೇ ಪುಷ್ಪ-2 ಮೂಲಕ ಸಂಚಲನ ಸೃಷ್ಟಿ ಮಾಡುತ್ತಿರುವ ಅಲ್ಲು ಅರ್ಜುನ್ ಹಾಗೂ ಸಲಾರ್ ಮೂಲಕ ಹಲ್‌ಚಲ್ ಎಬ್ಬಿಸಿರುವ ಡಾರ್ಲಿಂಗ್ ಪ್ರಭಾಸ್ ಕೂಡ ಈ ಪಟ್ಟಿಯಲ್ಲಿ ಇದ್ದಾರೆ. ಕನ್ನಡಿಗ ಯಶ್ ಅವರು ಪಡೆಯುವ ಸಂಭಾವನೆ ಎಷ್ಟು ಗೊತ್ತೆ? ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

Allu Arjun to Prabhas: Top 6 Highest Paid Actors in 2024

ಕೋಟಿ ಕೋಟಿ ದುಡಿಯುವ ಹೀರೋಗಳು

ಅಂದಹಾಗೆ ಈಗಿನ ಕಾಲದ ಸಿನಿಮಾಗಳಿಗೆ ಕೋಟಿ ಕೋಟಿ ಬಂಡವಾಳ ಹಾಕುತ್ತಾರೆ. ಹೀಗೆ ಸಿನಿಮಾದ ಹೀರೋಗಳಿಗೆ ಕೂಡ ನೂರಾರು ಕೋಟಿ ಹಣವನ್ನು ಸಂಭಾವನೆ ರೂಪದಲ್ಲಿಯೆ ಕೊಡಲಾಗುತ್ತದೆ. ಹಾಗಾದರೆ ನಟ ಪ್ರಭಾಸ್, ಅಲ್ಲು ಅರ್ಜುನ್, ಮಹೇಶ್ ಬಾಬು ಸೇರಿ, ಕನ್ನಡಿಗ ಯಶ್ ಅವರು ಈಗ ಪಡೆಯುವ ಸಂಭಾವನೆ ಎಷ್ಟು ಗೊತ್ತೆ? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಪ್ರಭಾಸ್ ಸಂಭಾವನೆ ಎಷ್ಟು ಗೊತ್ತೆ?

ಈಗ ಓಡಾಡುತ್ತಿರುವ ಮಾತುಗಳ ಪ್ರಕಾರ ನಟ ಪ್ರಭಾಸ್ ಅವರಿಗೆ 100 ರಿಂದ 150 ಕೋಟಿ ಸಂಭಾವನೆ ಇದೆ. ಹಾಗೇ ಅವರು ಕಲ್ಕಿ 2898 ಎಡಿ, ಸ್ಪಿರಿಟ್, ದಿ ರಾಜಾ ಸಾಬ್, ಸಲಾರ್ ಪಾರ್ಟ್-2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರು ತಮ್ಮ ಸಂಭಾವನೆ ಹೆಚ್ಚು ಮಾಡಿಕೊಂಡ ಹಿನ್ನೆಲೆ ಪ್ರಭಾಸ್ ಅವರ ಸಂಭಾವನೆ 100ರಿಂದ 150 ಕೋಟಿ ರೂಪಾಯಿಗೆ ತಲುಪಿದೆ ಎನ್ನಲಾಗುತ್ತಿದೆ.

Allu Arjun to Prabhas: Top 6 Highest Paid Actors in 2024

ಅಲ್ಲು ಅರ್ಜುನ್ ಹವಾ ಹೇಗಿದೆ?

ಮತ್ತೊಂದು ಕಡೆ ಅಭಿಮಾನಿಗಳ ಪ್ರೀತಿಯ ನಟ ಹಾಗೂ ಸ್ಟೈಲಿಶ್ ಸ್ಟಾರ್ ಎಂಬ ಬಿರುದು ಪಡೆದಿರುವ ಅಲ್ಲು ಅರ್ಜುನ್ ಅವರು ಕೂಡ ಬಹು ಬೇಡಿಕೆಯ ನಟ. ಹೀಗಾಗಿ ಅವರಿಗೂ ಕೋಟಿ ಕೋಟಿ ಸಂಭಾವನೆ ಬರುತ್ತದೆ ಎಂಬ ಮಾತು ಓಡಾಡುತ್ತಿದೆ. ಈಗಿನ ಮಾಹಿತಿಗಳು ಹೇಳುವಂತೆ, ಪ್ರತಿ ಚಿತ್ರದ ಸುಮಾರು ಶೇಕಡಾ 33ರಷ್ಟು ಆದಾಯವನ್ನ ಸಂಭಾವನೆಯಾಗಿ ಅಲ್ಲು ಅರ್ಜುನ್ ಪಡೆಯುತ್ತಾರೆ ಎನ್ನಲಾಗಿದೆ. ಹಾಗೇ ನೋಡಿದರೆ ಈ ಮೊತ್ತವೇ ಸುಮಾರು 300 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ.

ಜೂ.ಎನ್‌ಟಿಆರ್ ಹವಾ ಜೋರು

ಸದ್ಯಕ್ಕೆ ದೇವರಾ, ವಾರ್-2 ಸೇರಿದಂತೆ ಪ್ರಶಾಂತ್ ನೀಲ್ ಅವರ ಜೊತೆಗೂ ಸಿನಿಮಾಗಳನ್ನ ಒಪ್ಪಿಕೊಂಡಿರುವ ಜೂ.ಎನ್‌ಟಿಆರ್ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲೊಬ್ಬರು. ಹಾಗೆ ನೋಡಿದ್ರೆ ನಟ ಜೂ.ಎನ್‌ಟಿಆರ್ ಪ್ರತಿ ಸಿನಿಮಾಗೆ 60ರಿಂದ 70 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಈ ಮೂಲಕ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಅವರೂ ಒಬ್ಬರಾಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಸೌಂಡ್!

ಇಷ್ಟೆಲ್ಲದರ ನಡುವೆ ಕನ್ನಡಿಗ ಯಶ್ ಅವರು ಕೂಡ ಪ್ಯಾನ್ ವರ್ಲ್ಡ್ ಲೆವೆಲ್‌ಗೆ ಬೆಳೆದಿದ್ದು, ಈ ನಟನ ಮುಂದಿನ ಸಿನಿಮಾ ಟಾಕ್ಸಿಕ್ ಜಾಗತಿಕ ಮಟ್ಟಕ್ಕೆ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಈ ನಟ ಕೂಡ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ ಇದ್ಯಾವುದೂ ಅಧಿಕೃತವಾಗಿಲ್ಲ. ಮತ್ತೊಂದು ವಿಶೇಷ ಏನೆಂದರೆ, ಯಶ್ ಅವರೇ ತಮ್ಮ ಸಿನಿಮಾಗೆ ಬಂಡವಾಳ ಹೂಡಲು ಮುಂದಾಗುತ್ತಿರುವುದು ಈಗ ಯಶ್ ಅವರ ಖದರ್ ತೋರಿಸುತ್ತಿದೆ. 2024ರಲ್ಲಿ ಯಶ್ ಅವರ ಯಾವುದೇ ಸಿನಿಮಾ ರಿಲೀಸ್‌ಗೆ ರೆಡಿ ಆಗದೇ ಇದ್ದರೂ, ರಾಖಿಭಾಯ್ ಹವಾ ಮಾತ್ರ ಬಲು ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+