Pushpa: ಡೇವಿಡ್ ವಾರ್ನರ್‌ಗೆ, ಪುಷ್ಪರಾಜ್‌ರಿಂದ ಸಿಗಲಿದೆ ವಿಶೇಷ ಟ್ರೈನಿಂಗ್‌: ಪುಷ್ಪಾ ಪುಷ್ಪಾ ಹಾಡಿಗೆ ಇಬ್ಬರೂ ಸ್ಟೆಪ್‌

ಡೇವಿಡ್‌ ವಾರ್ನರ್‌ ಸ್ಫೋಟಕ ಬ್ಯಾಟರ್‌. ಸದ್ಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಬ್ಯಾಟ್ ಮಾಡುತ್ತಿದ್ದಾರೆ. ಇವರಿಗೆ ಭಾರತೀಯ ಸಿನಿಮಾಗಳ ಮೇಲೆ ವಿಶೇಷ ಪ್ರೀತಿ.. ಖ್ಯಾತ ಸಿನಿಮಾಗಳು ಬಂದಾಗ ಅದರ ರೀಲ್ಸ್‌ ಮಾಡಿ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದರಿಂದ ಇವರಿಗೆ ಅಭಿಮಾನಿಗಳ ಬಳಗವೂ ಹೆಚ್ಚಾಗಿದೆ.

2021ರಲ್ಲಿ ಭಾರತದಲ್ಲಿ ಅಷ್ಟೇ ಅಲ್ಲಾ ವಿಶ್ವದಲ್ಲೇ ಭಾರೀ ಸದ್ದು ಮಾಡಿದ್ದ ಚಿತ್ರ ಪುಷ್ಪಾ.. ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ ಅವರ ಮ್ಯಾನರಿಸಂ, ಬಾಡಿ ಲಾಂಗ್ವೇಜ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆಗ ಇದಕ್ಕೆ ಪ್ರಭಾವಿತರಾದ ಡೇವಿಡ್ ವಾರ್ನರ್‌, ದಾಡಿಯ ಮೇಲೆ ಬಲಗೈಯನ್ನು ಎಳೆಯುತ್ತಾ ಪುಷ್ಪಾ ಚಿತ್ರದ ಡೈಲಾಗ್‌ ರಿಮಿಕ್‌ ಮಾಡಿದ್ದರು. ಅಷ್ಟೇ ಏಕೆ ಮೈದಾನದಲ್ಲಿ ಪುಷ್ಪಾ ಸಾಂಗ್ ಪ್ಲೇ ಆದಾಗಲೂ ಅದರಲ್ಲಿನ ಸ್ಟೇಪ್ಸ್‌ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದರು.

Allu Arjun Offers to Teach David Warner Pushpa s Iconic Hook Step It s Simple

ಮೈದಾನದಲ್ಲಿ ಪುಷ್ಪಾ ಸ್ಟೆಪ್ಸ್‌

ಈ ಕಥೆ ಬರೀ ಐಪಿಎಲ್‌ಗೆ ಅಷ್ಟೇ ಸೀಮಿತವಾಗಿರಲಿಲ್ಲ. ಭಾರತದಲ್ಲಿ 2023ರಲ್ಲಿ ನಡೆದ ಏಕದಿನ ವಿಶ್ವಕಪ್‌ ವೇಳೆಯೂ ಬೌಂಡರಿ ಲೈನ್‌ನಲ್ಲಿ ಫೀಲ್ಡ್ ಮಾಡುವಾಗ ವಾರ್ನರ್ ಪುಷ್ಪಾ ಸಿನಿಮಾದ ಸೆಪ್‌ ಹಾಕಿ ಅಭಿಮಾನಿಗಳ ಮನ ಗೆದ್ದಿದ್ದರು.

ಸಾಂಗ್‌ಗೆ ವಾರ್ನರ್‌ ಕಮೆಂಟ್‌

ಈ ವರ್ಷ ಪುಷ್ಪಾ 2 ದಿ ರೂಲ್‌ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅದಂಹಾಗೆ ಈ ಚಿತ್ರ ಅಗಸ್ಟ್‌ 15ಕ್ಕೆ ತೆರೆಗೆ ಅಪ್ಪಳಿಸುವ ಸಾಧ್ಯತೆ ಇದೆ. ಚಿತ್ರ ತಂಡ ವಿಶೇಷ ದಿನಗಳಲ್ಲಿ, ಈ ಚಿತ್ರದ ತುಣುಕುಗಳನ್ನು ಹಾಕಿ ಜನರ ಗಮನ ಸೆಳೆಯುತ್ತಿದೆ. ಇದೇ ವೇಳೆ ಅಲ್ಲು ಅರ್ಜುನ್‌ ಹಾಕಿದ ಪೋಸ್ಟ್‌ಗೆ ಕ್ರಿಕೆಟ್‌ ಆಟಗಾರ ಡೇವಿಡ್ ವಾರ್ನರ್ ಕಮೆಂಟ್‌ ಮಾಡಿದ್ದು, ಅದಕ್ಕೆ ಪ್ರತಿಯಾಗಿ ನಟ ಸಹ ಕಮೆಂಟ್ ಮಾಡಿದ್ದಾರೆ.

ನಾನೇ ಹೇಳಿಕೊಡುವೆ

ಇತ್ತೀಚೆಗಷ್ಟೇ ಚಿತ್ರದ 'ಪುಷ್ಪ ಪುಷ್ಪ' ಹಾಡು ಬಿಡುಗಡೆಯಾಗಿದ್ದು, ಅದರಲ್ಲಿ ಅಲ್ಲು ಅರ್ಜುನರವರ ಹುಕ್ ಸ್ಟೆಪ್ ತೋರಿಸಿದ್ದು ಪ್ರೇಕ್ಷಕರ ಗಮನ ಸೆಳೆದಿದ್ದು, ಡೇವಿಡ್ ಕೂಡ ತುಂಬಾ ಇಷ್ಟಪಟ್ಟಿದ್ದಾರೆ. ಅಲ್ಲು ಅವರ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಡೇವಿಡ್ ಸಂದೇಶವನ್ನು ಬರೆದಿದ್ದಾರೆ. ಓ ಡಿಯರ್‌, ಈ ಡ್ಯಾನ್ಸ್‌ ಚೆನ್ನಾಗಿದೆ. ಈಗ ನಾನು ಕೂಡ ಸ್ವಲ್ಪ ಕೆಲಸ ಮಾಡಬೇಕಾಗಿದೆ. ಎಂದು ಬರೆದಿದ್ದಾರೆ. ಕ್ರಿಕೆಟಿಗನಿಗೆ ಅಲ್ಲು ಪ್ರತಿಕ್ರಿಯಿಸಿದ್ದಾರೆ , 'ಇದು ತುಂಬಾ ಸುಲಭ. ನಾವು ಭೇಟಿಯಾದಾಗ ನಾನು ನಿಮಗೆ ಕಲಿಸುತ್ತೇನೆ ಎಂದು ತಿಳಿಸಿದ್ದಾರೆ.

Allu Arjun Offers to Teach David Warner Pushpa s Iconic Hook Step It s Simple

ಈ ದಿನಗಳಲ್ಲಿ ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಆಡುತ್ತಿದ್ದಾರೆ. 'ಪುಷ್ಪ' ಸ್ಟಾರ್ ಅಲ್ಲು ಅರ್ಜುನ್ ಈಗ ತಮ್ಮ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರದ ಬಗ್ಗೆ ಮಾತನಾಡುತ್ತಾ, 'ಪುಷ್ಪ 2: ದಿ ರೂಲ್' ಚಿತ್ರದ ಟೀಸರ್ ಅನ್ನು ಈ ತಿಂಗಳ ಆರಂಭದಲ್ಲಿ ಏಪ್ರಿಲ್ 8 ರಂದು ಬಿಡುಗಡೆ ಮಾಡಲಾಯಿತು.

ಟೀಸರ್ ಬಿಡುಗಡೆಯಾದಾಗಿನಿಂದ, ಅಭಿಮಾನಿಗಳು ಮತ್ತು ವೀಕ್ಷಕರು ಚಿತ್ರಕ್ಕೆ ಸಂಬಂಧಿಸಿದ ಹೊಸ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಇದೀಗ ಹಾಡಿನ ನಂತರ ಅಭಿಮಾನಿಗಳು ಟ್ರೇಲರ್‌ಗಾಗಿ ಕಾಯುತ್ತಿದ್ದಾರೆ. 'ಪುಷ್ಪ 2 ದಿ ರೂಲ್' ಆಗಸ್ಟ್ 15, 2024 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಸುಕುಮಾರ್ ನಿರ್ದೇಶನದ ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+