Darshan: ಮತ್ತೆ ಒಂದಾಗಲಿದೆ ಕಾಟೇರ ತಂಡ: ದರ್ಶನ್-ತರುಣ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ

'ಕಾಟೇರ' ಸಿನಿಮಾದ ಅದ್ಭುತ ಯಶಸ್ಸು ದರ್ಶನ್‌ಗೆ ಮಾತ್ರವಲ್ಲ 2023ರಲ್ಲಿ ಕನ್ನಡ ಚಿತ್ರರಂಗಕ್ಕೇ ಹೊಸ ಹುರುಪು ತಂದುಕೊಟ್ಟಿದೆ. ದರ್ಶನ್ ಸಿನಿಮಾ ಜೀವನದಲ್ಲೇ ಕಾಟೇರ ದೊಡ್ಡ ಮಟ್ಟದ ಯಶಸ್ಸು ಕಂಡಿದೆ.

2023ರಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಹಿಟ್ ಸಿನಿಮಾ 'ಕಾಟೇರ'. ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಅಳಿಸಿ ಹಾಕಿದ್ದು, ಹೊಸ ದಾಖಲೆ ಬರೆದಿದೆ. ಮೂಲಗಳ ಪ್ರಕಾರ ಕಾಟೇರ ₹200 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತದೆ. ಆದರೆ ಈ ಬಗ್ಗೆ ನಿರ್ಮಾಪಕರು ಎಲ್ಲೂ ಬಾಯಿಬಿಟ್ಟಿಲ್ಲವಾದರೂ, ಸಿನಿಮಾ ದೊಡ್ಡ ಮಟ್ಟದಲ್ಲಿ ಲಾಭ ಮಾಡಿರುವುದು ಮಾತ್ರ ನಿಜ.

After the Success of Kaatera: Darshan and Tarun sudhir to Team Up for Another Movie

ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ, ಕಾಟೇರ ಒಟಿಟಿ ಅಂಗಳಕ್ಕೂ ಕಾಲಿಟ್ಟಿದ್ದಾನೆ. ಫೆಬ್ರವರಿ 9ರಂದು ಜೀ5ನಲ್ಲಿ ಒಟಿಟಿ ವೇದಿಕೆಯಲ್ಲಿ ಕಾಟೇರ ಪ್ರದರ್ಶನವಾಗುತ್ತಿದೆ. ಇದರ ಬೆನ್ನಲ್ಲೇ ಅವರ ಮುಂದಿನ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಕಾಟೇರ ಬಳಿಕ ದರ್ಶನ್ 'ಡೆವಿಲ್ ದಿ ಹೀರೋ' ಸಿನಿಮಾದಲ್ಲಿ ನಟಿಸಲು ಸಿದ್ದರಾಗಿದ್ದಾರೆ. ಫೆಬ್ರವರಿ 15ರಂದು ಸಿನಿಮಾದ ಮೊದಲ ಲುಕ್ ಬಿಡುಗಡೆಯಾಗಲಿದೆ. ಈ ಬೆನ್ನಲ್ಲೇ ಅಭಿಮಾನಿಗಳು ಖುಷಿಯಾಗುವ ಮತ್ತೊಂದು ಸುದ್ದಿ ಗಾಂಧಿನಗರದ ಅಂಗಳದಿಂದ ಬಂದಿದೆ.

ದರ್ಶನ್-ತರುಣ್ ಮತ್ತೊಂದು ಸಿನಿಮಾ?

ಹೊಸ ಮಾಹಿತಿ ಪ್ರಕಾರ ದರ್ಶನ್- ತರುಣ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬರುವುದು ಬಹುತೇಕ ಖಚಿತವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನೆಚ್ಚಿನ ನಿರ್ದೇಶಕನಾಗಿರುವ ತರುಣ್ ಅವರ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

'ಕಾಟೇರ' ಸಿನಿಮಾಗೆ ಕತೆ ಬರೆದಿದ್ದ ಜಡೇಶ್ ಹಂಪಿ ದರ್ಶನ್‌ಗಾಗಿ ಮತ್ತೊಂದು ಕತೆ ಬರೆದಿದ್ದೇನೆ ಎಂದು ಹೇಳಿದ್ದರು. ಅದೇ ಕತೆಗೆ ತರುಣ್ ಆಕ್ಷನ್ ಕಟ್ ಹೇಳ್ತಾರ ಅಥವಾ ರಾಬರ್ಟ್ ಬಳಿಕ ಘೋಷಣೆಯಾಗಿದ್ದ ಸಿಂಧೂರ ಲಕ್ಷ್ಮಣ ಸಿನಿಮಾ ತೆರೆಮೇಲೆ ತರುತ್ತಾರ ಎನ್ನುವ ಪ್ರಶ್ನೆ ಇದೆ.

ತರುಣ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಇನ್ನೂ ಯಾವುದೇ ಘೋಷಣೆ ಮಾಡಿಲ್ಲವಾದರೂ, ಸಿದ್ಧತೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಕಾಟೇರ ಬಳಿಕ ದರ್ಶನ್ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಲಿದ್ದಾರೆ. ಡೆವಿಲ್ ದಿ ಹೀರೋ ಬಳಿಕ ಅವರು ಪ್ರೇಮ್ ಜೊತೆ ಸಿನಿಮಾ ಮಾಡುವ ಸಾಧ್ಯತೆ ಇದೆ. ಅದಾದ ಬಳಿಕ ತರುಣ್ ಜೊತೆ ಮತ್ತೆ ಸಿನಿಮಾ ಆರಂಭಿಸಬಹುದು ಎನ್ನಲಾಗಿದೆ.

ದರ್ಶನ್ ಅವರ ಸಿನಿಮಾ ಜೀವನದ ಬೆಳ್ಳಿ ಹಬ್ಬದ ಸಂಭ್ರಮ, ಹುಟ್ಟು ಹಬ್ಬದ ಜೊತೆ ಈ ತರುಣ್ ಜೊತೆ ಸಿನಿಮಾ ಮಾಡುವ ಸುದ್ಧಿ ಅಧಿಕೃತವಾದರೆ ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+