Tabu: 12 ವರ್ಷಗಳ ನಂತರ ಮತ್ತೆ ಹಾಲಿವುಡ್‌ಗೆ ಹಾರಿದ ನಟಿ ಟಬು
ಮುಂಬೈ, ಮೇ. 15: ದಕ್ಷಿಣ ಭಾರತ ಮತ್ತು ಬಾಲಿವುಡ್‌ನಲ್ಲಿ ತಮ್ಮದೆ ಛಾಪು ಮೂಡಿಸಿರುವ ನಟಿ ಟಬು ಅವರಿಗೆ ಈಗಾಗಲೇ 52 ವರ್ಷ. ಆದರೂ, ಕೂಡ ಸಕತ್ ಫಿಟ್ ಮತ್ತು ಬ್ಯೂಟಿಫುಲ್. ಬಾಲಿವುಡ್‌ನಲ್ಲಿ ಅವರಿಗೆ ಅವಕಾಶಗಳ ಕೊರತೆಯಿಲ್ಲ. ಇದರ ಜೊತೆಗೆ ಅವರು ಹಾಲಿವುಡ್‌ನಲ್ಲಿಯೂ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.
ಈಗಾಗಲೇ ಹಾಲಿವುಡ್‌ನಲ್ಲಿ ಎರಡು ಸಿನಿಮಾಗಳನ್ನು ಮಾಡಿರುವ ಅವರು, ಮತ್ತೆ ಹಾಲಿವುಡ್‌ನ ದೊಡ್ಡ ಸರಣಿ ಡ್ಯೂನ್: ಪ್ರೊಫೆಸಿ (Dune: Prophecy)ಯಲ್ಲಿ ನಟಿಸಲಿದ್ದಾರೆ. 2021 ರಲ್ಲಿ ಬಿಡುಗಡೆಯಾದ ಡೆನಿಸ್ ವಿಲ್ಲೆನ್ಯೂವ್ ಅವರ ಡ್ಯೂನ್ ಸರಣಿಯ ಮುಂದುವರಿದ ಡ್ಯೂನ್: ಪ್ರೊಫೆಸಿ ಸರಣಿಯಲ್ಲಿ ಟಬು ಕಾಣಿಸಿಕೊಳ್ಳಲಿದ್ದಾರೆ.

ಸಿಸ್ಟರ್ ಫ್ರಾನ್ಸೆಸ್ಕಾ ಪಾತ್ರದಲ್ಲಿ ಟಬು
ವರದಿಯ ಪ್ರಕಾರ, ಸಿಸ್ಟರ್ ಫ್ರಾನ್ಸೆಸ್ಕಾ ಪಾತ್ರದಲ್ಲಿ ಟಬು ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯನ್ನು ಮೊದಲು 2019 ರಲ್ಲಿ 'ಡ್ಯೂನ್: ದಿ ಸಿಸ್ಟರ್‌ಹುಡ್' ಶೀರ್ಷಿಕೆಯಡಿಯಲ್ಲಿ ಮಾಡಲಾಗಿತ್ತು. ಇದು ಬ್ರಿಯಾನ್ ಹರ್ಬರ್ಟ್ ಮತ್ತು ಕೆವಿನ್ ಜೆ. ಆಂಡರ್ಸನ್ ಬರೆದ 'ಸಿಸ್ಟರ್‌ಹುಡ್ ಆಫ್ ಡ್ಯೂನ್' ಕಾದಂಬರಿಯಿಂದ ಪ್ರೇರಿತವಾಗಿದೆ.
ಪಾಲ್ ಆಟ್ರೀಡ್ಸ್ ಉದಯಕ್ಕೆ 10,000 ವರ್ಷಗಳ ಮೊದಲು, ಡ್ಯೂನ್‌ನ ವಿಸ್ತಾರವಾದ ಬ್ರಹ್ಮಾಂಡವನ್ನು ಪರಿಶೀಲಿಸುತ್ತದೆ. ಮಾನವೀಯತೆಯ ಭವಿಷ್ಯಕ್ಕೆ ಅಪಾಯ ತರುವ ಅಸಾಧಾರಣ ಶಕ್ತಿಗಳೊಂದಿಗೆ ಹೋರಾಡುತ್ತಿರುವ ಇಬ್ಬರು ಹಾರ್ಕೊನೆನ್ ಸಹೋದರಿಯರ ಕಥೆಯನ್ನು ತಿಳಿಸುತ್ತದೆ.

ಈ ಸರಣಿಯಲ್ಲಿ ಎಮಿಲಿ ವ್ಯಾಟ್ಸನ್, ಒಲಿವಿಯಾ ವಿಲಿಯಮ್ಸ್, ಟ್ರಾವಿಸ್ ಫಿಮ್ಮೆಲ್, ಜೊಹ್ಡಿ ಮೇ, ಮಾರ್ಕ್ ಸ್ಟ್ರಾಂಗ್, ಸಾರಾ-ಸೋಫಿ ಬೌಸ್ನಿನಾ, ಜೋಶ್ ಹ್ಯೂಸ್ಟನ್, ಕ್ಲೋಯ್ ಲೀ, ಜೇಡ್ ಅನೌಕಾ, ಫಾಯೋಲಿಯನ್ ಕನ್ನಿಂಗ್‌ಹ್ಯಾಮ್, ಎಡ್ವರ್ಡ್ ಡೇವಿಸ್, ಅಯೋಫ್ ಹಿಂಡ್ಸ್, ಕ್ರಿಸ್‌ಲಿನ್ ಬ್ರೂನೆ ಮತ್ತು ಶಾಲೊರಾಂಕ್ ಮೇಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅಲಿಸನ್ ಶಾಪ್ಕರ್ ಅವರು ಶೋರನ್ನರ್ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಸರಣಿಯನ್ನು ಮುನ್ನಡೆಸುತ್ತಾರೆ. ಡಯೇನ್ ಅಡೆಮು-ಜಾನ್ ಸಹ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ. ಬಿಡುಗಡೆ ದಿನಾಂಕವನ್ನು ಮುಚ್ಚಿಡಲಾಗಿದೆ. ದಿ ಡ್ಯೂನ್ ಸಾಗಾ ಎರಡು ಚಲನಚಿತ್ರಗಳು ಬಿಡುಗಡೆಯಾಗಿ ಅಪಾರ ಯಶಸ್ಸನ್ನು ಕಂಡಿದೆ. ಒಟ್ಟಾರೆಯಾಗಿ ವಿಶ್ವದಾದ್ಯಂತ $1.1 ಬಿಲಿಯನ್ ಗಳಿಸಿತು. ಡ್ಯೂನ್: ಭಾಗ ಎರಡು ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾಯಿತು. ಇದರಲ್ಲಿ ಝೆಂಡಯಾ, ಆಸ್ಟಿನ್ ಬಟ್ಲರ್ ಮತ್ತು ತಿಮೊಥಿ ಚಲಮೆಟ್ ನಟಿಸಿದ್ದಾರೆ.
ಹಾಲಿವುಡ್‌ನಲ್ಲಿ ಟಬು
ನಟಿ ಟಬು 2006 ರಲ್ಲಿ 'ದಿ ನೇಮ್‌ಸೇಕ್' ಮೂಲಕ ಹಾಲಿವುಡ್ ಸಿನಿಮಾಗಳಿಗೆ ಮೊದಲ ಬಾರಿಗೆ ಕಾಲಿಟ್ಟಿದ್ದರು. ಮೀರಾ ನಾಯರ್ ನಿರ್ದೇಶಿಸಿದ, ಇರ್ಫಾನ್ ಖಾನ್ ನಟಿಸಿದ ಚಲನಚಿತ್ರವು ಸಕಾರಾತ್ಮಕ ವಿಮರ್ಶೆ ಪಡೆದಿತ್ತು. ಅವರ ಎರಡನೇ ಚಿತ್ರ 'ಲೈಫ್ ಆಫ್ ಪೈ' 2012ರಲ್ಲಿ ಬಿಡುಗಡೆಯಾಗಿತ್ತು. ಇದು ಅತ್ಯುತ್ತಮ ನಿರ್ದೇಶಕ ಸೇರಿದಂತೆ ನಾಲ್ಕು ಆಸ್ಕರ್‌ಗಳನ್ನು ಗೆದ್ದುಕೊಂಡಿತು.
ಇನ್ನು, ಬಾಲಿವುಡ್‌ನಲ್ಲಿ ಟಬು ಅಜಯ್ ದೇವಗನ್ ಜೊತೆ 'ಔರಾನ್ ಮೇ ಕಹಾನ್ ದಮ್' ಚಿತ್ರದಲ್ಲಿ ಮತ್ತೆ ಒಂದಾಗಲಿದ್ದಾರೆ. ನೀರಜ್ ಪಾಂಡೆ ನಿರ್ದೇಶಿಸಿದ ಈ ಚಲನಚಿತ್ರವು 2000 ಮತ್ತು 2023 ರ ನಡುವೆ ನಡೆದ 23 ವರ್ಷಗಳ ಕಾಲ ನಡೆಯುವ ಸಿನಿಮಾ ಎನ್ನಲಾಗಿದೆ. ಟಬು ಕೊನೆಯದಾಗಿ ಕೃತಿ ಸನೋನ್ ಮತ್ತು ಕರೀನಾ ಕಪೂರ್ ಜೊತೆಗೆ Crew ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications