Sreeleela: ನಟಿ ಶ್ರೀಲೀಲಾಗೆ ಮೊದಲ ಬಾಲಿವುಡ್‌ ಸಿನಿಮಾದಲ್ಲೇ ಕೆಟ್ಟ ಅನುಭವ

ಸ್ಯಾಂಡಲ್‌ವುಡ್‌ನಿಂದ ಸಿನಿಮಾರಂಗ ಪ್ರವೇಶಿಸಿದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್‌ ಅಂಗಳದಲ್ಲಿ ಹವಾ ಸೃಷ್ಟಿಸಿ, ಬಾಲಿವುಡ್‌ಗೂ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾಗಳೊಂದಿಗೆ ಅವರು ಟಾಪ್‌ ನಟಿಯರ ಪಟ್ಟಿಗೆ ಸೇರಿದ್ದಾರೆ. ಸದ್ಯ ಅವರು ಬಾಲಿವುಡ್‌ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಬಾಲಿವುಡ್‌ ನಟ ಕಾರ್ತಿಕ್ ಆರ್ಯನ್ ಅವರೊಂದಿಗೆ ಶ್ರೀಲೀಲಾ ನಟಿಸುತ್ತಿದ್ದು, ಇತ್ತೀಚೆಗೆ ಶ್ರೀಲೀಲಾಗೆ ಕೆಟ್ಟ ಅನುಭವವೊಂದು ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಅವರು ಅನುರಾಗ್ ಬಸು ಅವರ ಮುಂಬರುವ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಗ್ಯಾಂಗ್ಟಾಕ್ ಮತ್ತು ಡಾರ್ಜಿಲಿಂಗ್‌ನ ಸುಂದರವಾದ ಸ್ಥಳಗಳಲ್ಲಿ ಈ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಡಾರ್ಜಿಲಿಂಗ್‌ನಲ್ಲಿ ಶೂಟಿಂಗ್‌ಗೆ ತೆರಳಿದ್ದಾಗ ಅಲ್ಲಿ ನಟಿಗೆ ಕೆಟ್ಟ ಅನುಭವವಾಗಿದೆ ಎಂದು ಹೇಳಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಹರಿದಾಡುತ್ತಿದೆ.

Actress Sreeleela Being Dragged By The Hand In A Crowd Video Gone Viral

ಜನಸಂದಣಿಯಲ್ಲಿ ಕಾರ್ತಿಕ್‌ ಆರ್ಯನ್‌ ಹಾಗೂ ಶ್ರೀಲೀಲಾ ಅವರು ಬರುತ್ತಿದ್ದಾಗ ಅಲ್ಲಿದ್ದ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ. ಎಲ್ಲರೆದುರೇ ಶ್ರೀಲೀಲಾ ಅವರ ಕೈ ಹಿಡಿದು ಪಕ್ಕಕ್ಕೆ ಎಳೆದಾಡಿದ್ದಾನೆ. ಈ ವೇಳೆ ಕಾರ್ತಿಕ್ ಆರ್ಯನ್‌ ಅವರು ಪಕ್ಕದಲ್ಲೇ ಇದ್ದರು. ಅಲ್ಲಿ ಶ್ರೀಲೀಲಾಗೆ ಈ ರೀತಿಯಾದರೂ ಕಾರ್ತಿಕ್‌ ಏನೂ ನಡೆದೇ ಇಲ್ಲ ಎನ್ನುವಂತೆ ಸುಮ್ಮನೆ ತೆರಳಿದ್ದಾರೆ. ಇನ್ನು ಶ್ರೀಲೀಲಾ ಅವರ ಕೈ ಎಳೆದಾಡಿದ್ದಕ್ಕೆ ನೋವಿನಿಂದ ತೋಳನ್ನು ಹಿಡಿದುಕೊಂಡೇ ಮುಂದೆ ಬಂದಿದ್ದಾರೆ.

ಕಾರ್ತಿಕ್ ಮುಂದೆ ನಡೆದುಕೊಂಡು ಬಂದರೂ ಕೊನೆಗೆ ಶ್ರೀಲೀಲಾ ಇಲ್ಲದಿರುವುದನ್ನು ಗಮನಿಸಿ ಹಿಂದಕ್ಕೆ ತಿರುಗಿ ನೋಡಿದರು. ಆದರೆ ಶ್ರೀಲೀಲಾ ಅವರು ನೋವಿನಿಂದ ತೋಳು ಹಿಡಿದು ಬರುತ್ತಿದ್ದರೂ ಕಾರ್ತಿಕ್‌ ಆರ್ಯನ್‌ ಏನೂ ಮಾತನಾಡದೆ ಸುಮ್ಮನೆ ಹೋಗಿದ್ದಾರೆ. ಇದಕ್ಕೆ ನಟಿಯ ಅಭಿಮಾನಿಗಳು ಫುಲ್‌ ಗರಂ ಆಗಿದ್ದಾರೆ. ಅಲ್ಲದೆ ಶ್ರೀಲೀಲಾಳನ್ನು ಜನಸಮೂಹದೊಳಗೆ ಎಳೆದ ಅಭಿಮಾನಿಯನ್ನು ನೋಡಿ ನೆಟ್ಟಿಗರು ಕೂಡ ಆಕ್ರೋಶಗೊಂಡಿದ್ದಾರೆ.

Actress Sreeleela Being Dragged By The Hand In A Crowd Video Gone Viral

ವೈರಲ್‌ ವಿಡಿಯೋಗೆ ಪ್ರತಿಕ್ರಿಯಿಸಿರುವ ಹಲವರು ಶ್ರೀಲೀಲಾ ಅವರನ್ನ ಎಳೆದವರನ್ನು ಶಿಕ್ಷಿಸಿ ಎಂದು ಆಗ್ರಹಿಸಿದ್ದಾರೆ. ಇದು ಜನಸಮೂಹದ ಕೆಟ್ಟ ನಡವಳಿಕೆ, ಶ್ರೀಲೀಲಾ ಈ ಘಟನೆಯಿಂದ ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದಾರೆ. ಕಾರ್ತಿಕ್ ಆರ್ಯನ್‌ಗೆ ಸಹ ಇಂತಹ ಜನಸಂದಣಿಯಲ್ಲಿ ರಕ್ಷಣೆ ಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದೊಂದು ಭಯಾನಕ ಘಟನೆ. ಶ್ರೀಲೀಲಾ ಅವರನ್ನು ಎಳೆದೊಯ್ದ ರೀತಿ ತುಂಬಾ ಅಸುರಕ್ಷಿತ. ಬೌನ್ಸರ್‌ಗಳು ನಟಿಯನ್ನು ರಕ್ಷಿಸಬೇಕಾಗಿತ್ತು. ಸಾಮಾನ್ಯ ಹುಡುಗಿಯರು ಸಹ ಇಂತಹ ಜನದಟ್ಟಣೆಯ ಸಂದರ್ಭಗಳಲ್ಲಿ ನಡೆಯಲು ಸಾಧ್ಯವಿಲ್ಲ, ಹೀಗಿರುವಾದ ಪ್ರಸಿದ್ಧ ನಟಿಗೆ ಈ ರೀತಿ ಆಗಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ತಿಕ್‌ ಜೊತೆ ಶ್ರೀಲೀಲಾ ಲವ್‌ ವದಂತಿ

ಬಾಲಿವುಡ್‌ ಕಾಲಿಟ್ಟಿರುವ ಶ್ರೀಲೀಲಾ ಕುರಿತು ವದಂತಿಯೊಂದು ಹರಿದಾಡುತ್ತಿದೆ. ಬಾಲಿವುಡ್‌ ನಟ ಕಾರ್ತಿಕ್‌ ಆರ್ಯನ್‌ ಅವರೊಂದಿಗೆ ಶ್ರೀಲೀಲಾ ಲವ್‌ನಲ್ಲಿ ಬಿದ್ದಿದ್ದಾರೆ ಎಂದು ಗುಸುಗುಸು ಕೇಳಿಬರುತ್ತಿದೆ. ಈ ಬಗ್ಗೆ ನಟಿ ಎಲ್ಲಿಯೂ ಮಾತನಾಡಿಲ್ಲ. ಟಿ-ಸೀರೀಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್ ನಿರ್ಮಿಸುತ್ತಿರುವ ಹೊಸ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದು, ಈ ಸಿನಿಮಾ ದೀಪಾವಳಿಗೆ ಬಿಡುಗಡೆಯಾಗಲಿದೆ. ಕಾರ್ತಿಕ್ ಈ ಹಿಂದೆ ಮಾರ್ಚ್ 28 ರಂದು ಡಾರ್ಜಿಲಿಂಗ್‌ನ ಸಿಲಿಗುರಿಯಿಂದ ಶ್ರೀಲೀಲಾ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದರು. ಇದಕ್ಕೆ "ತು ಮೇರಿ ಜಿಂದಗಿ ಹೈ" ಎಂದು ಬರೆದುಕೊಂಡಿದ್ದರು. ಬಳಿಕವೇ ಈ ಲವ್‌ ವದಂತಿ ಹಬ್ಬಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+