Sonu Gowda: ಕೊನೆಗೂ ಎರಡನೇ ಮದುವೆ ಬಗ್ಗೆ ಮೌನ ಮುರಿದ ನಟಿ ಸೋನು ಗೌಡ
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನೇ ಕಾದು ಆಯ್ದುಕೊಳ್ಳುವ ನಟಿಯೆಂದರೆ ಅದು ಇಂತಿ ನಿನ್ನ ಪ್ರೀತಿಯ ಸಿನಿಮಾ ಖ್ಯಾತಿಯ ನಟಿ ಸೋನು ಗೌಡ. ವಿಭಿನ್ನವಾದ, ಜನರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳನ್ನೇ ಆಯ್ದುಕೊಳ್ಳುವ ಸೋನು ಗೌಡ ಇದೀಗ ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಸೋನು ಗೌಡ ಅಭಿನಯದ ಟೆನಂಟ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ ಟೆನಂಟ್ ಸಿನಿಮಾ ನವೆಂಬರ್ 22 ರಂದು ತೆರೆಕಾಣಲಿದೆ. ಹೀಗಾಗಿ ಚಿತ್ರತಂಡ ಸಿನಿಮಾ ಪ್ರೋಮೋಷನ್ ಕೆಲಸದಲ್ಲಿ ಬ್ಯೂಸಿಯಾಗಿದೆ. ಟೆನಂಟ್ ಸಿನಿಮಾ ಪ್ರಚಾರದಲ್ಲಿರುವ ನಟಿ ಸೋನು ಗೌಡ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೂಡ ಮಾತನಾಡಿದ್ದು, ಎರಡನೇ ಮದುವೆ ಬಗ್ಗೆ ಕೂಡ ಕೆಲವು ಕುತೂಹಲಕಾರಿ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.

'ನಿಮಗೆ ಇನ್ನೊಂದು ಪಾರ್ಟ್ನರ್ ಯಾಕೆ ಸಿಗಬಾರದು..? ಅಥವಾ ನೀವು ಆ ಪ್ರೀತಿಗಾಗಿ ಹುಡುಕುತ್ತಿದ್ದಾರಾ..? ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ ಸೋನು ಗೌಡ, 'ಕೆಲವೊಂದು ಸಹ ನಾವು ಬೇಡ ಎಂದರೂ ಅದು ನಮಗೆ ಸಿಕ್ಕಿರುತ್ತದೆ. ಕೆಲವೊಂದು ಸಹ ಅದು ಬೇಕು ಅಂದರೂ ಅದು ಸಿಕ್ಕಿರುವುದಿಲ್ಲ. ನಾನು ವಿಧಿಯ ಮೇಲೆ ನಂಬಿಕೆ ಇಟ್ಟಿದ್ದೇನೆ. ವಿಧಿ ಆ ವ್ಯಕ್ತಿ ನನ್ನ ಜೀವನಕ್ಕೆ ಬೇಡ ಅಂತಾ ಎಂದುಕೊಂಡಿದ್ದರೆ ಹಾಗೇ ಆಗುತ್ತದೆ. ನನಗೆ ಅದರ ಮೇಲೆ ನಂಬಿಕೆ ಇದೆ' ಎಂದರು.
'ಈಗಂತೂ ನನ್ನ ಲೈಫ್ ಹೀಗಾಯ್ತು ಅಂತಾ ಕೊರಗಿಕೊಂಡು ಕೂರುವ ಮೂಡ್‌ನಲ್ಲಿ ನಾನಿಲ್ಲ. ಇದ್ದರೆ ಚೆನ್ನಾಗಿ ಇರಬೇಕು. ನನ್ನ ಜೀವನ ತುಂಬಾ ಚೆನ್ನಾಗಿದೆ. ನನ್ನ ಆಲೋಚನೆಗೆ ತಕ್ಕಂತಹ ಪಾರ್ಟ್ನರ್ ಸಿಕ್ಕೇ ಸಿಗುತ್ತಾರೆ. ಸಿಕ್ಕಾಗ ಖಂಡಿತ ಹೇಳುತ್ತೇನೆ. ಪಾರ್ಟ್ನರ್ ಸಿಕ್ಕಿದಾಗ ಖಂಡಿತಾ ಎಲ್ಲಿರೂ ಹೇಳುತೇನೆ' ಎಂದರು.

'ಜೀವನದಲ್ಲಿ ಹೊಸ ಹೆಜ್ಜೆ ಇಡಲು ಜೀವನದಲ್ಲಿ ಹಿಂದೆ ನಡೆದ ಘಟನೆಗಳು ಕಾರಣ ಇರಬಹುದಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸೋನು ಗೌಡ, ಎಲ್ಲವೂ ಕಾರಣವಾಗುತ್ತದೆ. ಇಬ್ಬ ಮನುಷ್ಯ ಬೆಳೆಯುತ್ತಾ, ಘಟಿಸಿದ ಕಹಿ ಘಟನೆಗಳಿಂದ ಜಡತ್ವ ಬೆಳೆದು ಬಿಡುತ್ತದೆ. ಎಲ್ಲಾ ವಿಚಾರ ಬಗ್ಗೆ ಹೆಚ್ಚು ಜಾಗೃತರಾಗುತ್ತೇವೆ. ಹೀಗಾಗಿ ನನ್ನ ಹಳೆಯ ಅನುಭವದಿಂದ ಆಗಿರಬಹುದು ಅಥವಾ ಬೇರೆ ಕಾರಣದಿಂದ ಆಗಿರಬಹುದು' ಎಂದು ಹೇಳಿದರು.
'ನನಗೆ ನನ್ನ ಬಗ್ಗೆ ನಂಬಿಕೆ ಹಾಗೂ ಸ್ಪಷ್ಟತೆ ಇದೆ. ನನ್ನ ಜೀವನ ಈ ರೀತಿ ಇರಬೇಕು ಎನ್ನುವ ಸ್ಪಷ್ಟತೆ ಇದೆ. ಅದೇ ಸ್ಪಷ್ಟತೆ ಒಬ್ಬ ಹುಡುಗನಿಗೂ ಸಿಕ್ಕಿದಾಗ ಅಉ ಉತ್ತಮವಾಗಿರುತ್ತದೆ. ನಮ್ಮ ಆಲೋಚನೆಗಳು ಹೊಂದಾಣಿಕೆ ಆದಾಗ ಚೆನ್ನಾಗಿರುತ್ತದೆ. ಬೇರೆ ಏನೂ ನಿರೀಕ್ಷೆ ಇಲ್ಲ. ಹುಡುಗ ಇದೇ ರೀತಿ ಇರಬೇಕು ಎನ್ನುವ ಯಾವ ನಿರೀಕ್ಷೆ ಕೂಡ ಇಲ್ಲ. ನಾನು ಜೀವನದಲ್ಲಿ ಆರಾಮಾಗಿದ್ದೇನೆ. ಇದೇ ರೀತಿ ನೀವು ಬಂದು ಆರಾಮಾಗಿ ಇರುವುದಿದ್ದರೆ ಇರಿ. ಇಲ್ಲ ಅಂದರೆ ಬೇಡ' ಎಂದು ನೇರವಾಗಿ ನಟಿ ಹೇಳಿದರು.
'ನನಗೆ ಸದ್ಯಕ್ಕೆ ಯಾವುದೇ ಒತ್ತಡವನ್ನು ತೆಗೆದುಕೊಳ್ಳಲು ಇಷ್ಟ ಇಲ್ಲ. ಜೀವನದಲ್ಲಿ ಕಿತ್ತಾಟಗಳು ಇದ್ದೇ ಇರುತ್ತದೆ. ಇಷ್ಟು ವರ್ಷ ಆದರೂ ನಮ್ಮ ಅಪ್ಪ-ಅಮ್ಮ ಕಿತ್ತಾಡುತ್ತಾರೆ. ಆದರೆ ಕೊನೆಯಲ್ಲಿ ಅವರಿಗೆ ಪ್ರೀತಿ ಅಂದರೆ ಇದೇ ಅಂತಾ ಗೊತ್ತು. ಪ್ರೀತಿ ಇದ್ದ ಕಡೆ ಜಗಳ ಇದ್ದೇ ಇರುತ್ತದೆ. ಆದರೆ ಎಂದಿಗೂ ಸಾಕು ಎನಿಸಿ ಬಿಡಬಾರದು ಎನ್ನುವುದರ ಮೇಲೆ ನಂಬಿಕೆ ಇಟ್ಟಿದ್ದೇನೆ' ಎಂದು ನಟಿ ಸೋನು ಗೌಡ ಹೇಳಿದ್ದಾರೆ.












Click it and Unblock the Notifications