Sonal Monteiro: ನನಗೆ ತರುಣ್‌ನ ಸೆಟ್ ಮಾಡಿಕೊಡು ಎಂದು ಸೋನಲ್‌ಗೆ ಕೇಳಿದ್ಯಾರು?
ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ (Sonal Monteiro) ಅವರು ಇತ್ತೀಚೆಗೆ ಮದುವೆಯಾಗುವ ಮೂಲಕ ಸ್ಯಾಂಡಲ್‌ವುಡ್ ಕ್ಯೂಟ್ ಜೋಡಿಗಳ ಸಾಲಿಗೆ ಸೇರಿಕೊಂಡಿದ್ದಾರೆ. ಮದುವೆಯಾಗಿ ಹಲವು ತಿಂಗಳ ಬಳಿಕ ಶಾಕಿಂಗ್ ವಿಚಾರವೊಂದು ಬಹಿರಂಗವಾಗಿದೆ. ಈ ಬಗ್ಗೆ ಸೋನಲ್ ಅವರೇ ಅಚ್ಚರಿ ವಿಚಾರವನ್ನು ರಿವೀಲ್ ಮಾಡಿದ್ದಾರೆ. ತಮ್ಮ ಪತಿ ತರುಣ್ ಅವರ ಮೇಲೆ ಒಬ್ಬರು ಕಣ್ಣುಹಾಕಿದ್ದು ಮಾತ್ರವಲ್ಲದೆ, ತರುಣ್ ಅವರನ್ನ ಸೆಟ್ ಮಾಡಿಕೊಡುವಂತೆ ಖುದ್ದು ಸೋನಲ್ ಅವರಿಗೇ ಕೇಳಿದ್ದರು ಎಂದು ಹೇಳಿದ್ದಾರೆ. ಇಷ್ಟಕ್ಕೂ ಇವರಿಬ್ಬರ ಲವ್‌ಸ್ಟೋರಿಗೆ ಹುಳಿ ಹಿಂಡಲು ಬಂದಿದ್ಯಾರು ಗೊತ್ತಾ?
ಸೋನಲ್ ಹಾಗೂ ತರುಣ್ ಸುಧೀರ್ ಅವರು ಒಂದೇ ವೃತ್ತಿಯಲ್ಲಿದ್ದರೂ ಸೋನಲ್ ಅವರು ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ತರುಣ್ ಅವರು ಸಿನಿಮಾ ಕುಟುಂಬದಿಂದ ಬಂದರೂ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ನಂತರ ನಿರ್ದೇಶಕರಾಗಿ ಸಕ್ಸಸ್ ಕೂಡ ಕಂಡವರು. ಆದರೆ, ಇವರಿಬ್ಬರ ಲವ್‌ಸ್ಟೋರಿಯು ಸ್ಯಾಂಡಲ್‌ವುಡ್‌ಗೆ ಶಾಕ್ ಕೊಟ್ಟಿತ್ತು. ಇವರಿಬ್ಬರ ಲವ್ ಬಗ್ಗೆ ಎಲ್ಲಿಯೂ ಗಾಸಿಪ್ ಕೂಡ ಹರಡಿರಲಿಲ್ಲ. ಅಷ್ಟರ ಮಟ್ಟಿಗೆ ಸೈಲೆಂಟಾಗಿ ಇವರು ಪ್ರೇಮಾಂಕುರದಲ್ಲಿದ್ದರು. ಕೊನೆಗೆ ಇಬ್ಬರೂ ಪರಸ್ಪರ ಒಪ್ಪಿಗೆ ತಮ್ಮ ಸಂಪ್ರದಾಯಗಳಂತೆ ಮದುವೆಯೂ ಆದರು. ಆದರೆ, ಈ ನಡುವೆ ಸೋನಲ್ ಅವರನ್ನು ಬೀಟ್ ಮಾಡಲು ಒಬ್ಬರು ಪ್ರಯತ್ನಿಸಿದ್ದರಂತೆ.

ಹೌದು, ತರುಣ್ ಸುಧೀರ್ ಅವರ ಮೇಲೆ ಸೋನಲ್ ಅವರ ಸ್ನೇಹಿತೆಗೆ ಕ್ರಶ್ ಆಗಿತ್ತಂತೆ. ಈ ವಿಚಾರವನ್ನ ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದಾರೆ. "ನನ್ನ ಸ್ನೇಹಿತೆಗೆ ತರುಣ್ ಸುಧೀರ್ ಮೇಲೆ ಕ್ರಶ್ ಆಗಿತ್ತು. ʼರಾಬರ್ಟ್ʼ ಸಿನಿಮಾ ಸಮಯದಲ್ಲಿ ಅವಳು ನನ್ನ ಹಿಂದೆ ಬಿದ್ದಿದ್ದಳು. ತರುಣ್ ಅವರಿಗೆ ಹುಡುಗಿ ಹುಡುಕುತ್ತಿದ್ದಾರೆ, ಪ್ಲೀಸ್ ಅವರನ್ನು ಹೇಗಾದ್ರೂ ಮಾಡಿ ನನಗೆ ಸೆಟ್ ಮಾಡಿಕೊಡು, ಪ್ಲೀಸ್ ಅಂತ ಕೇಳುತ್ತಿದ್ದಳು" ಎಂದು ಸೋನಲ್ ಹೇಳಿದ್ದಾರೆ.
"ಆದ್ರೆ ಈ ಬಗ್ಗೆ ನಾನು ಹೇಗೆ ತರುಣ್ ಅವರ ಬಳಿ ಮಾತನಾಡಲಿ? ಎಂದು ಸುಮ್ಮನಾಗಿದ್ದೆ. ಇದೇ ಸಮಯಕ್ಕೆ ಸೆಟ್‌ನಲ್ಲಿ ಎಲ್ಲರೂ ನನ್ನ ಹಾಗೂ ತರುಣ್ ನಡುವೆ ಏನೋ ಇದೆ ಎಂದು ಕೇಳುತ್ತಿದ್ರು. ನಿಮ್ಮ ತರುಣ್ ನಡುವೆ ಏನಾದ್ರೂ ನಡೆಯುತ್ತಿದ್ಯಾ ಎಂದು ಕೇಳಲು ಶುರು ಮಾಡಿದ್ರು. ನಾನು ಈ ವಿಚಾರವನ್ನ ತರುಣ್ ಅವರಿಗೂ ತಿಳಿಸಿದ್ದೆ. ಕೊನೆಗೆ ಆ ರೀತಿ ಏನಿಲ್ಲ ಎಂದು ಹೇಳಿದ್ದೆ. ನಿಜಕ್ಕೂ ಅಲ್ಲಿವರೆಗೆ ನಮ್ಮಿಬ್ಬರ ನಡುವೆ ಏನೂ ಇರಲಿಲ್ಲ. ಈ ಬೆಳವಣಿಗೆ ಆದ ನಂತರವೇ ನಾವಿಬ್ಬರೂ ಮೆಸೇಜ್ ಮಾಡಲು ಶುರು ಮಾಡಿದೆವು. ಈಗ ನನ್ನ ಸ್ನೇಹಿತೆ ಪಾಪ ತುಂಬಾ ಬೇಜಾರಾಗುತ್ತಾಳೆ" ಎಂದು ಸೋನಲ್ ಹೇಳಿದ್ದಾರೆ.
"ಹಿಂದೂ ಸಂಪ್ರದಾಯದಲ್ಲಿ ಅರಿಶಿನ ಶಾಸ್ತ್ರ ಮಾಡುವಂತೆ ನಮ್ಮ ಕ್ರಿಶ್ಚಿಯನ್ ಸಂಪ್ರದಾಯದಲ್ಲೂ ರೋಸ್ ಎಂಬ ಪದ್ಧತಿ ಇದೆ. ಈ ಪದ್ಧತಿಯಂತೆ ಕೊಬ್ಬರಿ ಎಣ್ಣೆ ಹಾಕ್ತಾರೆ. ತರುಣ್‌ಗೆ ನಮ್ಮ ಕಡೆಯವ್ರು ಗ್ರ್ಯಾಂಡ್ ವೆಲ್‌ಕಮ್ ಕೊಟ್ಟಿದ್ದರು. ಅದನ್ನು ಮೆಚ್ಚಿದ್ದ ತರುಣ್ ಅವರು ನಮ್ಮ ಫ್ಯಾಮಿಲಿಯವರು ತುಂಬಾ ಸ್ವೀಟ್ ಎಂದಿದ್ರು. ಆದರೆ, ನಮ್ಮ ಮನೆಯಲ್ಲಿ ಜ್ಯೂಸ್ ಕೊಟ್ರೂ ತರುಣ್ ಅವರಿಗೆ ಭಯ" ಎಂದು ಸೋನಲ್ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.












Click it and Unblock the Notifications