Actress Sharanya Shetty: 'ಸೋತೆ ಹೋದೆ..' ಹಾಡಿಗೆ ನಟಿ ಶರಣ್ಯ ಶೆಟ್ಟಿ ಮಸ್ತ್ ಸ್ಟೆಪ್ಸ್, ವಿಡಿಯೋ ವೈರಲ್
ಬೆಂಗಳೂರು, ನವೆಂಬರ್ 22: ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದಿಂದ ಗಮನಸಳೆದ ನಟಿ ಶರಣ್ಯ ಶೆಟ್ಟಿ ಅವರು ಮಸ್ತ್ ಡಾನ್ಸ್ ವಿಡಿಯೋ ವೈರಲ್ ಆಗುತ್ತಿದೆ. ನಟ ಗಣೇಶ್ ಅವರ ಜೊತೆಗೆ 'ಕಾಡದೆಯೇ ಹೇಗಿರಲಿ...' ಹಾಡಿನಲ್ಲಿ ತಮ್ಮ ಗ್ಲಾಮರಸ್ ನೋಟದಿಂದಲೇ ಈ ಶರಣ್ಯ ಶೆಟ್ಟಿ ಅವರು ಪಡ್ಡೆ ಹುಡುಗರನ್ನು ಆಕರ್ಷಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರ ಪ್ರತಿ ಪೋಸ್ಟ್‌ಗೆ ಅಧಿಕ ವಿವ್ಸ್, ಮೆಚ್ಚುಗೆ ಬರಲಾರಂಭಿಸಿವು.
'ದ್ವಾಪರಾ' ಹಾಡಿನ ಜೊತೆಗೆ 'ಕಾಡದೆಯೇ..' ಹಾಡು ಸಹ ಗುನುಗುವಂತೆ ಮಾಡಿತ್ತು. ಇಂಡಸ್ಟ್ರಿಗೆ ಮತ್ತೋರ್ವ ಭರವಸೆಯ ನಟಿ ಸಿಕ್ಕಳು ಎಂದೆಲ್ಲ ಫ್ಯಾನ್ಸ್ ಮಾತನಾಡಿದ್ದರು. ಇದೀಗ ಖ್ಯಾತ ಗಾಯಕರಾದ ಸೋನು ನಿಗಮ್ ಹಾಗೂ ಕನ್ನಡದ ಸಂಚಿತ ಹೆಗಡೆ ಅವರು ಹಾಡಿದ ಆಲ್ಬಮ್ ಸಾಂಗ್ 'ಸೋತೆ ಹೋದೆ...ಸೋತೆ ಹೋದೆ, ಮಾಯಾವಿ' ಹಾಡಿಗೆ ನಟಿ ಶರಣ್ಯ ಅವರು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಬೆಸ್ಟ್ ಸಾಂಗ್, ಫೇವರೇಟ್ ನಟಿಯ ಡಾನ್ಸ್ ಎಂದ ಫ್ಯಾನ್ಸ್
ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಶರಣ್ಯ ಶೆಟ್ಟಿ ಅವರು ಡಾನ್ಸ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದ ಕಪ್ಪು, ಬಿಳುಪು ಸ್ಲಿವ್ ಲೆಸ್ ಉಡುಪಿನಲ್ಲಿ ಕಾಣುವ ನಟಿ, ಹಾಡಿಗೆ ಮ್ಯಾಚ್ ಆಗುವಂತೆ ಚೆಂದದ ಸ್ಟೆಪ್ಸ್ ಹಾಕಿದ್ದಾರೆ. ಇದು ಅವರ ಫ್ಯಾನ್ಸ್‌ಗೆ ಇಷ್ಟವಾಗಿದೆ. 20 ಸಾವಿರ ಲೈಕ್ಸ್‌ಗಳು ಅವರ ವಿಡಿಯೋಗೆ ಬಂದಿವೆ.
'ಸಂಗೀತದ ಪ್ರಪಂಚ' ಇದು ಪ್ರಾಕ್ಟೀಸ್ ವಿಡಿಯೋ' ಎಂದು ವಿಡಿಯೋ ಜೊತೆಗೆ ನಟಿ ಟ್ಯಾಗ್ ಲೈನ್ ಬರೆದುಕೊಂಡಿದ್ದಾರೆ. ಇತ್ತೀಚೆಗೆ ಸಂಚಿತ್ ಹೆಗಡೆ ಮತ್ತು ಸೋನು ನಿಗಮ್ ಅವರ ಧ್ವನಿಯಲ್ಲಿ ಕೇಳಿ ಬಂದ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚೆಲ್ ಎಬ್ಬಿಸಿದೆ. ಎಲ್ಲೆಲ್ಲೂ ಇದೇ ಸಾಂಗ್ ಗುನುವಂತೆ ಮಾಡಿದೆ. ಪ್ರೀತಿದವಳಿಗಾಗಿ ಹಾಡುವ, ಸ್ಮರಿಸುವ ಹಾಡು ಇದಾಗಿದ್ದು, ಈ ಸಂಗೀತಕ್ಕೆ ಜನ ಮಾರು ಹೋಗಿದ್ದಾರೆ.
ವಿಡಿಯೋ-ಡಾನ್ಸ್ ನೋಡಿದ ಫ್ಯಾನ್ಸ್ ಹೇಳಿದ್ದೇನು
ಇಷ್ಟದ ನಟಿ ಬೊಂಬಾಟ್ ಸಾಂಗಿಗೆ ಸ್ಟೆಪ್ಸ್ ಹಾಕುವ ಮೂಲಕ ತಮ್ಮ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ್ದಾರೆ. ವಿಡಿಯೋ ಅನೇಕ ಕಾಮೆಂಟ್‌ಗಳು ಬಂದಿವೆ.
ನೆಟ್ಟಿಗರು ಸೂಪರ್, ಹಿಟ್ ಹಾಡು, ಒಳ್ಳೆಯ ನೃತ್ಯ, ನೈಸ್ ಎಂದು ಹಾರ್ಟ್ ಎಮೋಜಿಯಗಳನ್ನು ಕಳುಹಿಸಿದ್ದಾರೆ. ಹೀಟ್ ಸಾಂಗ್ ಗೆ ಫೇವರೇಟ್ ನಟಿ ಡಾನ್ಸ್ ಮಸ್ತ್ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಈ ನೃತ್ಯದ ಮೂಲಕ ನಟಿ ಶರಣ್ಯ ಶೆಟ್ಟಿವರು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರುವಾಗಿದ್ದಾರೆ ಎನ್ನಬಹುದು.
ನಟಿ ಶರಣ್ಯ ಅವರಿಗೆ ಸೈಮಾ ಅವಾರ್ಡ್ 2022
ಕೃಷ್ಣ ಪ್ರಣಾಯ ಸಖಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಶರಣ್ಯ ಶೆಟ್ಟಿ ಅವರಿಗೆ ಇತ್ತೀಚೆಗೆ '2022ರ ಸೈಮಾ ಅತ್ಯುತ್ತಮ ಚೊಚ್ಚಲ ನಟಿ (Siima Debutatnt award 2022) ಪ್ರಶಸ್ತಿ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಶರಣ್ಯ ಅವರ ಬ್ಯೂಟಿ, ಗ್ಲಾಮರಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆಗಾಗ ಅವರು ತಮ್ಮ ದಿನಚರಿಗಳ ಅಪ್ಡೇಟ್, ಹೊಸ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯು ಅವರ ಹೊಸ ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ.












Click it and Unblock the Notifications