Sai Pallavi: ಸಿಂಪಲ್‌ ನಟಿ ಸಾಯಿ ಪಲ್ಲವಿ ಆರೋಗ್ಯದಲ್ಲಿ ಏರುಪೇರು

ಖ್ಯಾತ ನಟಿ ಸಾಯಿ ಪಲ್ಲವಿ ಅವರ ಬಗ್ಗೆ ಶಾಕಿಂಗ್‌ ವಿಚಾರವೊಂದು ಹೊರಬಿದ್ದಿದೆ. ಸಿಂಪಲ್‌ ಬ್ಯೂಟಿ ಸಾಯಿ ಪಲ್ಲವಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಬೆಡ್‌ರೆಸ್ಟ್‌ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ತಿಳಿದು ಸಾಯಿ ಪಲ್ಲವಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಖ್ಯಾತ ನಟಿ ಸಾಯಿ ಪಲ್ಲವಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಸಿನಿಮಾ ನಿರ್ದೇಶಕ ಚಂದೂ ಮೊಂಡೇಟಿ ಅವರೇ ಬಹಿರಂಗಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಯಿ ಪಲ್ಲವಿ ತೀವ್ರ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಸಾಯಿ ಪಲ್ಲವಿ ಅವರ ಆರೋಗ್ಯ ಸುಧಾರಿಸದಿದ್ದರೂ ಅವರು "ಥಂಡೇಲ್" ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸತತವಾಗಿ ಅವರು ಪ್ರಚಾರದಲ್ಲಿ ತೊಡಗಿದ್ದರಿಂದಲೂ ಅವರು ಮತ್ತಷ್ಟು ಬಳಲಿದ್ದಾರೆ ಎಂದು ವರದಿಯಾಗಿದೆ.

Actress Sai Pallavi Health Concerns Doctors Advise Bed Rest

ಸದ್ಯ ಸಾಯಿ ಪಲ್ಲವಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕೆಲವು ದಿನಗಳ ಕಾಲ ಸಂಪೂರ್ಣವಾಗಿ ಬೆಡ್‌ರೆಸ್ಟ್‌ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರಂತೆ. ಇದೇ ಕಾರಣಕ್ಕೆ ಅನಾರೋಗ್ಯದ ಹಿನ್ನೆಲೆ ಮುಂಬೈನಲ್ಲಿ ನಡೆದ "ಥಂಡೇಲ್" ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಸದಾ ಹಸನ್ಮುಖಿಯಾಗಿದ್ದ ಸಾಯಿ ಪಲ್ಲವಿ ಅವರು ಅನಾರೋಗ್ಯಕ್ಕೆ ತುತ್ತಾಗಿರುವ ವಿಚಾರ ತಿಳಿದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ನಟಿಯ ಆರೋಗ್ಯ ಆದಷ್ಟು ಬೇಗನೆ ಸುಧಾರಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಸಾಯಿ ಪಲ್ಲವಿ ಮುಂಬೈನಲ್ಲಿ ನಡೆದ ತಾಂಡೇಲ್ ಹಿಂದಿ ಟ್ರೈಲರ್ ಬಿಡುಗಡೆಗೆ ಹಾಜರಾಗಬೇಕಿತ್ತು. ಆದರೆ ಪ್ರಚಾರ ಚಟುವಟಿಕೆಗಳಿಗಾಗಿ ಅವರು ನಿರಂತರವಾಗಿ ಪ್ರಯಾಣ ಮಾಡಿದ್ದರಿಂದಲೂ ಅವರ ಆರೋಗ್ಯ ಹಾಳಾಗಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ತೆರೆಕಂಡ ಅಮರನ್‌ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಸಿನಿಮಾ ಕೂಡ ಸಖತ್‌ ಹಿಟ್‌ ಕಂಡಿತ್ತು. ಬಳಿಕ ತೆಲುಗು ನಟ ನಾಗಚೈತನ್ಯ ಅವರೊಂದಿಗೆ ತಾಂಡೇಲ್‌ ಸಿನಿಮಾದಲ್ಲೂ ನಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಂದೂ ಮೊಂಡೇಟಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

Actress Sai Pallavi Health Concerns Doctors Advise Bed Rest

ಈ ಸಿನಿಮಾಗೆ ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜಿಸಿದ್ದು, ಫೆಬ್ರವರಿ 7ರಂದು ರಿಲೀಸ್‌ ಆಗಲಿದೆ. ಈ ಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ. ಈ ಹಿಂದೆ ಲವ್ ಸ್ಟೋರಿ ಸಿನಿಮಾ ನಂತರ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಈ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ನಿರ್ಮಿಸಲಾದ ಈ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಸಿನಿಮಾಗಾಗಿ ಓಡಾಟದ ಹಿನ್ನೆಲೆ ಸಾಯಿ ಪಲ್ಲವಿ ಮತ್ತಷ್ಟು ವೀಕ್ ಆಗಿದ್ದಾರೆ. ವೈದ್ಯರ ಸೂಚನೆಯಂತೆ ಸಾಯಿ ಪಲ್ಲವಿ ಅವರು ಕನಿಷ್ಠ ಎರಡು ದಿನಗಳಾದರೂ ವಿಶ್ರಾಂತಿ ಪಡೆಯಲೇಬೇಕು ಎನ್ನಲಾಗಿದೆ. ಹಾಗಾಗಿಯೇ ಅವರು ಮುಂಬೈನಲ್ಲಿ ನಡೆದ ಟ್ರೇಲರ್ ರಿಲೀಸ್ ಈವೆಂಟ್ಗೆ ಬರಲು ಸಾಧ್ಯವಾಗಲಿಲ್ಲ. ಈ ನಡುವೆ ಸಾಯಿ ಪಲ್ಲವಿ ಅವರು ಸಿನಿಮಾದಿಂದ ದೂರ ಉಳಿದ್ರಾ ಎಂಬ ಚರ್ಚೆ ಕೂಡ ಹುಟ್ಟಿಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+