Actress Rashmika Mandanna: ಡಿಸೆಂಬರ್ 6ರಂದು ರಶ್ಮಿಕಾ vs ರಶ್ಮಿಕಾ!, ಹೆಚ್ಚಾಯ್ತು ಕುತೂಹಲ
ಬೆಂಗಳೂರು, ಜುಲೈ 24: ಬಾಲಿವುಡ್ ನಲ್ಲಿ ಮಿಂಚುತ್ತಿರುವ ಬಹುಭಾಷಾ ನಟಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ (Rashmika Mandanna)ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ಮುಂದಿನ ಡಿಸೆಂಬರ್ ನಲ್ಲಿ ನಟಿಯ ಎರಡು ಹೈ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿವೆ. ಈ ವರ್ಷಾಂತ್ಯಕ್ಕೆ ರಶ್ಮಿಕಾ ನಟನೆಯ ಎರಡು ಸಿನಿಮಾಗಳು ಮುಖಾಮುಖಿ ಆಗಲಿವೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ -1' ರಲ್ಲಿ ರಶ್ಮಿಕಾ ಅವರು 'ಶ್ರೀವಲ್ಲಿ' ಪಾತ್ರದಲ್ಲಿ ಮೆಚ್ಚುಗೆ ಪಡೆದಿದ್ದರು. ಅದರ ಮುಂದುವರಿದ ಭಾಗ 'ಪುಷ್ಪ-2' (Pushpa 2 The Rule)ಸಿನಿಮಾ ಡಿಸೆಂಬರ್‌ಗೆ 06 ರಂದು ರಿಲೀಸ್ ಆಗಲಿದೆ. ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ.

ಆಗಸ್ಟ್ 15ರಂದು ಸಿನಿಮಾ ಬಿಡುಗಡೆ ಎಂದು ಹೇಳಲಾಗಿತ್ತು, ಆದರೆ ಸಿನಿಮಾ ನಿರ್ಮಾಣದ ವಿಳಂಬದಿಂದಾಗಿ ಪುಷ್ಪ 2 ಸಿನಿಮಾ ಡಿಸೆಂಬರ್ 6ರಂದು ಬಿಡುಗಡೆ ಆಗಲಿದೆ. ಇದೇ ದಿನ ನಟಿ ರಶ್ಮಿಕಾ ಹಾಗೂ ನಟ ವಿಕ್ಕಿ ಕೌಶಲ್ (Vicky Kaushal) ನಟನೆಯ ಐತಿಹಾಸಿಕ ಸಿನಿಮಾ 'ಛಾವಾ' (Chhava film) ರಿಲೀಸ್ ಆಗುವುದು ಪಕ್ಕಾ ಆಗಿದೆ. ಈ ಸಿನಿಮಾ ಛತ್ರಪತಿ ಶಿವಾಜಿಯ ಮಗ ಸಂಭಾಜಿಯ ಕುರಿತ ಕಥೆ ಹೊಂದಿದೆ. ಹೀಗಾಗಿ ಇದರ ಮೇಲೆಯು ಭರಪೂರ ನಿರೀಕ್ಷೆಗಳು ಇವೆ.
'ಛಾವಾ' ಗೆದ್ದರೆ ಬಾಲಿವುಡ್‌ನಲ್ಲಿ ಸ್ಥಾನ ಗಟ್ಟಿ
ಇನ್ನೂ ಮುಖ್ಯವಾಗಿ ನಟಿ ರಶ್ಮಿಕಾ ಮಂದಣ್ಣಗೆ ಈ ಎರಡು ಸಿನಿಮಾಗಳು ಬಹುಮುಖ್ಯವಾದವುಗಳೇ ಆಗಿವೆ. ಪುಷ್ಪಾ ಮೊದಲ ಭಾಗದಲ್ಲಿ ನಟಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ 'ಸಾಮಿ ಸಾಮಿ' ಹಾಡಿನಲ್ಲಿ ಹೆಜ್ಜೆ ಹಾಕಿದ್ದು. ಅವರ ನೃತ್ಯ ಅಚ್ಚಳಿಯದೇ ಉಳಿದಿತ್ತು.
ಇದರ ಮುಂದುವರಿದ ಭಾಗದಲ್ಲಿ ತನ್ನನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ರಶ್ಮಿಕಾರಲ್ಲಿ ಇದೆ. ಅಲ್ಲದೇ ಹಿಂದಿಯಲ್ಲಿ ಅನಿಮಲ್ ನಂತರ ಮತ್ತೊಂದು ಸಿನಿಮಾ ತೆರೆಗೆ ಬರುತ್ತಿದೆ. ಬಾಲಿವುಡ್ ನಲ್ಲಿ ಸ್ಥಾನ ಗಟ್ಟಿಗೊಳಿಸಲು ಅದರಲ್ಲೂ ಐತಿಹಾಸಿಕ ಸಿನಿಮಾದಲ್ಲಿ ನಟಿಸಿ ಸಕ್ಸಸ್ ಆಗುವ ತವಕದಲ್ಲಿ ರಶ್ಮಿಕಾ ಇದ್ದಾರೆ. ಹೀಗಾಗಿ ಇವೆರಡು ಸಿನಿಮಾಗಳು ಅವರಿಗೆ ಅತೀ ಮುಖ್ಯವಾಗಿವೆ.

ಆಗಸ್ಟ್ 15ರಿಂದ ಸಿನಿಮಾ ಪ್ರಚಾರ
ಪುಷ್ಪ 2 ಸಿನಿಮಾ ಡಿಸೆಂಬರ್ 6ರಂದು ಬಿಡುಗಡೆ ನಿಶ್ಚಿತ ಎಂದು ಘೋಷಿಸಿದಾಗ 'ಛಾವಾ' ಸಿನಿಮಾ ಮುಂದೂಡಲಾಗುತ್ತದೆ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ ಐತಿಹಾಸಿಕ ಕತೆವುಳ್ಳ ಸಿನಿಮಾ ಛಾವಾ ಅದೇ ದಿನ (ಡಿಸೆಂಬರ್ 6) ಬಿಡುಗಡೆ ಆಗಲಿದೆ. ಈ ಸಂಬಂಧ ಆಗಸ್ಟ್ 15 ರಂದು ಸಿನಿಮಾ ತ್ರಂಡ ಛಾವಾ ಪ್ರಚಾರ ಆರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಛಾವಾ ಅನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿದ್ದು, ಮ್ಯಾಡಾಕ್ ಫಿಲ್ಮ್ಸ್ ಇದನ್ನು ನಿರ್ಮಿಸುತ್ತಿದೆ. ಪುಷ್ಪಾ 2 ಮತ್ತು ಛಾವಾ ಎರಡೂ ರಶ್ಮಿಕಾ ಮಂದಣ್ಣಗೆ ನಿರ್ಣಾಯಕವಾಗಿದೆ. ಡಿಸೆಂಬರ್ ನಲ್ಲಿ ರಶ್ಮಿಕಾರ ಎರಡು ಸಿನಿಮಾ ನೋಡಲು ಅವರ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಯಾವ ಸಿನಿಮಾ ಪ್ರೇಕ್ಷಕರ ಮನ ಗೆಲ್ಲಲಿದೆ ಎಂದು ತಿಳಿಯಲು ಡಿಸೆಂಬರ್ ವೇಳೆಗೆ ಕಾಯಲೇಬೇಕಿದೆ.












Click it and Unblock the Notifications