Rashmika Mandanna: ತುಂಬಾ ದಿನಗಳ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಮೊದಲ ಪೋಸ್ಟ್‌: ಕಾರಣ ತಿಳಿಸಿದ ನಟಿ ರಶ್ಮಿಕಾ ಮಂದಣ್ಣ

Rashmika Mandanna: ನ್ಯಾಷನಲ್ ಕ್ರಷ್‌ ಅಂತಲೇ ಹೆಸರುವಾಸಿ ಆಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರಲಿಲ್ಲ. ಇದೀಗ ಅವರೇ ಸ್ವತಃ ಇದಕ್ಕೆ ಕಾರಣ ಏನೆಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಅದರಲ್ಲೇನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕಳೆದ ತಿಂಗಳು ಅಪಘಾತ ಸಂಭವಿಸಿತ್ತು. ಈ ಹಿನ್ನೆಲೆ ವೈದ್ಯರು ರಶ್ಮಿಕಾ ಮಂದಣ್ಣಗೆ ಮನೆಯಲ್ಲೇ ವಿಶ್ರಾಂತಿ ಮಾಡುವುದಾಗಿ ಹೇಳಿದ್ದರು. ಆದ್ದರಿಂದ ಅವರು ಸಾಮಾಜಿಕ ಜಾಲತಾಣಗಲ್ಲಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ರಶ್ಮಿಕಾ ಮಂದಣ್ಣ ಇನ್ಸ್ಟಾದಲ್ಲಿ ಒಂದು ಪೋಸ್ಟರ್‌ ಹಂಚಿಕೊಂಡಿದ್ದು, ಇದು ಭಾರೀ ವೈರಲ್‌ ಆಗುತ್ತಿದೆ.

Actress Rashmika Mandanna shared first post on Instagram after many days Know details

ತಮಗೆ ಅಪಘಾತ ಆರುವ ಕುರಿತು ಇನ್‌ಸ್ಟಾ ಪೋಸ್ಟ್‌ ಮಾಡಿರುವ ನಟಿ ರಶ್ಮಿಕಾ ಮಂದಣ್ಣ, ಕಳೆದ ತಿಂಗಳು ನನಗೆ ಸಣ್ಣ ಅಪಘಾತವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ವೈದ್ಯರ ಸಲಹೆಯ ಮೇರೆಗೆ ಕಳೆದ ಒಂದು ತಿಂಗಳಿನಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಗಾಯದಿಂದ ಚೇತರಿಸಿಕೊಂಡಿದ್ದು, ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ವಿಶ್ರಾಂತಿ ತೆಗೆದುಕೊಂಡೆ. ಆದ್ದರಿಂದ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.

ನಾನು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ಯಾಕೆ ಅಂದರೆ, ನಾನು ಸಣ್ಣ ಅಪಘಾತಕ್ಕೆ ಒಳಗಾಗಿದೆ. ಆದ್ದರಿಂದ ವೈದ್ಯರ ಸಲಹೆಯ ಮೇರೆಗೆ ನಾನು ಮನೆಯಲ್ಲೇ ವಿಶ್ರಾಂತಿಯಲ್ಲಿದ್ದು ಚೇತರಿಸಿಕೊಂಡಿದ್ದೇನೆ. ಶೀಘ್ರದಲ್ಲೇ ಮತ್ತೆ ಸಕ್ರಿಯಳಾಗುತ್ತೇನೆ. ಜೀವನ ಅಮೂಲ್ಯವಾದುದು, ಜಾಗರೂಕರಾಗಿರಿ. ನಾಳೆ ಇರುತ್ತೋ ಇಲ್ಲವೋ ಗೊತ್ತಿಲ್ಲ, ಖುಷಿಯಾಗಿ ಪ್ರತಿದಿನ ಬಾಳಿ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇನ್ನು ದಿ ರೂಲ್ ಡಿಸೆಂಬರ್ 6ರಂದು ಬಿಡುಗಡೆ ಆಗಲಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಭಾರೀ ಭರವಸೆ ಇದೆ. ಧನುಷ್ ಮತ್ತು ನಾಗಾರ್ಜುನ ಮುಖ್ಯ ಭೂಮಿಕೆಯಲ್ಲಿರುವ ಕುಬೇರ ಚಿತ್ರದಲ್ಲಿಯೂ ರಶ್ಮಿಕಾ ನಾಯಕಿಯಾಗಿದ್ದಾರೆ. ಶೇಖರ್ ಕಮ್ಮುಲ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಾಯಕಿ ಪ್ರಧಾನ ದಿ ಗರ್ಲ್‌ಫ್ರೆಂಡ್ ಸಿನಿಮಾದಲ್ಲಿಯೂ ರಶ್ಮಿಕಾ ನಟನೆ ಮಾಡಿದ್ದಾರೆ.

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ಸಿಕಂದರ್ ಚಿತ್ರದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಜೊತೆ ಚಾವಾ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 6ಕ್ಕೆ ತೆರೆ ಕಾಣಲಿದೆ. ತೆಲುಗಿನ ರೇನ್‌ಬೋ ಸಿನಿಮಾದಲ್ಲೂ ರಶ್ಮಿಕಾ ಡಿಸಿದ್ದಾರೆ. ಒಟ್ಟಾರೆ ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+